Homeರಾಜ್ಯಕೆಎಸ್‌‍ಆರ್‌ಟಿಸಿ ಬಸ್ಸಿನಲ್ಲಿ ಅನುಮಾನಾಸ್ಪದವಾಗಿ ಮಡಿಕೇರಿಗೆ ತೆರಳುತ್ತಿದ್ದ 30 ಮಂದಿ ಮೂಲ ಪತ್ತೆ

ಕೆಎಸ್‌‍ಆರ್‌ಟಿಸಿ ಬಸ್ಸಿನಲ್ಲಿ ಅನುಮಾನಾಸ್ಪದವಾಗಿ ಮಡಿಕೇರಿಗೆ ತೆರಳುತ್ತಿದ್ದ 30 ಮಂದಿ ಮೂಲ ಪತ್ತೆ

30 people suspiciously going to Madikeri in KSRTC bus traced

ಮಂಡ್ಯ, ಆ.11- ಇಲ್ಲಿನ ಕೆಎಸ್‌‍ಆರ್‌ಟಿಸಿ ಬಸ್‌‍ ನಿಲ್ದಾಣದಿಂದ ಅನುಮಾನಾಸ್ಪದವಾಗಿ ಮಡಿಕೇರಿಗೆ ತೆರಳುತ್ತಿದ್ದ ಸುಮಾರು 30 ಮಂದಿ ಅಸ್ಸೋಂ ಮೂಲದವರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಕೆಲ ಹಿಂದೂಪರ ಸಂಘಟನೆಗಳು ಬಾಂಗ್ಲಾ ದೇಶಿಗಳು ಬಸ್‌‍ನಲ್ಲಿ ತೆರಳುತ್ತಿದ್ದಾರೆಂಬ ಅನುಮಾನದ ಮೇಲೆ ಬಸ್‌‍ ತಡೆದು ಪ್ರತಿಭಟನೆ ನಡೆಸಿದರು.ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಹಿರಿಯ ಪೊಲೀಸ್‌‍ ಅಧಿಕಾರಿಗಳು ಪರಿಶೀಲನೆ ನಡೆಸಿ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರನ್ನು ಕೂಲಂಕಶವಾಗಿ ಪರಿಶೀಲಿಸಿದಾಗ ಬಹುತೇಕರು ಅಸ್ಸೋಂ ಮೂಲದವರಾಗಿದ್ದು, ಮಡಿಕೇರಿಯ ಕಾಫಿತೋಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು ಎಂದು ಗೊತ್ತಾಗಿದೆ.

ಈ ನಡುವೆ ಉತ್ತರ ಪ್ರದೇಶದ ವ್ಯಕ್ತಿಯೂ ಕೂಡ ಈ ತಂಡದಲ್ಲಿದ್ದು, ಪರಿಶೀಲನೆ ನಡೆಸಿ ಎಲ್ಲರನ್ನೂ ಅಲ್ಲಿಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮುನ್ನೆಚ್ಚರಿಕೆ ಕ್ರಮವಾಗಿ ಅವರ ಮೊಬೈಲ್‌ ಸಂಖ್ಯೆ ಹಾಗೂ ದಾಖಲಾತಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿ ಯಾರೂ ಬಾಂಗ್ಲಾ ದೇಶಿಗಳು ಇರಲಿಲ್ಲ ಎಂಬುದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಮಂಡ್ಯ ಪಶ್ಚಿಮ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು.

RELATED ARTICLES
spot_img

Latest News