Monday, July 15, 2024
Homeರಾಜ್ಯಇ ಪ್ರಕ್ಯೂರ್ಮೆಂಟ್ ಹ್ಯಾಕಿಂಗ್ ಪ್ರಕರಣ : ಐವರ ಮನೆ ಮೇಲೆ ದಾಳಿ

ಇ ಪ್ರಕ್ಯೂರ್ಮೆಂಟ್ ಹ್ಯಾಕಿಂಗ್ ಪ್ರಕರಣ : ಐವರ ಮನೆ ಮೇಲೆ ದಾಳಿ

ಬೆಂಗಳೂರು,ಅ.7- ಸರ್ಕಾರದ ಇ- ಪ್ರಕ್ಯೂರ್ಮೆಂಟ್ ವೆಬ್‍ಸೈಟ್ ಹ್ಯಾಕಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚುವರಿಯಾಗಿ ಮತ್ತಿಬ್ಬರನ್ನು ಬಂಸಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು ಸಾಕ್ಷ್ಯಗಳ ಸಂಗ್ರಹಕ್ಕಾಗಿ ನಗರದ ಐದು ಮಂದಿ ಪ್ರಮುಖ ವ್ಯಕ್ತಿಗಳ ಮನೆಗಳು ಸೇರಿದಂತೆ 7 ಕಡೆ ದಾಳಿ ಮಾಡಿ ಶೋಧ ಕಾರ್ಯಾ ಚರಣೆ ನಡೆಸಿದ್ದಾರೆ.

2019 ರಲ್ಲಿ ಬೆಳಕಿಗೆ ಬಂದಿದ್ದ ಇ-ಪ್ರಕ್ಯೂರ್ಮೆಂಟ್ ಹ್ಯಾಕಿಂಗ್ ಪ್ರಕರಣ ದಿನೇದಿನೇ ಕುತೂಹಲ ಕೆರಳಿಸುತ್ತಿದೆ. ಪ್ರಮುಖ ಆರೋಪಿ ಶ್ರೀಕಿ ನೀಡಿದ ಮಾಹಿತಿ ಆಧರಿಸಿ ಆರಂಭದಲ್ಲೇ 18 ಮಂದಿಯನ್ನು ಬಂಧಿಸಲಾಗಿತ್ತು. ಆದರೆ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಕೆಲಸ ಮಾಡಿದ ಪ್ರಮುಖ ಆರೋಪಿಗಳು ಹಾಗೂ ಮಧ್ಯವರ್ತಿಗಳು ಪ್ರಕರಣದಿಂದ ನುಣುಚಿಕೊಂಡಿದ್ದರು. ಕೆಲವರು ತಲೆಮರೆಸಿಕೊಂಡಿದ್ದರು.

ಕಾಂಗ್ರೆಸ್ ಸರ್ಕಾರ ರಚಿಸಿರುವ ವಿಶೇಷ ತನಿಖಾದಳ ಹ್ಯಾಕಿಂಗ್‍ನಿಂದ ಅಕ್ರಮವಾಗಿ ಗಳಿಸಿದ ಹಣವನ್ನು ವರ್ಗಾವಣೆ ಹಾಗೂ ಪಡೆದುಕೊಂಡವರ ಬೆನ್ನು ಬಿದ್ದಿದೆ. ತನಿಖೆಯ ಪ್ರಗತಿಯಲ್ಲಿ ನಾಗ್ಪುರದ ನಿತಿನ್ ಮಿಶ್ರಾ ಮತ್ತು ದರ್ಶಿತ್ ಪಟೇಲ್ ಎಂಬಿಬ್ಬರನ್ನು ಬಂಧಿಸಲಾಗಿದೆ.

ಸಾರ್ವಜನಿಕರಿಗೆ ಮೈಸೂರು ಅರಮನೆ ಪ್ರವೇಶ ನಿರ್ಬಂಧ

ಈ ಆರೋಪಿಗಳು 10.5 ಕೋಟಿ ರೂ. ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ಪಂಜಾಬ್‍ನ ಲೂದಿಯಾನದಲ್ಲಿ ಪ್ರಮುಖ ಆರೋಪಿ ಅರವಿಂದ್ ಸಿಂಗ್‍ನನ್ನು ಬಂಧಿಸಲಾಗಿತ್ತು. ಈವರೆಗೂ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ. ಆರೋಪಿ ಶ್ರೀಕಿ ಇ-ಪ್ರಕ್ಯೂರ್ಮೆಂಟ್, ಪೋಕರ್ ಗೇಮಿಂಗ್ ಸೇರಿದಂತೆ ವಿವಿಧ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂ. ಹಣ ಲಪಟಾಯಿಸಿದ್ದ ಆರೋಪಗಳಿವೆ. ಅವುಗಳನ್ನು ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ತನಿಖೆಗಳು ನಡೆಯುತ್ತಿವೆ.

ಬಿಟ್‍ಕಾಯಿನ್ ಹಾಗೂ ವೆಬ್‍ಸೈಟ್ ಹ್ಯಾಕಿಂಗ್ ಎರಡೂ ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳ ಮನೆ ಮೇಲೆ 7 ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ. ನ್ಯಾಯಾಲಯದಿಂದ ಅನುಮತಿ ಪಡೆದು ಶೋಧ ಕಾರ್ಯಾಚರಣೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಪೊಲೀಸರು 5 ಮಂದಿಯ ಮನೆ ಹಾಗೂ ಕಚೇರಿಗಳಲ್ಲಿ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

RELATED ARTICLES

Latest News