Homeರಾಜ್ಯಮದ್ಯದಂಗಡಿ ಮೇಲೆ ಚಿರತೆ ದಾಳಿ, ದಿಕ್ಕಾಪಾಲಗಿ ಓಡಿದ ಅಮಲಿನಲ್ಲಿದ್ದರು ಕುಡುಕರು

ಮದ್ಯದಂಗಡಿ ಮೇಲೆ ಚಿರತೆ ದಾಳಿ, ದಿಕ್ಕಾಪಾಲಗಿ ಓಡಿದ ಅಮಲಿನಲ್ಲಿದ್ದರು ಕುಡುಕರು

Leopard attacks liquor shop,

ಜೈಪುರ,ಜು.20- ಮದ್ಯದಂಗಡಿ ಮೇಲೆ ಚಿರತೆ ದಾಳಿ ಮಾಡಿ ಅಮಲಿನಲ್ಲಿದ್ದರು ದಿಕ್ಕಾಪಾಲಗಿ ಓಡಿದ ಘಟನೆ ರಾಜಸ್ಥಾನದ ಟೋಂಕ್‌ ಜಿಲ್ಲೆಯಲ್ಲಿ ನಡೆದಿದೆ.ಚಿರತೆ ದಾಳಿ ನಡೆಸಿದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

ಟೋಡಾರೈಸಿಂಗ್‌ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಅಂಗಡಿಯ ಹೊರಗಿದ್ದ ವ್ಯಕ್ತಿಯೊಬ್ಬನ ಮೇಲೆ ಮೊದಲು ಚಿರತೆ ದಾಳಿ ನಡೆಸಿದೆ. ಬಳಿಕ ಅಂಗಡಿಯೊಳಗೆ ನುಗ್ಗಿದ ಚಿರತೆ ಅಲ್ಲಿದ್ದ ಮಾರಾಟಗಾರನ ಮೇಲೂ ದಾಳಿ ಮಾಡಿದೆ.ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸಿದರು.
ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಹಿಡಿಯುವ ವಿಶೇಷ ತಂಡವನ್ನೂ ಸ್ಥಳಕ್ಕೆ ಕಳುಹಿಸಲಾಗಿದೆ.

ಘಟನೆಯಿಂದ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮದ್ಯದ ಅಂಗಡಿ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು.ಚಿರತೆಯ ದಾಳಿಯ ಸಂಪೂರ್ಣ ದೃಶ್ಯಾವಳಿ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಣ್ಣೆ ಓಡೆಯೊರು ಚಿರತೆ ನೋಡಿ ಬಿಲ್‌ ಕಟ್ಟ್ದೇ ಪರಾರಿಯಾಗಿದ್ದಾರೆ.ಚಿರತೆಯ ಅಕ್ರಮಣದಿಂದ ಮದ್ಯದ ನಶೆಯಲ್ಲಿದ್ದಚರು ದಿಕ್ಕಾಪಾಲಾಗಿ ಓಡಿದ್ದಾರೆ.

RELATED ARTICLES

Latest News