Homeರಾಜ್ಯಆಂಧ್ರದಲ್ಲಿ ಹೆಚ್ಚಿದ ಕೋವಿಡ್‌ ಪ್ರಕರಣಗಳು, ಪಾವಗಡ ಗಡಿಯಲ್ಲಿ ಅಲರ್ಟ್

ಆಂಧ್ರದಲ್ಲಿ ಹೆಚ್ಚಿದ ಕೋವಿಡ್‌ ಪ್ರಕರಣಗಳು, ಪಾವಗಡ ಗಡಿಯಲ್ಲಿ ಅಲರ್ಟ್

Covid cases increase in Andhra, alert at Pavagadh border

ತುಮಕೂರು,ಜು.16- ಆಂಧ್ರಪ್ರದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲೆಯ ಪಾವಗಡ ತಾಲ್ಲೂಕಿನ ಗಡಿಭಾಗದಲ್ಲಿ ಕೋವಿಡ್‌ ತಪಾಸಣೆ ತೀವ್ರಗೊಳಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಕೋವಿಡ್‌ಗೆ ಇಬ್ಬರು ಬಲಿಯಾದ ಹಿನ್ನೆಲೆಯಲ್ಲಿ ಆಂಧ್ರ ಗಡಿಗೆ ಹೊಂದಿಕೊಂಡಂತಿರುವ ಪಾವಗಡದ ಹಲವು ಗ್ರಾಮಗಳಲ್ಲಿ ನಿಗಾ ವಹಿಸಲಾಗಿದ್ದು, ಆಂಗ್ಲದಿಂದ ಬರುವವರ ಆರೋಗ್ಯತಪಾಸಣೆ ನಡೆಸಲಾಗುತ್ತಿದೆ.

ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಾಜವಂತಿ, ನಾಗಲಮಡಿಕೆ, ಅರಸೀಕೆರೆ, ಟಿ.ಎನ್‌.ಪೇಟೆ ಗ್ರಾಮಗಳಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆದು ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಆಂಧ್ರದಿಂದ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳನ್ನು ತಡೆದು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ವಿಶೇಷವಾಗಿ ಜ್ವರದ ಲಕ್ಷಣ ಇದ್ದರೆ, ಹೆಚ್ಚಿನ ನಿಗಾ ವಹಿಸಲಾಗಿದೆ.

ಜ್ವರ ಕಂಡುಬಂದಲ್ಲಿ ಪ್ರಥಮ ಚಿಕಿತ್ಸೆಗಾಗಿ ಅಗತ್ಯವಿದ್ದಲ್ಲಿ ಪಾವಗಡದ ಜನರಲ್‌ ಆಸ್ಪತ್ರೆಗೆ ರೆಫರ್‌ ಮಾಡುವ ವ್ಯವಸ್ಥೆ ಕೂಡಾ ಮಾಡಲಾಗಿದೆ. ಈ ತಪಾಸಣಾ ಪ್ರಕ್ರಿಯೆಗೆ ಸಾರ್ವಜನಿಕರು ಪ್ರಯಾಣಿಕರ ಸಹಕಾರ ಮುಖ್ಯವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

RELATED ARTICLES

Latest News