ಜಾಜ್‍ಪುರ,ಮಾ.6- ಮಕ್ಕಳೇ ನೀವು ತಂದಿರುವ ಉಡುಗೊರೆಗಳ ಹಿಂದೆ ನಿಮ್ಮ ವಿಳಾಸ ಬರೆಯಿರಿ ನಾನು ನಿಮಗೆ ಪತ್ರ ಬರೆಯುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಕ್ಕಳನ್ನು ಉತ್ತೇಜಿಸಿದ ಘಟನೆ ಒಡಿಸ್ಸಾದಲ್ಲಿ ನಡೆದಿದೆ.
ಒಡಿಶಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮೊದಿ ಅವರು ಕೆಲವು ಮಕ್ಕಳು ತಮಗೆ ಉಡುಗೊರೆಯಾಗಿ ನೀಡಲು ತಂದಿದ್ದ ವಸ್ತುಗಳನ್ನು ಕಂಡು ಎಸ್‍ಪಿಜಿ ಕಮಾಂಡೋಗಳಿಗೆ ಮಕ್ಕಳಿಂದ ಅವುಗಳನ್ನು ಸಂಗ್ರಹಿಸುವಂತೆ ಸೂಚಿಸಿದರು.ನಂತರ ಮಕ್ಕಳೇ, ದಯವಿಟ್ಟು ನಿಮ್ಮ ವಿಳಾಸಗಳನ್ನು ಕಾಗದದ ಹಿಂಭಾಗದಲ್ಲಿ ನಮೂದಿಸಿ. ಮುಖ್ಯ ಚಿಥಿ ಲಿಖುಂಗಾ ಆಪ್ ಲೋಗೋ ಕೋ…(ನಾನು ನಿಮಗೆ ಪತ್ರ ಬರೆಯುತ್ತೇನೆ) ಎಂದು ವಿನಮ್ರವಾಗಿ ಮನವಿ ಮಾಡಿಕೊಂಡರು.
ಇದಕ್ಕೂ ಮುನ್ನ ಒಡಿಶಾದ ಜಾಜ್‍ಪುರದಲ್ಲಿ 19,600 ಕೋಟಿಗೂ ಅಕ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ ಅವರು ಈ ಯೋಜನೆಗಳು ತೈಲ ಮತ್ತು ಅನಿಲ, ರೈಲ್ವೆ, ರಸ್ತೆಗಳು, ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಪರಮಾಣು ಶಕ್ತಿ ಸೇರಿದಂತೆ ಕ್ಷೇತ್ರಗಳಿಗೆ ಸಂಬಂಸಿವೆ ಎಂದು ಮಾಹಿತಿ ನೀಡಿದರು.
ಬಿಜು ಪಟ್ನಾಯಕ್ ಅವರ ಜಯಂತಿ ಸ್ಮರಿಸಿದ ಪ್ರಧಾನಿಯವರು, ರಾಷ್ಟ್ರ ಮತ್ತು ಒಡಿಶಾಗೆ ಅವರು ನೀಡಿದ ಅನುಪಮ ಕೊಡುಗೆಯನ್ನು ಸ್ಮರಿಸಿದರು.ಇಂದು ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಪರಮಾಣು ಶಕ್ತಿ, ರಸ್ತೆಮಾರ್ಗಗಳು, ರೈಲ್ವೆಗಳು ಮತ್ತು ಸಂಪರ್ಕ ವಲಯಗಳಲ್ಲಿ ಸುಮಾರು 20,000 ಕೋಟಿಗಳ ಬೃಹತ್ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಹೈಲೈಟ್ ಮಾಡಿದ ಪ್ರಧಾನಮಂತ್ರಿ, ಇದು ಈ ಪ್ರದೇಶದಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ ಎಂದು ಹೇಳಿದರು. ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಅಭಿವೃದ್ಧಿ ಯೋಜನೆಗಳಿಗಾಗಿ ಒಡಿಶಾದ ಜನತೆಯನ್ನು ಅಭಿನಂದಿಸಿದರು.
ವಿಕಸಿತ್ ಭಾರತ್ ನಿರ್ಣಯಕ್ಕಾಗಿ ಕೆಲಸ ಮಾಡುವಾಗ ರಾಷ್ಟ್ರದ ಪ್ರಸ್ತುತ ಅಗತ್ಯಗಳನ್ನು ನೋಡಿಕೊಳ್ಳುವ ಸರ್ಕಾರದ ವಿಧಾನವನ್ನು ಪ್ರಧಾನಿ ಮುಂದಿಟ್ಟರು. ಇಂಧನ ಕ್ಷೇತ್ರದಲ್ಲಿ ಪೂರ್ವ ರಾಜ್ಯಗಳ ಸಾಮಥ್ರ್ಯವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಅವರು ಪ್ರಸ್ತಾಪಿಸಿದರು. ಉರ್ಜ ಗಂಗಾ ಯೋಜನೆಯಡಿ, ಐದು ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ನೈಸರ್ಗಿಕ ಅನಿಲ ಪೂರೈಕೆಗಾಗಿ ಪ್ರಮುಖ ಯೋಜನೆಗಳು ನಡೆಯುತ್ತಿವೆ.
ಒಡಿಶಾದ ಪರದೀಪ್‍ನಿಂದ ಪಶ್ಚಿಮ ಬಂಗಾಳದ ಹಲ್ದಿಯಾ ವರೆಗೆ 344 ಕಿಲೋಮೀಟರ್ ಉದ್ದದ ಉತ್ಪನ್ನ ಪೈಪ್‍ಲೈನ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಅವರು ಪಾರಾದೀಪ್ ರಿಫೈನರಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮೊನೊ ಎಥಿಲೀನ್ ಗ್ಲೈಕಾಲ್ ಪ್ರಾಜೆಕ್ಟ್ ಮತ್ತು ಪಾರಾದಿಪ್‍ನಲ್ಲಿ 0.6 ಎಂಎಂಟಿಪಿಎ ಎಲ್‍ಪಿಜಿ ಆಮದು ಸೌಲಭ್ಯವನ್ನು ಉದ್ಘಾಟಿಸಿದರು, ಇದು ಪೂರ್ವ ಭಾರತದ ಪಾಲಿಯೆಸ್ಟರ್ ಉದ್ಯಮಕ್ಕೆ ಕ್ರಾಂತಿಕಾರಿ ಬದಲಾವಣೆಯನ್ನು ತರುತ್ತದೆ. ಇದು ಭದ್ರಕ್ ಮತ್ತು ಪಾರಾದೀಪ್‍ನಲ್ಲಿರುವ ಜವಳಿ ಪಾರ್ಕ್‍ಗಳಿಗೆ ಕಚ್ಚಾ ವಸ್ತುಗಳನ್ನು ಸಹ ಒದಗಿಸುತ್ತದೆ ಎಂದು ತಿಳಿಸಿದರು.