Friday, November 22, 2024
Homeಅಂತಾರಾಷ್ಟ್ರೀಯ | Internationalಇಸ್ರೇಲ್‍ನಲ್ಲಿ ಯುದ್ಧ ಘೋಷಣೆ

ಇಸ್ರೇಲ್‍ನಲ್ಲಿ ಯುದ್ಧ ಘೋಷಣೆ

ಜೆರುಸಲೇಂ,ಅ.7-ಪ್ಯಾಲೆಸ್ತೇನ್ನ ಗಾಜಾ ಪಟ್ಟಿ ಕಡೆಯಿಂದ ಭೀಕರ ರಾಕೆಟ್ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧವನ್ನು ಘೋಷಣೆ ಮಾಡಿದೆ. ಗಾಜಾ ಪಟ್ಟಿಯಿಂದ ಹಲವು ಬಾರಿ ರಾಕೆಟ್ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಆರೋಪಿಸಿದೆ. ಹಮಾಸ್ ಉಗ್ರಗಾಮಿಗಳು 5ಸಾವಿರಕ್ಕೂ ಹೆಚ್ಚು ರಾಕೆಟ್‍ಗಳನ್ನು ಇಸ್ರೇಲ್‍ನೊಳಗೆ ನುಗ್ಗಿಸಿದ್ದಾರೆ. ಇವು ಇಸ್ರೆಲ್‍ನಾದ್ಯಂತ ಭೀಕರ ಸಾವು ನೋವುಗಳಿಗೆ ಕಾರಣವಾಗಿರುವುದು ವಿಡಿಯೋಗಳಲ್ಲಿ ಬಹಿರಂಗಗೊಂಡಿವೆ.

ಇಸ್ರೇಲ್‍ನಲ್ಲಿ ಭಯೋತ್ಪಾದಕರೆಂದು ಪರಿಗಣಿಸಲ್ಪಟ್ಟಿರುವ ಹಮಾಸ್ ಉಗ್ರಗಾಮಿಗಳ ಒಳನುಸುಳುವಿಕೆಯ ಬಗ್ಗೆ ದೇಶದ ರಕ್ಷಣಾ ಪಡೆಗಳು ಜನರಿಗೆ ಎಚ್ಚರಿಕೆ ನೀಡಿವೆ. ದಾಳಿಯಲ್ಲಿ ಪ್ಯಾರಾಗ್ಲೈಡಗರ್‍ಳನ್ನು ಬಳಸಲಾಗಿದ್ದು, ನಾಗರಿಕರ ಪ್ರಾಣ ಹಾನಿಗೆ ಕಾರಣವಾಗಿವೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ದಾಖಲೆ 100 ಪದಕ ಸಾಧನೆ

ಈ ಭೀಕರ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧವನ್ನು ಘೋಷಿಸಿದೆ. ಇದು ಜಾಗತಿಕವಾಗಿ ಭಾರೀ ಸಂಚಲವನ್ನು ಸೃಷ್ಟಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಇಸ್ರೇಲ್ ರಕ್ಷಣಾ ಪಡೆ, ಗಾಜಾ ಪಟ್ಟಿಯಿಂದ ಹಲವಾರು ಭಯೋತ್ಪಾದಕರು ಇಸ್ರೇಲಿ ಭೂಪ್ರದೇಶಕ್ಕೆ ನುಸುಳಿದ್ದಾರೆ. ಗಾಜಾ ಪಟ್ಟಿಯ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ತಮ್ಮ ಮನೆಗಳಲ್ಲಿ ಉಳಿಯಲು ನಾವು ಮನವಿ ಮಾಡುತ್ತೇವೆ ಎಂದು ತಿಳಿಸಿದೆ. ಪವಿತ್ರ ನಗರವಾದ ಜೆರುಸಲೇಮ್ ಮತ್ತು ಇಸ್ರೇಲ್‍ನಾದ್ಯಂತ ಸೈರನ್‍ಗಳು ಮೊಳಗುತ್ತಿವೆ. ದೇಶದಾದ್ಯಂತ ಬಾಂಬ್‍ಗಳು ಸ್ಪೋಟಗೊಳ್ಳುತ್ತಿವೆ.

ಹಮಾಸ್ನ ಸಶಸ್ತ್ರ ವಿಭಾಗವು ಆಪರೇಷನ್ ಅಲ್-ಅಕ್ಸಾ ಫ್ಲಡ್ ಅನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ. 20 ನಿಮಿಷಗಳ ಮೊದಲ ದಾಳಿಯಲ್ಲಿ 5ಸಾವಿರ ರಾಕೆಟ್‍ಗಳನ್ನು ಹಾರಿಸಿದೆ ಎಂದು ಹೇಳಿಕೊಂಡಿದೆ. ನಾವು ಎಲ್ಲಾ ಇಸ್ರೇಲ್ ಅಪರಾಧಗಳನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ ಎಂದು ಹಮಾಸ್ ಹೇಳಿಕೊಂಡಿದೆ. ಗಾಜಾ ಪಟ್ಟಿಗೆ ಹೊಂದಿಕೊಂಡಿರುವ ಇಸ್ರೇಲ್ ಗಡಿಯುದ್ದಕ್ಕೂ ವಾರಗಳಿಂದ ಸಂಘರ್ಷಗಳು ಉಂಟಾಗಿದ್ದವು. ಇಸ್ರೇಲಿ ಆಕ್ರಮಿತ ಪಶ್ಚಿಮ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯುತ್ತಲಿದ್ದವು. ಇದು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಹಮಾಸ್ ಉಗ್ರರು ಪ್ರತಿಕಾರದ ದಾಳಿ ನಡೆಸಿದ್ದಾರೆ.

ಇಸ್ರೇಲ್‍ನ ರಕ್ಷಣಾ ಸಚಿವ ಜೋವ್ ಗ್ಯಾಲಂಟ್ ಅವರು ಯುದ್ಧ ಸಾರುವ ಪ್ರಕ್ರಿಯೆಗೆ ಅನುಮೋದಿಸಿದ್ದಾರೆ. ಮಿಲಿಟರಿಯ ಅಗತ್ಯಗಳಿಗೆ ಅನುಗುಣವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಯೋಧರಿಗೆ ಸೂಚಿಸಿದ್ದಾರೆ. ಇಸ್ರೇಲಿ ಬ್ರಾಡ್ಕಾಸ್ಟಿಂಗ್ ಅಥಾರಿಟಿ ವರದಿಗಳ ಪ್ರಕಾರ, ಹಮಾಜ್ ಹೋರಾಟಗಾರರು ಇಸ್ರೇಲ್ ಸ್ಡೆರೋಟ್‍ನಲ್ಲಿ ಪೊಲೀಸ್ ಠಾಣೆಯ ಮೇಲೆ ಹಿಡಿತ ಸಾಧಿಸಿದ್ದಾರೆ.

ಬಿಎಸ್‍ವೈ ರಾಜ್ಯ ಪ್ರವಾಸಕ್ಕೆ ವರಿಷ್ಠರಿಂದ ಇನ್ನೂ ಸಿಕ್ಕಿಲ್ಲ ಅನುಮತಿ

ಸಂಘರ್ಷದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಪ್ಯಾಲೇಸ್ಟಿನಿಯನ್ ಸೈನಿಕರು ಇಸ್ರೇಲ್‍ನ ಸ್ಡೆರೋಟ್ನಾ ಸುತ್ತಲೂ ತಿರುಗಾಡುತ್ತಿದ್ದಾರೆ. ಬೀದಿಗಳಲ್ಲಿ ನಾಗರಿಕರನ್ನು ಗುಂಡಿಕ್ಕಿ ಕೊಲ್ಲುತ್ತಿದ್ದಾರೆ ಎಂದು ಹೇಳಿದೆ. ಗಾಜಾ ಪಟ್ಟಿಯ ಗಡಿ ಮೇಲೆ ಇಸ್ರೇಲ್ ಸೇನೆಯು ತನ್ನ ನಿಯಂತ್ರಣವನ್ನು ಕಳೆದುಕೊಂಡಿದೆ ಎಂದು ಹಲವಾರು ವರದಿಗಳು ಹೇಳುತ್ತಿವೆ. ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಗಾಜಾ ಪಟ್ಟಿಯಿಂದ 80 ಕಿಮೀ ವ್ಯಾಪ್ತಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

RELATED ARTICLES

Latest News