Friday, November 22, 2024
Homeರಾಜ್ಯಕಳೆದ 10 ವರ್ಷಗಳಲ್ಲಿ 13 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ : ಬೊಮ್ಮಾಯಿ

ಕಳೆದ 10 ವರ್ಷಗಳಲ್ಲಿ 13 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ : ಬೊಮ್ಮಾಯಿ

ಬೆಂಗಳೂರು,ಫೆ.21- ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ 13 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಈ ಹಿಂದೆ ಸ್ವತಂತ್ರ ನಂತರದಿಂದ 2014 ರವರೆಗೂ ರಾಜ್ಯದಲ್ಲಿ 6,500 ಕಿ.ಮೀ. ಮಾತ್ರ ಹೆದ್ದಾರಿ ಇತ್ತು. ಅದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ 13 ಸಾವಿರ ಕಿ.ಮೀ.ಗಳಿಗೆ ಹೆಚ್ಚಿಸಿದೆ ಎಂದರು.

ಇದಕ್ಕೆ ಆಡಳಿತ ಪಕ್ಷದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಶಿವಮೊಗ್ಗ-ತುಮಕೂರು ರಸ್ತೆ, ಬೆಂಗಳೂರು-ಮಂಗಳೂರು ರಸ್ತೆ ಅಪೂರ್ಣವಾಗಿ ಹಲವಾರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದೆ ಎಂದು ತಿರುಗೇಟು ನೀಡಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುಂಠಿತಗೊಳ್ಳಲು ರಾಜ್ಯಸರ್ಕಾರವೇ ಕಾರಣ. ಭೂಸ್ವಾೀಧಿನಾಕಾರಿಗಳನ್ನು ನೇಮಿಸಿ ಭೂಮಿಯನ್ನು ಹಸ್ತಾಂತರಿಸಿದರೆ ಹೆದ್ದಾರಿ ನಿರ್ಮಾಣ ಕಾಮಗಾರಿ ಚುರುಕಾಗಿ ನಡೆಯಲಿದೆ ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ : ಕಾಂಗ್ರೆಸ್ ಸರ್ಕಾರದ ಮತ್ತೊಂದು ಎಡವಟ್ಟು

1,017 ಸಾವಿರ ಕೋಟಿ ವೆಚ್ಚದ ಸಾಗರ್ ಮಾಲ ಯೋಜನೆಯನ್ನು ಶೇ.50/50 ವೆಚ್ಚದ ಅನುಪಾತದಡಿ ಕೈಗೆತ್ತಿಕೊಳ್ಳಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

RELATED ARTICLES

Latest News