Homeರಾಜ್ಯಸಕಲ ಸರ್ಕಾರಿ ಗೌರವಗಳೊಂದಿಗೆ ಮಾವಿನಕೆರೆಯಲ್ಲಿ ನೆರವೇರಿದ ಚನ್ನಮ್ಮ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವಗಳೊಂದಿಗೆ ಮಾವಿನಕೆರೆಯಲ್ಲಿ ನೆರವೇರಿದ ಚನ್ನಮ್ಮ ಅಂತ್ಯಕ್ರಿಯೆ

Channamma Deve Gowda's funeral held in Mavinakere with full state honours

ಹಾಸನ,ಜು.20- ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ ದೇವೇಗೌಡ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ನೆರೆದಿದ್ದ ಅಪಾರ ಬಂಧು-ಬಳಗ, ಗಣ್ಯಾತಿಗಣ್ಯರ ಸಮುಖದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಚನ್ನಮ ಅವರ ಅಂತ್ಯಕ್ರಿಯೆ ನಡೆಸಲಾಯಿತು.

ಪಂಚಭೂತಗಳಲ್ಲಿ ಚನ್ನಮ ಅವರ ಪಾರ್ಥೀವ ಶರೀರ ಲೀನವಾಯಿತು. ಇದಕ್ಕೂ ಮುನ್ನ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಂತಿಮ ಗೌರವ ಸಲ್ಲಿಸಿದರು. ಪಾರ್ಥೀವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ದೇವೇಗೌಡರ ಕುಟುಂಬಕ್ಕೆ ಹಸ್ತಾಂತರಿಸಿದರು.

ಮೇಲುಕೋಟೆಯ ಪುರೋಹಿತರಾದ ಕಣ್ಣನ್‌ಸ್ವಾಮಿ ಅವರು ಅಂತ್ಯಕ್ರಿಯೆಯ ವಿಧಿ-ವಿಧಾನಗಳನ್ನು ಶಾಸೊ್ತ್ರೕಕ್ತವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಪುತ್ರರಾದ ಕೇಂದ್ರ ಸಚಿವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಹೆಚ್‌.ಡಿ.ಬಾಲಕೃಷ್ಣೇಗೌಡ, ಡಾ.ಹೆಚ್‌.ಡಿ.ರಮೇಶ್‌, ಪುತ್ರಿಯರಾದ ಅನುಸೂಯ, ಶೈಲಜಾ, ಅಳಿಯಂದಿರಾದ ಸಂಸದ ಡಾ.ಸಿ.ಎನ್‌.ಮಂಜುನಾಥ್‌, ಡಾ.ಚಂದ್ರಶೇಖರ್‌ ಸೇರಿದಂತೆ ಸೊಸೆಯಂದಿರು, ಮೊಮಕ್ಕಳು ಅಂತಿಮ ವಿಧಿ-ವಿಧಾನಗಳಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ದೇವೇಗೌಡರು, ರೇವಣ್ಣ, ಕುಮಾರಸ್ವಾಮಿ ಮೊದಲಾದ ಕುಟುಂಬಸ್ಥರು ಚನ್ನಮ ಅವರ ಅಗಲಿಕೆಯ ದುಃಖ ತಾಳಲಾರದೇ ಕಂಬನಿ ಮಿಡಿದರು.ಅಂತ್ಯಕ್ರಿಯೆ ಸಂದರ್ಭದಲ್ಲಿ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಐ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತಸ್ವಾಮೀಜಿ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ವಿ ಸೋಮಣ್ಣ, ಶಿವರಾಜ್‌ ಸಿಂಗ್‌ ಚೌವ್ಹಾಣ್‌, ಸಭಾಪತಿ ಬಸವರಾಜ್‌ ಹೊರಟಿ, ಸಚಿವರಾದ ಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಬಸವರಾಜ ಬೊಮಾಯಿ, ಸಂಸದರಾದ ಗೋವಿಂದ್‌ ಕಾರಜೋಳ್‌ , ಸುಧಾಕರ್‌ , ಶ್ರೇಯಸ್‌‍ ಪಟೇಲ್‌‍, ಬಿ.ವೈ. ರಾಘವೇಂದ್ರ, ಮಲ್ಲೇಶ್‌ ಬಾಬು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಚಲುವರಾಯಸ್ವಾಮಿ, ಎಚ್‌.ಕೆ.ಕುಮಾರಸ್ವಾಮಿ, ಬಂಡೆಪ್ಪ ಕಾಶಂಪೂರ್‌, ಸಿ.ಎಸ್‌‍.ಪುಟ್ಟರಾಜು, ರೋಷನ್‌ ಬೇಗ್‌, ಎ.ಮಂಜು, ಸ್ವರೂಪ್‌ ಪ್ರಕಾಶ್‌, ಸಿ.ಎನ್‌.ಬಾಲಕೃಷ್ಣ, ಟಿ.ಎ.ಶರವಣ, ಮಾಜಿ ಸಚಿವರಾದ ವೈಎಸ್‌‍ವಿ ದತ್ತ ಸೇರಿದಂತೆ ಶಾಸಕರು, ವಿವಿಧ ಪಕ್ಷಗಳ ನಾಯಕರು ಉಪಸ್ಥಿತರಿದ್ದು, ಚನ್ನಮ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ನೆರೆದಿದ್ದ ಅಪಾರ ಜನಸ್ತೋಮದ ಅಶ್ರುತರ್ಪಣದ ನಡುವೆ ಚನ್ನಮ ಅವರಿಗೆ ಅಂತಿಮ ವಿದಾಯ ಹೇಳಲಾಯಿತು. ಶನಿವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಚನ್ನಮ ಅವರ ಪಾರ್ಥೀವ ಶರೀರವನ್ನು ಅಂದು ರಾತ್ರಿ ಪದನಾಭನಗರದ ನಿವಾಸಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶನಿವಾರ ರಾತ್ರಿಯಿಂದ ನಿನ್ನೆ ಮಧ್ಯಾಹ್ನದವರೆಗೂ ಗಣ್ಯರು, ಸಾರ್ವಜನಿಕರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ನಿನ್ನೆ ಮಧ್ಯಾಹ್ನ ಬೆಂಗಳೂರಿನಿಂದ ಹಾಸನದ ಕಡೆಗೆ ವಾಹನದಲ್ಲಿ ಚನ್ನಮ ಅವರ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಯಿತು. ಮಾರ್ಗದ ಹಲವೆಡೆ ಜನರು ಅಂತಿಮ ದರ್ಶನ ಪಡೆದರು. ಹಾಸನ ನಗರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇಂದು ಮುಂಜಾನೆ 5 ಗಂಟೆ ವೇಳೆಗೆ ಹೊಳೆನರಸೀಪುರದ ರೇವಣ್ಣ ಅವರ ನಿವಾಸಕ್ಕೆ ಪಾರ್ಥೀವ ಶರೀರವನ್ನು ತಂದು ಮಧ್ಯಾಹ್ನದವರೆಗೂ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.

ಅಂತಿಮ ದರ್ಶನ ಪಡೆದ ಗಣ್ಯರು, ವಿವಿಧ ರಾಜಕೀಯ ಪಕ್ಷದ ನಾಯಕರು, ಮುಖಂಡರು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಅಭಿಮಾನಿಗಳು, ಬಂಧು-ಬಳಗದವರು ಚನ್ನಮ ಅವರ ಆತಿಥ್ಯ, ಸತ್ಕಾರವನ್ನು ಮುಕ್ತಕಂಠದಿಂದ ಪ್ರಶಂಸಿಸಿ ಸಂತಾಪ ಸೂಚಿಸಿದರು.

RELATED ARTICLES

Latest News