Homeರಾಜ್ಯಎಸ್‌‍ಐಆರ್‌ : ರಾಜ್ಯದಲ್ಲಿ ಸುಮಾರು 1 ಕೋಟಿಗೂ ಅಧಿಕ ಮಂದಿ ಡಿಲೀಟ್‌..!

ಎಸ್‌‍ಐಆರ್‌ : ರಾಜ್ಯದಲ್ಲಿ ಸುಮಾರು 1 ಕೋಟಿಗೂ ಅಧಿಕ ಮಂದಿ ಡಿಲೀಟ್‌..!

SIR: More than 1 crore people deleted in the state..!

ಬೆಂಗಳೂರು, ಆ.4- ರಾಜ್ಯದಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಮಂದಿಯನ್ನು ಎಎಸ್‌‍ಡಿಡಿಒ ವಿಭಾಗದಲ್ಲಿರಿಸುವ ಮೂಲಕ ಚುನಾವಣಾ ಆಯೋಗ ಕಾಂಗ್ರೆಸ್‌‍ ಹಾಗೂ ಅದರ ಮಿತ್ರ ಪಕ್ಷಗಳ ಆರೋಪವನ್ನು ಸಾಬೀತುಪಡಿಸಿದೆ.

ಈ ಹಿಂದೆ ಎಸ್‌‍ಐಆರ್‌ ನಡೆದಿದ್ದ ರಾಜ್ಯಗಳಲ್ಲಿ 70 ರಿಂದ 80 ಲಕ್ಷ ಮಂದಿಯನ್ನು ಕೈಬಿಟ್ಟಿರುವ ಆರೋಪಗಳು ಕೇಳಿ ಬಂದಿದ್ದವು. ಈಗ ರಾಜ್ಯದಲ್ಲಿ ಶೇ.19.95ರಷ್ಟು ಜನರನ್ನು ಗೈರುಹಾಜರಿ, ಸ್ಥಳಾಂತರ, ಸಾವು, ತೆಗೆದು ಹಾಕುವಿಕೆ ಮತ್ತು ನಕಲಿ ವಿಭಾಗದಲ್ಲಿ ಗುರುತಿಸುವ ಮೂಲಕ ಆತಂಕ ಸೃಷ್ಟಿಸಿದೆ.

ಅದರಲ್ಲೂ ಬೆಂಗಳೂರು ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶೇ. 50ಕ್ಕಿಂತಲೂ ಹೆಚ್ಚಿನ ಜನ ಎಎಸ್‌‍ಡಿಡಿಒ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದರಿಂದ ಆತಂಕಕ್ಕೊಳ ಗಾಗಿರುವ ಕಾಂಗ್ರೆಸ್‌‍ ಬಾಕಿಯಿರುವ ನಾಲ್ಕು ದಿನಗಳಲ್ಲಿ ಜಾಗ್ರತೆವಹಿಸುವಂತೆ ತಮ ಪಕ್ಷದ ಬಿಎಲ್‌ಎ-2ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಎಎಸ್‌‍ಎಸ್‌‍ಬಿಒ ಪಟ್ಟಿಯನ್ನು ಆಧರಿಸಿ ಪರಿಶೀಲನೆ ಗೊಳಪಡಿಸಬೇಕಾದ ಮತದಾರರ ಪಟ್ಟಿಯನ್ನು ಗಮನಿಸುವಂತೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮುಖ್ಯ ಚುನಾವಣಾಧಿ ಕಾರಿಗಳ ಕಚೇರಿ ನಿನ್ನೆ ಬಿಡುಗಡೆ ಮಾಡಿದ ದೈನಂದಿನ ಪತ್ರಿಕಾ ಪ್ರಕಟಣೆಯ ಪ್ರಕಾರ, ರಾಜ್ಯದಲ್ಲಿ ಮತದಾರರ ವಿಶೇಷ ಪರಿಷ್ಕರಣೆ (ಎಸ್‌‍ಐಆರ್‌) ಕಾರ್ಯದಡಿ ಮನೆ ಮನೆ ಸಮೀಕ್ಷೆ ಹಾಗೂ ಎಣಿಕೆ ನಮೂನೆಗಳ (ಎನ್ಯೂಮರೇಷನ್‌ ಫಾರಂ-ಇಎಫ್‌) ಡಿಜಿಟಲೀಕರಣ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

2026ರ ಜೂನ್‌ 16ರ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, ಎಲ್ಲ ಮತದಾರರಿಗೂ ಎಣಿಕೆ ನಮೂನೆಗಳನ್ನು ಮುದ್ರಿಸಿ ಬಿಎಲ್‌ಒಗಳ ಮೂಲಕ ವಿತರಿಸಲಾಗಿದೆ.

ಜೂನ್‌ 30ರಿಂದ ಆಗಸ್ಟ್‌ 8ರವರೆಗೆ ಮನೆ ಮನೆ ಸಮೀಕ್ಷೆ ಹಾಗೂ ಡಿಜಿಟಲೀಕರಣ ಕಾರ್ಯ ನಡೆಯುತ್ತಿದ್ದು, ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ನೀಡಿರುವ ಮಾಹಿತಿಯಂತೆ, ಎಣಿಕೆ ನಮೂನೆ ಹಾಗೂ ಸೇರಿ ಒಟ್ಟು 5,51,91,134 ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇದು ಶೇ.99.56ರಷ್ಟು ಪ್ರಗತಿಯನ್ನು ಸೂಚಿಸುತ್ತದೆ. ಎಣಿಕೆ ನಮೂನೆಗಳ ಪೈಕಿ 4,41,31,846 ನಮೂನೆಗಳು (ಶೇ.79.61) ಡಿಜಿಟಲೀಕರಣಗೊಂಡಿದ್ದು, ಇನ್ನೂ 2,41,180 ನಮೂನೆಗಳು (ಶೇ.0.44) ಬಾಕಿ ಉಳಿದಿವೆ.

ಇದೇ ವೇಳೆ 1,10,59,288 ಮತದಾರರನ್ನು (ಎಎಸ್‌‍ಡಿಡಿಒ) ವಿಭಾಗದಲ್ಲಿ ಗುರುತಿಸಲಾಗಿದ್ದು, ಇದು ಒಟ್ಟು ಮತದಾರರ ಶೇ.19.95ರಷ್ಟಾಗಿದೆ. ವಿಭಾಗದಲ್ಲಿ ಗುರುತಿಸಲಾದವರಲ್ಲಿ 16,18,630 ಮಂದಿ ಪತ್ತೆಯಾಗದ ಅಥವಾ ಗೈರುಹಾಜರಿರುವ ಮತದಾರರು (ಶೇ.2.92), 66,23,832 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು (ಶೇ.11.95), 16,21,446 ಮಂದಿ ಮೃತಪಟ್ಟವರು (ಶೇ.2.93), 6,78,213 ಮಂದಿ ಈಗಾಗಲೇ ಬೇರೆಡೆ ನೋಂದಾಯಿತರಾಗಿರುವವರು (ಶೇ.1.22) ಹಾಗೂ 5,17,167 ಮಂದಿ ಇತರ ಕಾರಣಗಳಿಂದ ಗುರುತಿಸಲ್ಪಟ್ಟಿದ್ದಾರೆ. ರಾಜ್ಯದ ಮತದಾರರು ಆನ್‌ಲೈನ್‌ ಮೂಲಕ 6,85,711 ಎಣಿಕೆ ನಮೂನೆಗಳನ್ನು ಸಲ್ಲಿಸಿದ್ದು, ಇದು ಒಟ್ಟು ಮತದಾರರ ಶೇ.1.24ರಷ್ಟಾಗಿದೆ ಎಂದು ತಿಳಿಸಲಾಗಿದೆ.

ಪಟ್ಟಿಯನ್ನು ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳಿಗೆ ಹಾಗೂ ಸಂಬಂಧಿತ ಬಿಎಲ್‌ಒಗಳಿಗೆ ಪರಿಶೀಲನೆಗಾಗಿ ನೀಡಲಾಗಿದೆ. ಯಾವುದೇ ಮತದಾರರನ್ನು ತಪ್ಪಾಗಿ ಎಎಸ್‌‍ಡಿಡಿಒ ವಿಭಾಗದಲ್ಲಿ ಗುರುತಿಸಲಾಗಿದೆ ಎಂದು ಕಂಡು ಬಂದಲ್ಲಿ, ಆಗಸ್ಟ್‌ 8ರವರೆಗೆ ಬಿಎಲ್‌ಒ ಅಥವಾ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ಅವರನ್ನು ಸಂಪರ್ಕಿಸಿ ತಮ ಎಣಿಕೆ ನಮೂನೆಯನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದರೊಂದಿಗೆ ಜಿಬಿಎ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಮತದಾರರ ನೋಂದಣಿಗಾಗಿ ಅಗತ್ಯವಿರುವ ಫಾರಂ-6ಗಳನ್ನು ಸಂಬಂಧಿತ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ವಿತರಿಸಲಾಗಿದೆ.ಜೂನ್‌ 16ರಿಂದ ಆಗಸ್ಟ್‌ 2ರವರೆಗೆ ರಾಜ್ಯದಲ್ಲಿ ವಿವಿಧ ಅರ್ಜಿಗಳ ಮೂಲಕ ಒಟ್ಟು 11,98,517 ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ ಹೊಸ ಮತದಾರರ ನೋಂದಣಿಗೆ ಫಾರಂ-6 ಅಡಿಯಲ್ಲಿ 3,61,309 ಅರ್ಜಿಗಳು, ಎನ್‌ಆರ್‌ಐ ಮತದಾರರಿಗಾಗಿ ಫಾರಂ-6ಎ ಅಡಿಯಲ್ಲಿ 3,098 ಅರ್ಜಿಗಳು, ಹೆಸರು ಅಳಿಸುವ ಫಾರಂ-7 ಅಡಿಯಲ್ಲಿ 31,050 ಅರ್ಜಿಗಳು ಹಾಗೂ ತಿದ್ದುಪಡಿ ಮತ್ತು ವರ್ಗಾವಣೆಗೆ ಫಾರಂ-8 ಅಡಿಯಲ್ಲಿ 8,03,060 ಅರ್ಜಿಗಳು ಸಲ್ಲಿಕೆಯಾಗಿವೆ.

2026ರ ಅಕ್ಟೋಬರ್‌ 1ರ ವೇಳೆಗೆ 18 ವರ್ಷ ಪೂರೈಸುವ ಅರ್ಹ ಯುವ ಮತದಾರರು ಫಾರಂ-6 ಹಾಗೂ ಘೋಷಣಾ ಪತ್ರದೊಂದಿಗೆ ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮನವಿ ಮಾಡಿದೆ.ಜಿಲ್ಲಾವಾರು ಪ್ರಗತಿಯಲ್ಲಿ ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಕೊಪ್ಪಳ, ಗದಗ ಹಾಗೂ ಕೊಡಗು ಜಿಲ್ಲೆಗಳು ಶೇ.100ರಷ್ಟು ಎಣಿಕೆ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಳಿಸಿವೆ.

ಬೆಂಗಳೂರು ನಗರ ವ್ಯಾಪ್ತಿಯ ಉತ್ತರ, ಮಧ್ಯ ಹಾಗೂ ದಕ್ಷಿಣ ವಿಧಾನಸಭಾ ವಿಭಾಗಗಳಲ್ಲಿ ಡಿಜಿಟಲೀಕರಣದ ಪ್ರಗತಿ ಕ್ರಮವಾಗಿ ಶೇ.51.68, ಶೇ.50.61 ಹಾಗೂ ಶೇ.47.54ರಷ್ಟಿದ್ದು, ಈ ಭಾಗಗಳಲ್ಲಿ ಗುರುತಿಸುವಿಕೆ ಪ್ರಮಾಣ ರಾಜ್ಯದ ಸರಾಸರಿಗಿಂತ ಹೆಚ್ಚಾಗಿದೆ.

RELATED ARTICLES
spot_img

Latest News