ಪ್ಯಾರಿಸ್, ಜುಲೈ 21-ದೇಶದಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸುವ ಮಹತ್ವದ ಮಸೂದೆಯನ್ನು ಫ್ರಾನ್‌್ಸ ಸಂಸತ್ತು ಅಂಗೀಕರಿಸಿದೆ. ಈ ಮೂಲಕ ಇಂತಹ ಸಮಗ್ರ ನಿಷೇಧವನ್ನು ಅನುಮೋದಿಸಿದ ಯುರೋಪಿಯನ್ ಒಕ್ಕೂಟದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಫ್ರಾನ್‌್ಸ ಪಾತ್ರವಾಗಿದೆ.
ಫ್ರಾನ್‌್ಸಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಎರಡನೇ ಅವಧಿಯ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿರುವ ಈ ಮಸೂದೆಗೆ ಸಂಸತ್ತಿನ ಉಭಯ ಸದನಗಳು ಅನುಮೋದನೆ ನೀಡಿವೆ. ಇದೇ ವೇಳೆ ಪ್ರೌಢಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನೂ ನಿಷೇಧಿಸುವ ಪ್ರಾವಧಾನವನ್ನು ಮಸೂದೆ ಒಳಗೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಗೆ ತಲುಪುವ ಹಾನಿಕಾರಕ ವಿಷಯಗಳು ಅವರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂಬ ಆತಂಕ ವಿಶ್ವದಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಫ್ರಾನ್‌್ಸನಲ್ಲಿ ಹಲವು ಕುಟುಂಬಗಳು, ಹಾನಿಕಾರಕ ವಿಷಯಗಳ ಪರಿಣಾಮವಾಗಿ ತಮ ಮಕ್ಕಳು ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಟಿಕ್‌ಟಾಕ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಹೋರಾಟಗಾರರು ಮತ್ತು ಪೋಷಕರು ಮಸೂದೆ ಅಂಗೀಕಾರವನ್ನು ಸ್ವಾಗತಿಸಿದ್ದಾರೆ.
ಈ ಕಾನೂನನ್ನು ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ಹೊಸ ಶೈಕ್ಷಣಿಕ ವರ್ಷದ ಆರಂಭದಿಂದಲೇ ಜಾರಿಗೆ ತರಲು ಅಧ್ಯಕ್ಷ ಮ್ಯಾಕ್ರೋನ್ ಉದ್ದೇಶಿಸಿದ್ದಾರೆ. ಆದರೆ, ಮಸೂದೆ ಫ್ರಾನ್‌್ಸಸಂವಿಧಾನಕ್ಕೆ ಅನುಗುಣವಾಗಿದೆಯೇ ಎಂಬುದನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುವ ಸಾಧ್ಯತೆ ಇರುವುದರಿಂದ ಜಾರಿಗೆ ಸ್ವಲ್ಪ ವಿಳಂಬವಾಗಬಹುದು.
ಆನ್‌ಲೈನ್ ವಿಶ್ವಕೋಶಗಳು, ಶೈಕ್ಷಣಿಕ ಹಾಗೂ ವೈಜ್ಞಾನಿಕ ಮಾಹಿತಿಯ ತಾಣಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ.
ಎಡಪಂಥೀಯ ಫ್ರಾನ್ಸ್ ಅನ್‌ಬೌಡ್ ಪಕ್ಷದ ಶಾಸಕರು ಮಸೂದೆಯನ್ನು ವಿರೋಧಿಸಿದ್ದು, ಇದು ಸಂವಿಧಾನಬದ್ಧವಾಗಿದೆಯೇ ಎಂಬ ಅನುಮಾನವಿದೆ. ಜೊತೆಗೆ ಇದು ಆನ್‌ಲೈನ್ ಅನಾಮಧೇಯತೆಯನ್ನು ಕೊನೆಗೊಳಿಸಬಹುದು ಹಾಗೂ ಜಾರಿಗೊಳಿಸುವುದು ಕಷ್ಟಕರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಫ್ರಾನ್‌್ಸಆರೋಗ್ಯ ಮೇಲ್ವಿಚಾರಣಾ ಸಂಸ್ಥೆಯ ಪ್ರಕಾರ, ದೇಶದ ಪ್ರತಿ ಇಬ್ಬರು ಹದಿಹರೆಯದವರಲ್ಲಿ ಒಬ್ಬರು ದಿನಕ್ಕೆ ಎರಡರಿಂದ ಐದು ಗಂಟೆಗಳವರೆಗೆ ಸಾರ್ಟ್‌ಫೋನ್ ಬಳಸುತ್ತಾರೆ.
ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಆತವಿಶ್ವಾಸ ಕುಸಿತ, ಸ್ವಯಂ ಹಾನಿ, ಮಾದಕ ವಸ್ತುಗಳ ಬಳಕೆ ಹಾಗೂ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚು ಒಡ್ಡಿಕೊಳ್ಳುವಂತಹ ಗಂಭೀರ ದುಷ್ಪರಿಣಾಮಗಳು ಕಂಡುಬರುತ್ತಿವೆ ಎಂದು ವರದಿ ಎಚ್ಚರಿಸಿದೆ.
