Wednesday, May 1, 2024
Homeರಾಷ್ಟ್ರೀಯ"ಪ್ರಿಯಾಂಕಾ ಜೀ ದಯವಿಟ್ಟು ರಾಯ್‍ಬರೇಲಿಗೆ ಬನ್ನಿ…."

“ಪ್ರಿಯಾಂಕಾ ಜೀ ದಯವಿಟ್ಟು ರಾಯ್‍ಬರೇಲಿಗೆ ಬನ್ನಿ….”

ರಾಯ್ ಬರೇಲಿ,ಮಾ.6- ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬೆಂಬಲಿಗರು ಪೋಸ್ಟರ್‍ಗಳನ್ನು ಹಾಕಿದ್ದು, ಪಕ್ಷದ ನಾಯಕತ್ವವು ಅವರನ್ನು ಲೋಕಸಭೆ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಸಾಂಪ್ರದಾಯಿಕ ಕಾಂಗ್ರೆಸ್ ಭದ್ರಕೋಟೆಯಾದ ರಾಯ್ ಬರೇಲಿಯನ್ನು ಈ ಹಿಂದೆ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಪ್ರತಿನಿಸಿದ್ದರು ಮತ್ತು ಇದು ಕಾಂಗ್ರೆಸ್‍ಗೆ ಪ್ರತಿಷ್ಠೆಯ ಸ್ಥಾನವಾಗಿದೆ. ಕುತೂಹಲಕಾರಿಯಾಗಿ, ಇದು ಇಂದಿರಾ ಗಾಂಧಿಯವರು 1977 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ ನಾರಾಯಣ್ ವಿರುದ್ಧ ಸೋತ ಸ್ಥಾನ – ಲೋಕಸಭೆ ಸ್ಪರ್ಧೆಯಲ್ಲಿ ಸೋತ ಏಕೈಕ ಹಾಲಿ ಪ್ರಧಾನಿಯೂ ಅವರಾಗಿದ್ದರು.

ಕಳೆದ ಎರಡು ದಶಕಗಳಿಂದ ಈ ಕ್ಷೇತ್ರವನ್ನು ಸೋನಿಯಾ ಗಾಂಧಿ ಪ್ರತಿನಿಸುತ್ತಿದ್ದು, ಅವರು ಈಗ ರಾಜ್ಯಸಭಾ ಸದಸ್ಯರಾಗಿದ್ದಾರೆ. ರಾಯ್ ಬರೇಲಿ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. ಈ ಪ್ರತಿಷ್ಠೆಯ ಕದನಕ್ಕೆ ಪಕ್ಷದ ಆಯ್ಕೆಯ ಬಗ್ಗೆ ಊಹಾಪೋಹಗಳ ನಡುವೆ, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬೆಂಬಲಿಗರು ಕ್ಷೇತ್ರದಲ್ಲಿ ಪೋಸ್ಟರ್‍ಗಳನ್ನು ಹಾಕಿದ್ದಾರೆ. ಕಾಂಗ್ರೆಸ್‍ನ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿ, ರಾಯ್‍ಬರೇಲಿ ಕರೆಯುತ್ತಿದೆ, ಪ್ರಿಯಾಂಕಾ ಗಾಂಧಿ ಜೀ, ದಯವಿಟ್ಟು ಬನ್ನಿ ಎಂದು ಪೋಸ್ಟರ್ ಬರೆಯಲಾಗಿದೆ.

ಪೋಸ್ಟರ್‍ಗಳಲ್ಲಿ ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಭಾವಚಿತ್ರಗಳಿವೆ. ಬಿಜೆಪಿ ಕೂಡ ಲೋಕಸಭೆಗೆ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.

2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಅಲೆ ಎದ್ದರೂ ರಾಯ್ ಬರೇಲಿಯನ್ನು ಕಾಂಗ್ರೆಸ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದ್ದರಿಂದ, ಈ ಸ್ಥಾನಕ್ಕೆ ಬಿಜೆಪಿಯ ಆಯ್ಕೆಯ ಸುತ್ತ ಅಪಾರ ಕುತೂಹಲವಿದೆ ಮತ್ತು ಸೋನಿಯಾ ಗಾಂಧಿ ಅವರು ಸ್ಥಾನವನ್ನು ತೆರವು ಮಾಡುವುದರಿಂದ ಕಾಂಗ್ರೆಸ್ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ.

2019ರ ಚುನಾವಣೆಯಲ್ಲಿ ಬಿಜೆಪಿ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಸೋನಿಯಾ ಗಾಂಧಿ ವಿರುದ್ಧ 1.60 ಲಕ್ಷ ಮತಗಳ ಅಂತರದಿಂದ ಸೋತಿರುವ ಸಿಂಗ್ ಈ ಬಾರಿ ಪಕ್ಷ ಯಾರನ್ನು ಆಯ್ಕೆ ಮಾಡಿದರೂ ಅವರ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ. ನನ್ನ ಹೃದಯ, ದೇಹ, ಮನಸ್ಸು ಮತ್ತು ಸಂಪತ್ತಿನಿಂದ ಚುನಾವಣೆಯಲ್ಲಿ ಹೋರಾಡಲು ನಾನು ಅವರಿಗೆ ಸಹಾಯ ಮಾಡುತ್ತೇನೆ. ಕಮಲವನ್ನು ಅರಳಿಸುವುದು ನನ್ನ ಸಂಕಲ್ಪ ಎಂದು ಈಗ ರಾಜ್ಯ ಸಚಿವರಾಗಿರುವ ಸಿಂಗ್ ಇತ್ತೀಚೆಗೆ ಸಾಮಾಜಿಕ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಉತ್ತರ ಪ್ರದೇಶದ ಕಾಂಗ್ರೆಸ್‍ನ ಮತ್ತೊಂದು ಪ್ರತಿಷ್ಠೆಯ ಕ್ಷೇತ್ರವಾಗಿರುವ ಅಮೇಥಿಯಲ್ಲಿ ಬಿಜೆಪಿ ಕೇಂದ್ರ ಸಚಿವೆ ಹಾಗೂ ಹಾಲಿ ಸಂಸದೆ ಸ್ಮತಿ ಇರಾನಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಉಳಿಸಿಕೊಂಡಿದೆ. ಇರಾನಿ ಅವರು ಅಮೇಥಿಯಿಂದ ಸತತ ಮೂರನೇ ಬಾರಿಗೆ ಸ್ರ್ಪಸುತ್ತಿದ್ದಾರೆ.

RELATED ARTICLES

Latest News