Saturday, May 4, 2024
Homeರಾಜ್ಯಐಷಾರಾಮಿ ಪಲ್ಲಕ್ಕಿ ಸಾರಿಗೆ ಸೇವೆ ಆರಂಭ

ಐಷಾರಾಮಿ ಪಲ್ಲಕ್ಕಿ ಸಾರಿಗೆ ಸೇವೆ ಆರಂಭ

ಬೆಂಗಳೂರು,ಅ.7- ಸಾರಿಗೆ ನಿಗಮಗಳಲ್ಲಿ ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಹೈಟೆಕ್ ಸ್ಲೀಪರ್‍ಕೋಚ್ ಬಸ್‍ಗಳ ಸೇವೆಯನ್ನು ಆರಂಭಿಸಲಾಗಿದ್ದು, ಕಡಿಮೆ ಪ್ರಯಾಣ ದರದಲ್ಲಿ ಆರಾಮದಾಯಕ ಸೌಲಭ್ಯ ಒದಗಿಸಲಾಗುತ್ತಿದೆ. ಜೊತೆಗೆ ಪಲ್ಲಕ್ಕಿ ಹೆಸರಿನಲ್ಲಿ ಹೊಸ ಬ್ರಾಂಡಿಂಗ್ ಸೇವೆಯನ್ನು ಸಾರಿಗೆ ನಿಗಮಗಳು ಆರಂಭಿಸಿವೆ.

ಮುಖ್ಯಮಂತ್ರಿಸಿದ್ದರಾಮಯ್ಯನವರು ವಿಧಾನ ಸೌಧದ ಗ್ರಾಂಡ್ ಸ್ಟೆಪ್‍ಗಳಲ್ಲಿ 40 ನಾನ್ ಎಸಿ ಸ್ಲೀಪರ್‍ಕೋಚ್ ಮತ್ತು 100 ಸಾಮಾನ್ಯ ಬಸ್‍ಗಳ ಪ್ರಯಾಣಕ್ಕೆ ಚಾಲನೆ ನೀಡಿದರು. ಇವುಗಳಲ್ಲಿ 13.5 ಮೀಟರ್ ಉದ್ದದ 8 ಬಸ್‍ಗಳಿದ್ದು, ಅವುಗಳಲ್ಲಿ 4 ನಾನ್ ಎಸಿ, ಉಳಿದ 4 ಎಸಿ ಬಸ್‍ಗಳಾಗಿವೆ. ಅತ್ಯಾಧುನಿಕವಾದ ಈ ಬಸ್‍ಗಳು ಐಶಾರಾಮಿ ಸೌಲಭ್ಯ ಹೊಂದಿವೆ. ಪ್ರಮುಖವಾಗಿ ದೂರದ ಬೆಳಗಾವಿ, ಮಂಗಳೂರುನÀಂತಹ ಪ್ರದೇಶಗಳಿಂದ ರಾಜಧಾನಿ ಗೆ ಪ್ರಯಾಣಿಸುತ್ತಿವೆ. ಮುಂದಿನ ಹಂತದಲ್ಲಿ ವಿವಿಧ ಭಾಗಗಳಿಗೂ ಸಂಪರ್ಕ ಕಲ್ಪಿಸುವ ಸಾಧ್ಯತೆ ಇದೆ.

ಸ್ಲೀಪರ್‍ಕೋಚ್‍ನ ಪ್ರತಿಯೊಂದು ಬಸ್‍ನಲ್ಲೂ 36 ಸೀಟುಗಳನ್ನು ವ್ಯವಸ್ಥೆ ಮಾಡಲಾಗಿದೆ. 6 ಅಡಿ ಉದ್ದದ ಸೀಟುಗಳಲ್ಲಿ ಆರಾಮದಾಯಕವಾಗಿ ಮಲಗಬಹುದು. ಜೊತೆಗೆ ಕುಳಿತುಕೊಳ್ಳಲೂ ಅವಕಾಶವಿದೆ. ಪ್ರತ್ಯೇಕವಾದ ಲೈಟಿಂಗ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಶೂ ಅಥವಾ ಚಪ್ಪಲಿ ಇಡಲು ಸ್ಥಳಾವಕಾಶ, ಲಗೇಜ್ ಬ್ಯಾಗ್‍ಗಳಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಡಿಜಿಟಲ್ ವಾಚ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳು ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಲಭ್ಯವಾಗುತ್ತಿವೆ.

ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ, 500 ಕೋಟಿ ರೂ.ಗೆ ಬೇಡಿಕೆ

ಪ್ರಾಯೋಗಿಕವಾಗಿ ಆರಂಭವಾಗಿರುವ 13.5 ಅಡಿ ಉದ್ದದ ಈ ಬಸ್‍ಗಳಲ್ಲಿ ಉತ್ತಮವಾದ ಸಸ್ಪೆನ್ಷನ್, ಶಬ್ಧ ನಿಯಂತ್ರಣ, ಚಾಲಕರಿಗೆ ಅಗತ್ಯ ಸೌಲಭ್ಯಗಳಿವೆ. ಪ್ರಯಾಣಿಕರ ಅನುಭವಗಳನ್ನು ಆಧರಿಸಿ ಮುಂದೆ ಇವುಗಳನ್ನು ಮತ್ತಷ್ಟು ವಿಸ್ತರಿಸುವ ಚಿಂತನೆ ಇದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೂ ಸಾರಿಗೆ ನಿಗಮಗಳಲ್ಲಿ 15 ಮತ್ತು 12 ಮೀಟರ್ ಉದ್ದದ ಬಸ್‍ಗಳು ಸಂಚರಿಸುತ್ತಿದ್ದವು. ಕಿರಿದಾದ ಮತ್ತು ಗುಡ್ಡಗಾಡು, ಅರಣ್ಯ ಪ್ರದೇಶಗಳ ರಸ್ತೆಗಳ ತಿರುವುಗಳಲ್ಲಿ ಉದ್ದದ ಬಸ್‍ಗಳ ಸಂಚಾರ ಕಷ್ಟವಾಗುತ್ತಿತ್ತು. ಈಗ 13.5 ಮೀಟರ್ ಉದ್ದದ 8 ಹೊಸ ಬಸ್‍ಗಳನ್ನು ಸೇವೆಗೆ ಸಮರ್ಪಿಸಲಾಗಿವೆ. ಇವು ಕಿರಿದಾದ ಮಾರ್ಗಗಳಲ್ಲೂ ಸುಗಮ ಸಂಚಾರ ಮಾಡಲಿವೆ.

ಇನ್ನು ದೂರದ ಪ್ರಯಾಣಕ್ಕಾಗಿರುವ ಎಕ್ಸ್‍ಪ್ರೆಸ್ ಬಸ್‍ಗಳಲ್ಲೂ ಸೀಟುಗಳ ವಿನ್ಯಾಸವನ್ನು ಪರಿಷ್ಕರಿಸಲಾಗಿದೆ. 54 ರ ಬದಲಾಗಿ 51 ಕ್ಕೆ ಸೀಟು ಸಂಖ್ಯೆಯನ್ನು ಇಳಿಸಲಾಗಿದ್ದು, ಆರಾಮದಾಯಕವಾಗಿ ಕಾಲು ಚಾಚಿಕೊಳ್ಳಲು ಸ್ಥಳಾವಕಾಶ ಮಾಡಲಾಗಿದೆ. ಬಸ್‍ನ ಎತ್ತರವನ್ನು 2 ಅಡಿ ಹೆಚ್ಚಿಸಿರುವುದರಿಂದ ಗಾಳಿ, ಬೆಳಕು ಸಂಚಾರ ಇನ್ನಷ್ಟು ಸುಧಾರಣೆಗೊಂಡು ಪ್ರಯಾಣಿಕರಿಗೆ ಮಲ್ಟಿ ಆಕ್ಸೆಲ್ ಅನುಭವ ಹಿತ ನೀಡಲಿದೆ ಎಂದು ಸಾರಿಗೆ ನಿಗಮಗಳ ಅಧಿಕಾರಿಗಳು ತಿಳಿಸಿದ್ದಾರೆ. ಡಿಜಿಟಲ್ ನೇಮ್ ಬೋರ್ಡ್, ನಿರಂತರವಾಗಿ ರೆಕಾರ್ಡ್ ಆಗುವ ರಿವರ್ಸ್ ಕ್ಯಾಮರಾ, ಬೆಂಕಿ ನಂದಿಸುವ ಸಲಕರಣೆಗಳು ಮತ್ತು ಎಚ್ಚರಿಕೆಯ ಗಂಟೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.


ಪಲ್ಲಕ್ಕಿ ಬ್ರಾಂಡಿಂಗ್ : ಕೆಎಸ್‍ಆರ್‍ಟಿಸಿಯಲ್ಲಿ ಐರಾವತ, ಬಿಎಂಟಿಸಿಯಲ್ಲಿ ವಜ್ರ ಎಂಬ ಬ್ರಾಂಡಿಂಗ್ ಸಾರಿಗೆ ಸೇವೆಗಳು ಇದಾಗಲೇ ಚಾಲ್ತಿಯಲ್ಲಿವೆ. ಅವುಗಳ ಸಾಲಿಗೆ ಹೊಸದಾಗಿ ಸಾರಿಗೆ ನಿಗಮಗಳು ಪಲ್ಲಕ್ಕಿ ಎಂಬ ಹೊಸ ಬ್ರಾಂಡ್‍ಗೆ ಚಾಲನೆ ನೀಡಿದೆ. ಸಂತೋಷ ಪ್ರಯಾಣದಲ್ಲಿದೆ ಎಂಬ ಅಡಿಬರಹದಡಿ ಪಲ್ಲಕ್ಕಿ ಸೇವೆಗಳು ಲೋಕಾರ್ಪಣೆಗೊಂಡಿವೆ. ಶಕ್ತಿ ಯೋಜನೆಯ ಉಚಿತ ಪ್ರಯಾಣ ಸ್ಲೀಪರ್ ಕೋಚ್ ಹೊರತುಪಡಿಸಿದರೆ ಉಳಿದಂತೆ ಎಲ್ಲಾ ಎಕ್ಸ್‍ಪ್ರೆಸ್ ಸಾರಿಗೆ ಸೇವೆಯಲ್ಲೂ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ, 500 ಕೋಟಿ ರೂ.ಗೆ ಬೇಡಿಕೆ

ದೂರದ ಪ್ರಯಾಣಗಳಿಗೆ ಕೆಎಸ್‍ಆರ್‍ಟಿಸಿಯಲ್ಲಿ ನಾನ್ ಎಸಿ ಸ್ಲೀಪರ್‍ಕೋಚ್‍ಗಳ ಬಸ್‍ಗಳು ಕಡಿಮೆ ಇದ್ದವು. ಅದರ ಬೇಡಿಕೆಯನ್ನು ಪರಿಗಣಿಸಿ ಹೊಸ ಬಸ್‍ಗಳನ್ನು ನಿಯೋಜಿಸಲಾಗಿದೆ. ನೂತನ ಬಸ್‍ಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಸ್‍ನ ಒಳ ವಿನ್ಯಾಸಗಳನ್ನು ಪರಿಶೀಲಿಸಿದರು. ರೈಲು ಸೇವೆಯಲ್ಲಿರುವಂತೆಯೇ ಆರಾಮದಾಯಕ ವ್ಯವಸ್ಥೆಗಳಿವೆ. ನಾನು ಕೂತು, ಮಲಗಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

6 ಗಂಟೆ ದೂರದ ಪ್ರಯಾಣ ಇರುವವರಿಗೆ ಇವು ಅನುಕೂಲವಾಗಿವೆ. ಪ್ರತಿ ಕಿ.ಮೀ.ಗೆ 2 ರೂ. ಪ್ರಯಾಣದರವನ್ನು ನಿಗದಿ ಮಾಡಲಾಗಿದೆ ಎಂದು ಕೆಎಸ್‍ಆರ್‍ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೀಟುಗಳನ್ನು ಪರಿಶೀಲಿಸಿದ್ದು, ಚೆನ್ನಾಗಿವೆ, ಪತಿ-ಪತ್ನಿ ಇಬ್ಬರೂ ಪ್ರಯಾಣಿಸಬಹುದು ಎಂದು ಹೇಳಿದರು.

RELATED ARTICLES

Latest News