ಬೆಂಗಳೂರು,ಜು.21- ನಿಷೇಧಿತ ಅಂತಾರಾಷ್ಟ್ರೀಯ ಭಯೋತ್ಪಾದಕ ಗುಂಪು ಐಸಿಸ್‌ಗೆ ಯುವಕರನ್ನು ಮೂಲ ಭೂತವಾದಿಗಳನ್ನಾಗಿ ಮಾಡುವ ಪ್ರಕರಣದಲ್ಲಿ ಆಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಇಂದು ಕರ್ನಾಟಕದ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಸುಮಾರು ಎಂಟು ಆಯಕಟ್ಟಿನ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ತೀವ್ರ ಶೋಧ ಕೈಗೊಂಡಿದೆ.ರಾಷ್ಟ್ರೀಯ ತನಿಖಾ ಸಂಸ್ಥೆ ದಾಖಲಿಸಿಕೊಂಡಿದ್ದ ಎಫ್‌ಐಆರ್ ಹಾಗೂ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಯ ಆಧಾರದ ಮೇಲೆ ಇ.ಡಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಪ್ರಕಾರ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಕ್ರಾ ವೆಲ್ಫೇರ್ ಟ್ರಸ್ಟ್, ಗೈಡೆನ್ಸ್ ಫಾರ್ ಮ್ಯಾನ್‌ಕೈಂಡ್ ಮತ್ತು ಕೆಲವು ವ್ಯಕ್ತಿಗಳನ್ನು ಒಳಗೊಂಡ ಐಸಿಸ್ ನೇಮಕಾತಿಗೆ ಸಂಬಂಧಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಎಫ್‌ಐಆರ್‌ನಿಂದ ತನಿಖೆ ನಡೆಯುತ್ತಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್/ಐಎಸ್‌ಐಎಲ್/ಡೇಶ್‌ನೊಂದಿಗೆ ಸಂಬಂಧ ಹೊಂದಿರುವ ಆರೋಪಿಗಳು ಬೆಂಗಳೂರಿನ ಪ್ರಭಾವಶಾಲಿ ಮುಸ್ಲಿಂ ಯುವಕರನ್ನು ಐಸಿಸ್‌ಗೆ ಸೇರಲು ಮಲಭೂತವಾದಿಗಳನ್ನಾಗಿ ಮಾಡಲು ಮತ್ತು ಪ್ರೇರೇಪಿಸಲು ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಎನ್‌ಐಎ ಐದು ಜನರ ಮೇಲೆ ಆರೋಪಪಟ್ಟಿ ಸಲ್ಲಿಸಿದೆ.
ಹಿಂದಿನ ಪ್ರಕರಣದ ಹಿನ್ನೆಲೆ: ಆರೋಪಿಗಳು ಇಕ್ರಾ ವೆಲ್ಫೇರ್ ಟ್ರಸ್ಟ್ ಮತ್ತು ಗೈಡೆನ್‌್ಸ ಫಾರ್ ಮ್ಯಾನ್‌ಕೈಂಡ್ ಎಂಬ ಸಂಸ್ಥೆಗಳ ಮೂಲಕ ಇಕ್ರಾ ಕ್ಯಾಂಪ್ ಹೆಸರಿನ ಮುಸ್ಲಿಂ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದರು. ಈ ಕಾರ್ಯಾಗಾರಗಳ ಮೂಲಕ ಬೆಂಗಳೂರಿನ ಪ್ರಭಾವಶಾಲಿ ಯುವಕರನ್ನು ಗುರುತಿಸಿ, ನಂತರ ೞಕುರಾನ್ ಸರ್ಕಲ್ ಎಂಬ ಸಾಪ್ತಾಹಿಕ ಅಧ್ಯಯನ ವಲಯದ ಮೂಲಕ ಅವರಲ್ಲಿ ಮೂಲಭೂತವಾದಿ ಆಲೋಚನೆಗಳನ್ನು ತುಂಬಲಾಗುತ್ತಿತ್ತು.
ದೇಶದಲ್ಲಿ ನಡೆದ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿದ್ದ ಕೋಮು ಭಾವನೆಗಳನ್ನು ಬಂಡವಾಳ ಮಾಡಿಕೊಂಡ ಈ ಗುಂಪು, ಮುಸ್ಲಿಂ ಯುವಕರನ್ನು ಇತರ ಸಮುದಾಯಗಳ ವಿರುದ್ಧ ಪ್ರಚೋದಿಸಲು ಯತ್ನಿಸಿತ್ತು. ಜೊತೆಗೆ, ಸುರಕ್ಷಿತ ಸಾಮಾಜಿಕ ಜಾಲತಾಣಗಳ ಮೂಲಕ ಐಸಿಸ್ ಸಿದ್ಧಾಂತವನ್ನು ಪಸರಿಸುತ್ತಿತ್ತು.
ಸಿರಿಯಾ ಪ್ರವೇಶ ಮತ್ತು ಯುದ್ಧ ತರಬೇತಿ: ಮೂಲಭೂತವಾದಕ್ಕೆ ಒಳಗಾದ ಯುವಕರನ್ನು ಟರ್ಕಿ ಮಾರ್ಗವಾಗಿ ಅಕ್ರಮವಾಗಿ ಸಿರಿಯಾಕ್ಕೆ ಕಳುಹಿಸಿ, ಭಾರತದ ಮಿತ್ರ ರಾಷ್ಟ್ರವಾದ ಸಿರಿಯಾ ಸರ್ಕಾರದ ವಿರುದ್ಧ ಯುದ್ಧ ಮಾಡಲು ಪ್ರೇರೇಪಿಸಲಾಗುತ್ತಿತ್ತು.
ಅಕ್ರಮ ಹಣಕಾಸು ಜಾಲದ ಮೇಲೆ ಇ.ಡಿ ಕಣ್ಣು:
ಐಸಿಸ್ ಸಿದ್ಧಾಂತ ಪಸರಿಸುವುದು ಮಾತ್ರವಲ್ಲದೆ, ಯುವಕರನ್ನು ವಿದೇಶಕ್ಕೆ ಕಳುಹಿಸಲು ಬೃಹತ್ ಮಟ್ಟದ ಹಣದ ವಹಿವಾಟು ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ವಿವಿಧ ವ್ಯಕ್ತಿಗಳಿಂದ, ಟ್ರಸ್ಟ್‌ಗಳಿಂದ ಹಾಗೂ ತಮ ಸ್ವಂತ ಉಳಿತಾಯದ ಹಣವನ್ನು ಸಂಗ್ರಹಿಸಿ ಐಸಿಸ್ ಜಾಲಕ್ಕೆ ಹರಿಬಿಡುತ್ತಿದ್ದರು. ಈ ಕೃತ್ಯಗಳನ್ನು ಎನ್‌ಐಎ ಆರೋಪಪಟ್ಟಿಯಲ್ಲಿ ಭಾರತ ಸರ್ಕಾರದ ಜೊತೆ ಮೈತ್ರಿ ಮಾಡಿಕೊಂಡಿರುವ ಏಷ್ಯಾದ ಶಕ್ತಿ ಸಿರಿಯಾ ವಿರುದ್ಧ ಯುದ್ಧ ಸಾರುವುದು ಎಂದು ಉಲ್ಲೇಖಿಸಲಾಗಿದೆ.
ಈ ಗುಂಪು ಸಿಎಎ/ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳ ಸುತ್ತಲಿನ ಭಾವನೆಗಳನ್ನು ಬಳಸಿಕೊಂಡು ಮುಸ್ಲಿಮರನ್ನು ಮುಸ್ಲಿಮೇತರರ ವಿರುದ್ಧ ಪ್ರಚೋದಿಸಲು ಮತ್ತು ಸುರಕ್ಷಿತ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಐಸಿಸ್ ಸಿದ್ಧಾಂತವನ್ನು ಹರಡಲು ಬಳಸಿಕೊಂಡಿದೆ. ಐಸಿಸ್‌ಗಾಗಿ ಹೋರಾಡಲು ಮುಸ್ಲಿಂ ಯುವಕರ ಅಕ್ರಮ ಪ್ರಯಾಣಕ್ಕೆ ಅನುಕೂಲವಾಗುವಂತೆ ಆರೋಪಿಗಳು, ವ್ಯಕ್ತಿಗಳು, ಟ್ರಸ್ಟ್ ಮತ್ತು ಅವರ ಉಳಿತಾಯದಿಂದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಇ.ಡಿ ಹೇಳಿದೆ.
ಈ ಅಕ್ರಮ ಹಣದ ಮೂಲ, ಡಿಜಿಟಲ್ ಸಾಕ್ಷ್ಯಾಧಾರಗಳು, ಬ್ಯಾಂಕ್ ಖಾತೆಗಳ ವಿವರ ಹಾಗೂ ಈ ಟ್ರಸ್ಟ್‌ಗಳಿಗೆ ವಿದೇಶಗಳಿಂದ ಹಣ ಹರಿದುಬಂದಿದೆಯೇ ಎಂಬುದನ್ನು ಪತ್ತೆಹಚ್ಚಲು ಇಡಿ ಅಧಿಕಾರಿಗಳು ಪ್ರಸ್ತುತ ಶೋಧ ಕಾರ್ಯ ನಡೆಸುತ್ತಿದ್ದಾರೆ.
ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡುತ್ತಿರುವ ಜಾಗತಿಕ ಭಯೋತ್ಪಾದನಾ ಜಾಲಗಳು ಸಾಂಪ್ರದಾಯಿಕ ವಿಧಾನಗಳನ್ನು ಬಿಟ್ಟು, ಎನ್‌ಜಿಒಗಳು, ಚಾರಿಟೇಬಲ್ ಟ್ರಸ್ಟ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮುಖವಾಡ ಧರಿಸಿ ಕಾರ್ಯನಿರ್ವಹಿಸುತ್ತಿರುವುದು ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿದೆ.
ಬೆಂಗಳೂರಿನಂತಹ ತಂತ್ರಜ್ಞಾನ ನಗರಿಯ ಯುವಕರನ್ನೇ ಗುರಿಯಾಗಿಸಿಕೊಂಡು ನಡೆದ ಈ ಜಾಲದ ಹಣಕಾಸಿನ ಮುಖವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಇಡಿ ಪ್ರಸ್ತುತ ರಂಗಕ್ಕಿಳಿದಿದ್ದು, ಇಂದಿನ ಶೋಧ ಕಾರ್ಯದಲ್ಲಿ ಹಲವು ಮುಖ್ಯ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳು ವಶಕ್ಕೆ ಸಿಗುವ ಸಾಧ್ಯತೆಯಿದೆ.
