ಆಹಮದಾಬಾದ್, ಮೇ.31- ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಇಂದು ನಡೆಯುವ ಐಪಿಎಲ್ ಫೈನಲ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.ಪ್ರಿನ್‌್ಸ ಗಿಲ್ ಮತ್ತು ಕಿಂಗ್ ಕೊಯ್ಲಿ ನಡುವೆ ಕಾವೇರುವ ಕಾಳಗ ರೋಚಕ ಕ್ಷಣಕ್ಕಾಗಿ ಕೋಟ್ಯಾಂತರ ಜನರು ಕಾತರದಿಂದ ಕಾಯುತ್ತಿದ್ದಾರೆ.
ವಿಶ್ವದ ಅತಿ ದೊಡ್ಡ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಪ್ 2 ತಂಡ ಟ್ರೋಫಿ ಗೆಲ್ಲಲು ಹಾತೊರೆಯುತ್ತಿವೆ. ಒಂದು ಲಕ್ಷ ಪ್ರೇಕ್ಷಕರ ನಡುವೆ ನಡೆಯುತ್ತಿರುವ ಫೈನಲ್ ಪಂದ್ಯ ಹೊಸ ದಾಖಲೆ ಬರೆಯಲಿದೆ.ಈ ಬಾರೀ ಕಪ್ ನಮ್ದೇ ಎಂಬ ಆರ್‌ಸಿಬಿ ಅಭಿಯಾನ ಜೋರಾಗುತ್ತಿದೆ. ಚಾಂಪಿಯನ್ ಪಟ್ಟ ನಮಗೆ ಎಂದು ಗಟ್ಟಿ ದನಿ ಮೊಳಗಿದೆ.
ಎರಡೂ ತಂಡಗಳು ಬಲಿಷ್ಠವಾಗಿದ್ದರೂ ಪಂದ್ಯದ ವೇಳೆ ಆಟಗಾರರು ಒತ್ತಡ ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಗೆಲುವು -ಸೋಲು ಅವಲಂಬಿತವಾಗಿದೆ.
ಪ್ರಸಕ್ತ ಪಂದ್ಯಾವಳಿಯಲ್ಲಿ ಆರ್‌ಸಿಬಿ ಪರವಾಗಿ ಅತೀ ಗೆಚ್ಚು ರನ್‌ಗಳಿಸಿರುವ ವಿರಾಟ್‌ಕೊಹ್ಲಿ (600),ಇವರಿಗೆ ಸಾಥ್ ನೀಡಿರುವ ಅದೃಷ್ಟದ ನಾಯಕ ರಜತ್ ಪಾಟೀದಾರ್ (486) ಕೂಡ ಲಯಕ್ಕೆ ಬಂದಿದ್ದು, ಫೈನಲ್ ಪಂದ್ಯದಲ್ಲೇ ಮತ್ತೇ ಅದೇ ಪ್ರದರ್ಶನ ನೀಡಿದರೆ ಖಂಡಿತ ಆರ್‌ಸಿಬಿ ಗೆಲ್ಲುವುದರಲ್ಲಿ ಅನುಮಾನವಿಲ್ಲ.
ಮೋದಿ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಆರಂಭಗೊಳ್ಳಲಿರುವ ಫೈನಲ್ ಪಂದ್ಯದ ಟಾಸ್ ಕೂಡಾ ನಿರ್ಣಾಯಕವಾಗಲಿದ್ದು, ಗುಜರಾತ್‌ನ ಟೈಟಾನ್ಸ್ ಸ್ವಂತ ನೆಲದಲ್ಲಿ ಹೆಚ್ಚಿನ ಆತವಿಶ್ವಾಸ ಮತ್ತು ಒತ್ತಡ ಇರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆರಂಭಿಕ ಬ್ಯಾಟರ್‌ಗಳಾದ ಗಿಲ್ ಮತ್ತು ಸಾಯಿಸುದರ್ಶನ್ ಅವರ ಆಟ ಇನ್ನೂ ಪ್ರಮುಖವಾಗಿದ್ದು, ಇದ್ದ ಆರ್‌ಸಿಬಿಯಲ್ಲೂ ವೆಂಕಟೇಶ್ ಅಯ್ಯರ್ ಕೊಹ್ಲಿ ನಡುವಿನ ಸ್ಫೋಟಕ ಬ್ಯಾಟಿಂಗ್ ನಿರೀಕ್ಷಿಸಲಾಗಿದೆ. ಬೌಲಿಂಗ್‌ನಲ್ಲಿ ಆರ್‌ಸಿಬಿಯ ಭುವನೇಶ್ವರ್ ಕುಮಾರ್ ಅವರ ಸ್ವಿಂಗ್ ಮತ್ತು ಗುಜರಾತ್ ಟೈಟಾನ್‌್ಸನ ರಬಾಡ ಅವರ ವೇಗ ಎಲ್ಲರನ್ನೂ ಚಕಿತಗೊಳಿಸುವುದರಲ್ಲಿ ಎರಡು ಮಾತಿಲ್ಲ. ಇನ್ನೂ ಆರ್‌ಸಿಬಿ ಬತ್ತಳಿಕೆಯಲ್ಲಿರುವ ಜೋಷ್ ಹ್ಯಾಸಲ್‌ವುಡ್, ಯುವ ವೇಗಿ ರಸಿಕ್ ದಾರ್, ಶಫರ್ಡ್ ಅವರು ಮತ್ತೆ ಮಿಂಚಬೇಕಿದೆ.
ಜಿಟಿಯಲ್ಲಿರುವ ಓಲ್ಡರ್ ಮತ್ತು ರಶೀದ್‌ಖಾನ್, ಮೊಹಮದ್ ಸಿರಾಜ್ ಅವರು ಯಾವಾಗ ಪುಟಿದೇಳಲಿದ್ದಾರೆಂಬುದು ಹೇಳಲು ಸಾಧ್ಯವಿಲ್ಲ. ಇನ್ನೂ ಸ್ಫೋಟಕ ಬ್ಯಾಟ್‌್ಸಮೆನ್ ಬಟ್ಲರ್ ಕೂಡಾ ಫಾರ್ಮ್‌ಗೆ ಮರಳುವ ಲಕ್ಷಣ ತೋರಿದ್ದಾರೆ. ಬಲಿಷ್ಠ ಬ್ಯಾಂಟಿಂಗ್ ಬಲ ಹೊಂದಿರುವ ಆರ್‌ಸಿಬಿಯಲ್ಲಿ ಪ್ರತಿಯೊಬ್ಬರು ಗೆಲುವಿಗೆ ಕಾಣಿಕೆ ನೀಡಬೇಕಾದ ಒತ್ತಡವಿದೆ.
ಕನ್ನಡಿಗ ದೇವದತ್ ಪಡಿಕ್ಕಲ್ ಮತ್ತು ಜುಹೇಲ್ ಅವರು ತಮ ನೈಜ ಸ್ಫೋಟಕ ಆಟವನ್ನು ಪ್ರದರ್ಶಿಸಿದರೆ, ಸಾಲ್‌್ಟ ಮತ್ತೆ ತಂಡಕ್ಕೆ ಮರಳಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ. ಯಾರೇ ಪ್ರಶಸ್ತಿ ಗಳಿಸಿದ್ದರೂ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆಗಲಿದ್ದಾರೆ. ಹಾಲಿ ಪಂದ್ಯಾವಳಿಯಲ್ಲಿ ಆರ್‌ಸಿಬಿ ಮತ್ತು ಗುಜರಾತ್ ನಡುವ 3 ಪಂದ್ಯಗಳು ನಡೆದಿದ್ದು, ಅದರಟಲ್ಲಿ ಆರ್‌ಸಿಬಿ (2-1) ಮೇಲುಗೈ ಸಾಧಿಸಿದೆ.
ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸುವ ಬ್ಯಾಟ್‌ಮೆನ್ ಮತ್ತು ಅತೀ ಹೆಚ್ಚು ವಿಕೆಟ್ ಪಡೆಯುವ ಬೌಲರ್‌ಗಳಿಗೆ ನೀಡುವ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಎರಡು ತಂಡಗಳಿಗೆ ಒಲಿಸಿಕೊಳ್ಳುವ ಅವಕಾಶವಿದೆ.ಆರೆಂಜ್ ಕ್ಯಾಪ್‌ಗೆ ಸದ್ಯ ರಾಜಸ್ಥಾನ್ ರಾಯಲ್‌್ಸನ ಕ್ರಿಕೆಟ್ ಬೇಬಿ ಸೂರ್ಯವಂಶಿ (776) ಬಳಿಯಿದ್ದು, ಇದನ್ನು ಮುರಿಯುವ ಸಾಯಿಸುದರ್ಶನ್‌ಗೆ ಅವಕಾಶವಿದೆ. ಇನ್ನೂ ಪರ್ಪಲ್ ಕ್ಯಾಪ್‌ಗಾಗಿ ಭುವನೇಶ್ವರ್ ಮತ್ತು ರಬಾಡ ನಡುವೆ ಪೈಫೋಟಿ ಇದೆ.
ಪ್ರಸ್ತುತ ಒಳ್ಳೆಯ ಪ್ರದರ್ಶನ ನೀಡಿರುವ ಆರ್‌ಸಿಬಿ ಮತ್ತೊಮೆ ಪ್ರಶಸ್ತಿ ಗೆದ್ದು ಬೀಗಲಿದೆ ಎಂದು ಹೇಳಲಾಗುತ್ತಿದೆ. ಕ್ರಿಕೆಟ್ ಪಂಡಿತರು ಕೂಡ ಆರ್‌ಸಿಬಿ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳುತ್ತಿದ್ದಾರೆ.ಒಟ್ಟಾರೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೋಟ್ಯಂತರ ಮಂದಿ ಈ ರೋಚಕ ಪಂದ್ಯವನ್ನು ಎದುರು ನೋಡುತ್ತಿದ್ದಾರೆ. ಸಂಭ್ರಾಮಾಚರಣೆಗ ಪೊಲೀಸರು ಬ್ರೇಕ್ ಹಾಕಿದ್ದರೂ ಕೂಡ ಕ್ರಿಕೆಟ್ ಅಭಿಮಾನಿಗಳ ಪರಾಕಾಷ್ಟೆ ಮೀರಬಾರದು.
