ದೇವಸ್ಥಾನಕ್ಕೆ ತೆರಳಿದ್ದ ಯುವಕನ್ನು ಕೊಂದುಹಾಕಿದ ಚಿರತೆ

ತಿ.ನರಸೀಪುರ. ನ.01 -ದೇವಸ್ಥಾನಕ್ಕೆ ತೆರಳಿದ್ದ ಯುವಕನೊಬ್ಬನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ತಾಲೂಕಿನ ಉಕ್ಕಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಂಭವಿಸಿದೆ. ತಾಲೂಕಿನ ಎಂ.ಎಲ್ .ಹುಂಡಿ ಗ್ರಾಮದ ಚನ್ನ ಮಲ್ಲದೇವರು ಎಂಬುವರ ಪುತ್ರ ಮಂಜುನಾಥ್ (22)ಎಂಬಾತನೇ ಚಿರತೆ ದಾಳಿಗೆ ಬಲಿಯಾದ ಯುವಕನಾಗಿದ್ದು, ಈತ ಮೈಸೂರಿನ ಕಾಲೇಜೊಂದರಲ್ಲಿ ಬಿ.ಕಾಂ.ವ್ಯಾಸಾಂಗ ಮಾಡುತ್ತಿದ್ದ. ಯುವಕನ ಮೇಲೆ ಚಿರತೆ ದಾಳಿ ಮಾಡಿರುವುದನ್ನು ಕಂಡು ಓಡಿಸಲು ಪ್ರಯತ್ನಮಾಡಿದರಾದರೂ ರಕ್ಷಿಸಲು ಸಾಧ್ಯವಾಗಲಿಲ್ಲ ಯುವಕನನ್ನು ಹೊತ್ತೊಯ್ದು ಬೆಟ್ಟದ ಮೇಲಿನ […]