ನ್ಯೂಯಾರ್ಕ್, ಜು. 16-ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್‌ಗೆ ವೇದಿಕೆ ಸಜ್ಜಾಗಿದ್ದು, ಹಾಲಿ ಚಾಂಪಿಯನ್ ಅರ್ಜೆಂಟೀನಾ ಮತ್ತು ಯುರೋಪಿಯನ್ ಚಾಂಪಿಯನ್ ಸ್ಪೇನ್ ಪ್ರಶಸ್ತಿಗಾಗಿ ಭಾನುವಾರ ಸೆಣಸಲಿವೆ. ನ್ಯೂಜೆರ್ಸಿಯ ಈಸ್ಟ್ ರುದರ್‌ಫೋರ್ಡ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ವಿಶ್ವಕಪ್ ಇತಿಹಾಸದ ಅಗ್ರ ಗೋಲು ಸ್ಕೋರರ್ ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ, ಅತ್ಯುತ್ತಮ ರಕ್ಷಣಾ ಆಟಕ್ಕೆ ಹೆಸರಾಗಿರುವ ಲಮೀನ್ ಯಮಾಲ್ ಅವರ ಸ್ಪೇನ್ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ಸ್ಪೇನ್ 2-0 ಗೋಲುಗಳಿಂದ ಫ್ರಾನ್ಸ್ ನ್ನು ಮಣಿಸಿದರೆ, ಅರ್ಜೆಂಟೀನಾ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳಿಂದ ರೋಚಕ ಪುನರಾಗಮನದ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿತ್ತು.
ಪ್ರಶಸ್ತಿಗಾಗಿ ಐತಿಹಾಸಿಕ ಪೈಪೋಟಿ
ಅರ್ಜೆಂಟೀನಾ ನಾಲ್ಕನೇ ವಿಶ್ವಕಪ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದು, 1958 ಮತ್ತು 1962ರಲ್ಲಿ ಬ್ರೆಜಿಲ್ ಸಾಧಿಸಿದ ಬಳಿಕ ಸತತ ಎರಡು ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಮೊದಲ ತಂಡವಾಗುವ ಗುರಿ ಹೊಂದಿದೆ.ಇತ್ತ ಸ್ಪೇನ್ 2010ರ ಬಳಿಕ ಎರಡನೇ ಬಾರಿ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸಿನಲ್ಲಿದೆ.
ದಾಳಿ ವಿರುದ್ಧ ರಕ್ಷಣೆಯ ಸೆಣಸಾಟ
ಈ ಟೂರ್ನಿಯಲ್ಲಿ ಅರ್ಜೆಂಟೀನಾ 19 ಗೋಲುಗಳನ್ನು ಗಳಿಸಿ ಅತಿ ಹೆಚ್ಚು ಗೋಲು ದಾಖಲಿಸಿದ ತಂಡವಾಗಿದೆ.ಮತ್ತೊಂದೆಡೆ, ಸ್ಪೇನ್ ಇಡೀ ಟೂರ್ನಿಯಲ್ಲಿ ಕೇವಲ ಒಂದು ಗೋಲು ಮಾತ್ರ ಬಿಟ್ಟುಕೊಟ್ಟು ಅತ್ಯುತ್ತಮ ರಕ್ಷಣಾ ತಂಡವಾಗಿ ಗುರುತಿಸಿಕೊಂಡಿದೆ.ಹೀಗಾಗಿ ಫೈನಲ್‌ನಲ್ಲಿ ಅರ್ಜೆಂಟೀನಾದ ಆಕ್ರಮಣಕಾರಿ ಆಟ ಮತ್ತು ಸ್ಪೇನ್‌ನ ಬಲಿಷ್ಠ ರಕ್ಷಣಾ ವಿಭಾಗದ ನಡುವಿನ ಸೆಣಸಾಟವೇ ಪ್ರಮುಖ ಆಕರ್ಷಣೆಯಾಗಿದೆ.
ಮೆಸ್ಸಿಯಮಾಲ್ ವಿಶೇಷ ಮುಖಾಮುಖಿ
ಈ ಫೈನಲ್ ಅನ್ನು ಫುಟ್‌ಬಾಲ್‌ನ ವರ್ತಮಾನ ಮತ್ತು ಭವಿಷ್ಯದ ನಡುವಿನ ಹಣಾಹಣಿ ಎಂದೇ ಬಣ್ಣಿಸಲಾಗುತ್ತಿದೆ.2007ರಲ್ಲಿ ಯುನಿಸೆಫ್ ಕಾರ್ಯಕ್ರಮವೊಂದರಲ್ಲಿ ಲಿಯೊನೆಲ್ ಮೆಸ್ಸಿ ಮಡಿಲಲ್ಲಿ ಮಗು ಆಗಿದ್ದ ಲಮೀನ್ ಯಮಾಲ್‌ನ ಫೋಟೋ ಜಾಗತಿಕವಾಗಿ ವೈರಲ್ ಆಗಿತ್ತು. ಇದೀಗ ಸುಮಾರು ಎರಡು ದಶಕಗಳ ಬಳಿಕ ವಿಶ್ವಕಪ್ ಫೈನಲ್‌ನಲ್ಲಿ ಇದೇ ಇಬ್ಬರು ಆಟಗಾರರು ಎದುರಾಳಿಗಳಾಗಿ ಕಣಕ್ಕಿಳಿಯುತ್ತಿರುವುದು ವಿಶೇಷವಾಗಿದೆ.ಮೆಸ್ಸಿ ಹಾಗೂ ಯಮಾಲ್ ಇಬ್ಬರೂ ಎಡಗಾಲಿನ ಆಟಗಾರರಾಗಿದ್ದು, ಸ್ಪೇನ್‌ನ ಬಾರ್ಸಿಲೋನಾ ಕ್ಲಬ್‌ನ ಪರ ಮಿಂಚಿದ್ದಾರೆ.
ಎರಡೂ ತಂಡಗಳ ವಿಶ್ವಕಪ್ ಪಯಣ
ಸ್ಪೇನ್
- ದಾಖಲೆ: 6 ಗೆಲುವು, 1 ಡ್ರಾ, ಸೋಲು ಇಲ್ಲ
- ಗಳಿಸಿದ ಗೋಲುಗಳು: 13
- ಬಿಟ್ಟುಕೊಟ್ಟ ಗೋಲು: 1
*ಗುಂಪು ಹಂತ:
- ಕೇಪ್ ವರ್ಡೆ ವಿರುದ್ಧ 0-0 ಡ್ರಾ
- ಸೌದಿ ಅರೇಬಿಯಾ ವಿರುದ್ಧ 4-0 ಜಯ
- ಉರುಗ್ವೆ ವಿರುದ್ಧ 1-0 ಜಯ
*ನಾಕ್‌ಔಟ್ ಹಂತ:
- ಆಸ್ಟ್ರಿಯಾ ವಿರುದ್ಧ 3-0
- ಪೋರ್ಚುಗಲ್ ವಿರುದ್ಧ 1-0
- ಬೆಲ್ಜಿಯಂ ವಿರುದ್ಧ 2-1
- ಫ್ರಾನ್ಸ್ ವಿರುದ್ಧ 2-0
**ಅರ್ಜೆಂಟೀನಾ:
- ದಾಖಲೆ: 7 ಪಂದ್ಯಗಳಲ್ಲಿ 7 ಗೆಲುವು
- ಗಳಿಸಿದ ಗೋಲುಗಳು: 19
- ಬಿಟ್ಟುಕೊಟ್ಟ ಗೋಲುಗಳು: 7
*ಗುಂಪು ಹಂತ:
- ಅಲ್ಜೀರಿಯಾ ವಿರುದ್ಧ 3-0
- ಆಸ್ಟ್ರಿಯಾ ವಿರುದ್ಧ 2-0
- ಜೋರ್ಡಾನ್ ವಿರುದ್ಧ 3-1
*ನಾಕ್‌ಔಟ್ ಹಂತ:
- ಕೇಪ್ ವರ್ಡೆ ವಿರುದ್ಧ 3-2
- ಈಜಿಪ್ಟ್ ವಿರುದ್ಧ 3-2
- ಸ್ವಿಟ್ಜರ್‌ಲೆಂಡ್ ವಿರುದ್ಧ 3-1
- ಇಂಗ್ಲೆಂಡ್ ವಿರುದ್ಧ 2-1 *ಅಜೇಯ ದಾಖಲೆ
ಸ್ಪೇನ್ ಕಳೆದ 37 ಪಂದ್ಯಗಳಿಂದ ಸೋಲಿಲ್ಲದೆ ಮುನ್ನಡೆಯುತ್ತಿದ್ದು, ಈ ಅವಧಿಯಲ್ಲಿ 28 ಪಂದ್ಯಗಳನ್ನು ಗೆದ್ದು 9 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 2024ರ ಮಾರ್ಚ್‌ನಲ್ಲಿ ಕೊಲಂಬಿಯಾ ವಿರುದ್ಧ ಸೋತ ಬಳಿಕ ಸ್ಪೇನ್ ಯಾವುದೇ ಪಂದ್ಯದಲ್ಲಿ ಸೋಲು ಕಂಡಿಲ್ಲ.
ಅರ್ಜೆಂಟೀನಾ ಕೂಡ ವಿಶ್ವಕಪ್‌ನಲ್ಲಿ ಕಳೆದ 13 ಪಂದ್ಯಗಳಿಂದ ಅಜೇಯವಾಗಿದ್ದು, 11 ಗೆಲುವು ಮತ್ತು 2 ಡ್ರಾ ದಾಖಲಿಸಿದೆ. 2022ರ ವಿಶ್ವಕಪ್‌ನಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತ ಬಳಿಕ ತಂಡ ಮತ್ತೆ ಸೋಲು ಕಂಡಿಲ್ಲ.
ಸ್ಪೇನ್ ಫೇವರಿಟ್
ಬೆಟ್ಟಿಂಗ್ ಸಂಸ್ಥೆಗಳ ಆರಂಭಿಕ ಲೆಕ್ಕಾಚಾರದಲ್ಲಿ ಸ್ಪೇನ್‌ಗೆ ಹೆಚ್ಚು ಅವಕಾಶ ನೀಡಲಾಗಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಪರಿಗಣಿಸಲಾಗಿದೆ. ಆದರೆ ಹಾಲಿ ಚಾಂಪಿಯನ್ ಅರ್ಜೆಂಟೀನಾದ ಅನುಭವ ಹಾಗೂ ಮೆಸ್ಸಿಯ ನಾಯಕತ್ವದಿಂದ ಫೈನಲ್ ರೋಚಕ ಹಣಾಹಣಿಯಾಗುವ ನಿರೀಕ್ಷೆಯಿದೆ.
