Homeರಾಜ್ಯ80ನೇ ಸ್ವಾತಂತ್ರ್ಯೋತ್ಸವ : ಲೋಕಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ

80ನೇ ಸ್ವಾತಂತ್ರ್ಯೋತ್ಸವ : ಲೋಕಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ

ಬೆಂಗಳೂರು,ಆ.12- 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಲೋಕಭವನ-ಕರ್ನಾಟಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಆ.16, 17 ಮತ್ತು 18ರಂದು ಸಂಜೆ 5.30ರಿಂದ 7.30ರವರೆಗೆ ದೀಪಾಲಂಕಾರಗೊಂಡಿರುವ ಲೋಕಭವನವನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

ಭೇಟಿಯನ್ನು ಸುರಕ್ಷಿತ ಹಾಗೂ ಸುಗಮವಾಗಿ ನಡೆಸಲು ಸಾರ್ವಜನಿಕರು ಭದ್ರತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಲೋಕಭವನ ಪ್ರವೇಶಿಸುವ ಪ್ರತಿಯೊಬ್ಬರೂ ಆಧಾರ್‌ ಕಾರ್ಡ್‌ ಅಥವಾ ಸರ್ಕಾರದಿಂದ ನೀಡಲಾದ ಯಾವುದೇ ಗುರುತಿನ ಚೀಟಿಯನ್ನು ಭದ್ರತಾ ಸಿಬ್ಬಂದಿಗೆ ಪರಿಶೀಲನೆಗಾಗಿ ತೋರಿಸಬೇಕು. ಎಲ್ಲರೂ ಕಡ್ಡಾಯ ಭದ್ರತಾ ತಪಾಸಣೆಗೆ ಒಳಪಡಬೇಕು.

ಸಂದರ್ಶಕರು ನಿಗದಿತ ಮಾರ್ಗ ಹಾಗೂ ಸ್ಥಳಗಳಲ್ಲಿ ಮಾತ್ರ ಸಂಚರಿಸಬೇಕು ಮತ್ತು ಆವರಣದಲ್ಲಿ ಶಾಂತಿ, ಶಿಸ್ತು ಹಾಗೂ ಸಭ್ಯತೆ ಕಾಪಾಡಬೇಕು. ಖಾಸಗಿ ಹಾಗೂ ಟ್ಯಾಕ್ಸಿವಾಹನಗಳಿಗೆ ಲೋಕಭವನದ ಆವರಣದೊಳಗೆ ಪ್ರವೇಶ ಇರುವುದಿಲ್ಲ.

ಬ್ಯಾಗ್‌, ಬ್ಯಾಕ್‌ಪ್ಯಾಕ್‌, ಆಹಾರ ಪದಾರ್ಥಗಳು, ಪಾನ್‌, ಗುಟ್ಕಾ, ತಂಬಾಕು, ಸಿಗರೇಟ್‌‍, ಮದ್ಯ, ವೃತ್ತಿಪರ ಕ್ಯಾಮೆರಾ, ಲ್ಯಾಪ್‌ಟಾಪ್‌, ವಿದ್ಯುನಾನ ಉಪಕರಣಗಳು, ಚೂಪಾದ ಅಥವಾ ಲೋಹದ ವಸ್ತುಗಳು, ಬೆಂಕಿಪೊಟ್ಟಣ, ಲೈಟರ್‌, ದಹನಶೀಲ ವಸ್ತುಗಳು, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಲೋಕಭವನದೊಳಗೆ ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES
spot_img

Latest News