Homeಕ್ರೀಡಾ ಸುದ್ದಿಕಾಮನ್‌ವೆಲ್ತ್‌ ಪದಕ ವಿಜೇತರೊಂದಿಗೆ ಪ್ರಧಾನಿ ಮೋದಿ ಸಂವಾದ

ಕಾಮನ್‌ವೆಲ್ತ್‌ ಪದಕ ವಿಜೇತರೊಂದಿಗೆ ಪ್ರಧಾನಿ ಮೋದಿ ಸಂವಾದ

PM Modi Meets Commonwealth Games Medallists

ನವದೆಹಲಿ,ಆ.10- ಗ್ಲಾಸ್ಗೋದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಪದಕ ವಿಜೇತ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರಮೋದಿ ನಡೆಸಿದ ಸಂವಾದ ಹಲವು ಭಾವನಾತಕ ಹಾಗೂ ಹಾಸ್ಯಭರಿತ ಕ್ಷಣಗಳಿಗೆ ಸಾಕ್ಷಿಯಾಯಿತು.

ಕ್ರೀಡಾಕೂಟದ ವೇಳೆ ಭಾರತದ ವಿರೂಪಗೊಂಡ ನಕ್ಷೆಯನ್ನು ಪ್ರಶ್ನಿಸಿದ ಬಾಕ್ಸರ್‌ ಲವ್ಲಿನಾ ಬೊರ್ಗೊಹೈನ್‌ ಅವರ ಧೈರ್ಯವನ್ನು ಪ್ರಧಾನಿ ಶ್ಲಾಘಿಸಿದರೆ, ನಾಲ್ಕು ವರ್ಷಗಳ ಕಠಿಣ ಹೋರಾಟದ ಬಳಿಕ ಚಿನ್ನ ಗೆದ್ದ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರ ಭಾವನಾತಕ ಅನುಭವವನ್ನು ಆಲಿಸಿದರು.

ದೆಹಲಿಯ ತಮ ನಿವಾಸದಲ್ಲಿ ನಡೆದ ಈ ವಿಶೇಷ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ಕ್ರೀಡಾಪಟುಗಳೊಂದಿಗೆ ಗ್ಲಾಸ್ಗೋ ಕ್ರೀಡಾಕೂಟದ ಸಿದ್ಧತೆ, ಸ್ಪರ್ಧೆಯ ಅನುಭವ ಹಾಗೂ ಗೆಲುವಿನ ಕ್ಷಣಗಳ ಕುರಿತು ಮಾತುಕತೆ ನಡೆಸಿದರು. ಪ್ರಧಾನಿಯವರೊಂದಿಗಿನ ಸಂವಾದದ ವಿಡಿಯೋವನ್ನು ಪ್ರಧಾನ ಮಂತ್ರಿ ಕಚೇರಿ ಇಂದು ಬಿಡುಗಡೆ ಮಾಡಿದೆ.

ಲವ್ಲಿನಾ ನಡೆಗೆ ಮೋದಿ ಮೆಚ್ಚುಗೆ :
ಗ್ಲಾಸ್ಗೋದಲ್ಲಿ ಭಾರತೀಯ ಕ್ರೀಡಾಪಟುಗಳು ತಮ ಗೆಲುವನ್ನು ಸಂಭ್ರಮಿಸುತ್ತಿದ್ದ ಸಂದರ್ಭದಲ್ಲಿ, ತಾವು ತೆರಳಿದ್ದ ರೆಸ್ಟೋರೆಂಟ್‌ನಲ್ಲಿ ಭಾರತದ ನಕ್ಷೆಯನ್ನು ವಿರೂಪಗೊಳಿಸಿರುವುದನ್ನು ಗಮನಿಸಿದ ಲವ್ಲಿನಾ ಬೊರ್ಗೊಹೈನ್‌ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರು ರೆಸ್ಟೋರೆಂಟ್‌ ಸಿಬ್ಬಂದಿಗೆ ಸೌಜನ್ಯದಿಂದ ವಿಷಯ ತಿಳಿಸಿ, ನಕ್ಷೆಯನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು. ನಂತರ ಸಿಬ್ಬಂದಿ ನಕ್ಷೆಯಲ್ಲಿ ಬದಲಾವಣೆ ಮಾಡಿದ್ದರು.

ಈ ಘಟನೆ ಕುರಿತು ಪ್ರಧಾನಿ ಮೋದಿ ಅವರು ಲವ್ಲಿನಾ ಅವರನ್ನು ನೇರವಾಗಿ ಪ್ರಶ್ನಿಸುತ್ತಾ, ಏನಾಯಿತು, ನೀವು ಆ ರೆಸ್ಟೋರೆಂಟ್‌ನವರೊಂದಿಗೆ ಜಗಳವಾಡುತ್ತಿದ್ದೀರಾ? ಎಂದು ಹಾಸ್ಯಭರಿತವಾಗಿ ಪ್ರಶ್ನಿಸಿದರಲ್ಲದೆ, ತಮ ಗೆಲುವಿನ ಸಂಭ್ರಮದ ನಡುವೆಯೂ ದೇಶದ ಭೌಗೋಳಿಕ ಅಖಂಡತೆಯಂತಹ ಸೂಕ್ಷ್ಮ ವಿಚಾರವನ್ನು ಗಮನಿಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಲವ್ಲಿನಾ ಅವರನ್ನು ಪ್ರಶಂಸಿಸಿ ಅವರಿಗೆ ಲಾಡು ತಿನ್ನಿಸಿ ಶುಭ ಹಾರೈಸಿದರು.

ಪಾಕಿಸ್ತಾನಿ ಬಾಕ್ಸರ್‌ನ ತಮಾಷೆ:
+90 ಕೆಜಿ ವಿಭಾಗದಲ್ಲಿ ಪದಕ ಗೆದ್ದ ಬಾಕ್ಸರ್‌ ನರೇಂದರ್‌ ಬೆರ್ವಾಲ್‌ ಅವರು 2015ರ ಮಿಲಿಟರಿ ವರ್ಲ್ಡ್ ಗೇಮ್ಸೌನ ಒಂದು ಹಾಸ್ಯಭರಿತ ಘಟನೆಯನ್ನು ಮೋದಿ ಅವರೊಂದಿಗೆ ಹಂಚಿಕೊಂಡರು.

ಕ್ರೀಡಾಪಟುಗಳ ಸಾಧನೆಯನ್ನು ಕೇವಲ ಪದಕಗಳ ಗೆಲುವಾಗಿ ನೋಡದೆ ದೇಶದ ಯುವಜನತೆಗೆ ಸ್ಫೂರ್ತಿ ನೀಡುವ ಶಕ್ತಿಯಾಗಿದೆ. ಭಾರತಕ್ಕಾಗಿ ಪದಕ ಗೆಲ್ಲುವ ನಿಮ ಪ್ರಯತ್ನಗಳು ಮತ್ತು ಹೊಸ ಎತ್ತರ ತಲುಪುವ ನಿಮ ಸಂಪ್ರದಾಯವೇ ಇದಕ್ಕೆ ಕಾರಣ ಎಂದು ಪ್ರಧಾನಿ ಹೇಳಿದರು.

ಗ್ಲಾಸ್ಗೋ 2026ರಲ್ಲಿ 13 ಚಿನ್ನ ಸೇರಿದಂತೆ 39 ಪದಕಗಳನ್ನು ಗೆದ್ದು ನಾಲ್ಕನೇ ಸ್ಥಾನ ಪಡೆದಿರುವ ಭಾರತಕ್ಕೆ, ಪ್ರಧಾನಿಯವರ ಈ ಸಂವಾದ ಕ್ರೀಡಾಪಟುಗಳ ಸಾಧನೆಗೆ ರಾಷ್ಟ್ರೀಯ ಮಟ್ಟದಲ್ಲಿ ನೀಡಲಾಗುತ್ತಿರುವ ಮಹತ್ವದ ಮತ್ತೊಂದು ಸಂಕೇತವಾಗಿದೆ.

RELATED ARTICLES
spot_img

Latest News