ಲೌಸಾನ್ನೆ, ಆ.22- (ಪಿಟಿಐ) ಭಾರತದ ಜಾವೆಲಿನ್ ಪಟು ನೀರಜ್ ಚೋಪ್ರಾ ಒಂದು ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು ಆದರೆ ಇಲ್ಲಿ ನಡೆದ ಲೌಸಾನ್ನೆ ಡೈಮಂಡ್ ಲೀಗ್ ಕೂಟದಲ್ಲಿ ಕೇವಲ 9 ಇಂಚುಗಳ ಅಂತರದಿಂದ ಪ್ರಥಮ ಸ್ಥಾನದ ಬದಲು ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.
ಶ್ರೀಲಂಕಾದ ಉದಯೋನುಖ ತಾರೆ ರುಮೇಶ್ ಪತಿರಾಜ್ ಅವರು ಕೇವಲ ಒಂಬತ್ತು ಸೆಂಟಿಮೀಟರ್‌ಗಳಿಂದ ಅಗ್ರ ಸ್ಥಾನ ಪಡೆದುಕೊಂಡರು.ಒಂಬತ್ತು ಜನರ ತಾರಾ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ 28 ವರ್ಷದ ಚೋಪ್ರಾ ಅವರ ಎರಡನೇ ಸುತ್ತಿನ 88.05 ಮೀಟರ್ ಎಸೆತವು ಜೂನ್ 2025 ರಲ್ಲಿ ಪ್ಯಾರಿಸ್ ಡೈಮಂಡ್ ಲೀಗ್ ಗೆದ್ದಾಗ ಅವರು ದಾಖಲಿಸಿದ 88.16 ಮೀಟರ್ ನಂತರ ಅವರ ಅತ್ಯುತ್ತಮ ಎಸೆತವಾಗಿದೆ.
ಇದು ಅವರ ಋತುವಿನ ಅತ್ಯುತ್ತಮ ಎಸೆತವೂ ಆಗಿತ್ತು.ಆದಾಗ್ಯೂ, 23 ವರ್ಷದ ಪತಿರಾಜ್ ಈ ಋತುವಿನಲ್ಲಿ ತಮ್ಮ ಆಮೋಘ ಆಟ ಮುಂದುವರಿಸಿದರು, ಅವರು ತಮ್ಮ ಮೂರನೇ ಸುತ್ತಿನ 88.14 ಮೀಟರ್ ಎಸೆತದೊಂದಿಗೆ ಚೋಪ್ರಾ ಅವರನ್ನು ಹಿಂದಿಕ್ಕಿದರು.ಗ್ರೆನಡಾದ ಆಂಡರ್ಸನ್ ಪೀಟರ್ಸ್ 86.69 ಮೀಟರ್ ಎಸೆತದೊಂದಿಗೆ ಆರನೇ ಮತ್ತು ಅಂತಿಮ ಸುತ್ತಿನ ಪ್ರಯತ್ನದೊಂದಿಗೆ ಮೂರನೇ ಸ್ಥಾನ ಪಡೆದರು.
