ಬೆಂಗಳೂರು,ಫೆ.20-ಮನೆಗಳ ಬೀಗ ಮುರಿದು ಕಳ್ಳತನ ಮಾಡಿದ ಚಿನ್ನದ ಒಡವೆಗಳನ್ನು ಮಾರಾಟ ಮಾಡಿ ಬಂದ ಹಣದಿಂದ ದುಶ್ಚಟಗಳಿಗೆ ಹಾಗೂ ಆನ್‍ಲೈನ್ ಬೆಟ್ಟಿಂಗ್‍ಗೆ ಉಪಯೋಗಿಸುತ್ತಿದ್ದ ಆರೋಪಿಯನ್ನು ಮೈಕೋಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಟಿಎಂ ಲೇಔಟ್ ನಿವಾಸಿ, ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಸುನೀಲ (31) ಬಂಧಿತ ಆರೋಪಿ. ಈತ ಮೈಕೋ ಲೇಔಟ್ ಮತ್ತು ಬಿಟಿಎಂ ಲೇಔಟ್ ಪ್ರದೇಶಗಳಲ್ಲಿ ಸುತ್ತಾಡುತ್ತಾ ಯಾವ ಮನೆಯಲ್ಲಿ ದಂಪತಿ ಕೆಲಸಕ್ಕೆ ಹೋಗುತ್ತಾರೆಂದು ತಿಳಿದುಕೊಂಡು ಅಂತಹ ಮನೆಗಳಲ್ಲಿ ಹಗಲು ವೇಳೆಯೇ ಕಳ್ಳತನ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿಯಿಂದ 30.15 ಲಕ್ಷ ಮೌಲ್ಯದ 525 ಗ್ರಾಂ ತೂಕದ ಚಿನ್ನದ ಒಡವೆಗಳು, 550 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ 2 ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಿಂದ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು 11 ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ.
ಅಡ್ಜೆಸ್ಟ್‍ಮೆಂಟ್ ಗಿರಾಕಿಗಳಿಂದಾ ಪಕ್ಷಕ್ಕೆ ಸೋಲಾಗಿದೆ : ಯತ್ನಾಳ್
ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಿ.ಕೆ.ಬಾಬಾರವರ ಮಾರ್ಗ ದರ್ಶನದಲ್ಲಿ ಮತ್ತು ಮೈಕೋ ಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಮನೋಜ್‍ನೇತೃತ್ವದಲ್ಲಿ , ಇನ್ಸ್‍ಪೆಕ್ಟರ್ ಗಿರೀಶ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ಕೈಗೊಂಡಿದ್ದರು.