Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-09-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-09-2026)

Today's Horoscope

ನಿತ್ಯ ನೀತಿ : ತಾಯಿ ಭೂಮಿಯಂತೆ ಕ್ಷಮಯಾಧರಿತ್ರಿ ತಂದೆ ಆಕಾಶದಂತೆ ವಿಶಾಲ ಮನಸ್ಕ ತಾಯಿ, ತಂದೆಯೇ ಪ್ರತ್ಯಕ್ಷ ದೇವರುಗಳು.

ಪಂಚಾಂಗ : ಗುರುವಾರ, 10-09-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಶ್ರಾವಣ / ಪಕ್ಷ: ಕೃಷ್ಣ / ತಿಥಿ: ಚತುರ್ದಶಿ / ನಕ್ಷತ್ರ: ಮಘಾ / ಯೋಗ: ಸಿದ್ಧ / ಕರಣ: ಚತುಷ್ಪಾದ
ಸೂರ್ಯೋದಯ – ಬೆ.6.10
ಸೂರ್ಯಾಸ್ತ – 06.27
ರಾಹುಕಾಲ – 1.30- 3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00- 10.30

ರಾಶಿಭವಿಷ್ಯ :
ಮೇಷ
: ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ವರಿಗೆ ನಿರೀಕ್ಷಿತ ಲಾಭ ದೊರೆಯುವ ಸಾಧ್ಯತೆಯಿದೆ.
ವೃಷಭ: ಕಚೇರಿಯಲ್ಲಿ ಕೆಲವು ಹೊಸ ಮತ್ತು ಪ್ರಮುಖ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಲಿವೆ.
ಮಿಥುನ: ಹಣದ ಕೊರತೆ ದೂರವಾಗುತ್ತದೆ ಮತ್ತು ನಿಮ್ಮ ಎಲ್ಲಾ ಚಿಂತೆ, ತೊಂದರೆಗಳು ಸಹ ಕೊನೆಗೊಳ್ಳುತ್ತವೆ.

ಕಟಕ: ಶಿಕ್ಷಣ ಕ್ಷೇತ್ರ ದಲ್ಲಿ ಮಕ್ಕಳ ಕಾರ್ಯಕ್ಷಮತೆ ತುಂಬಾ ಉತ್ತಮವಾಗಿರುತ್ತದೆ. ಇದರಿಂದಾಗಿ ನೀವು ತುಂಬಾ ಸಂತೋಷವಾಗಿರುತ್ತೀರಿ.
ಸಿಂಹ: ಕಡಿಮೆ ಶ್ರಮದಲ್ಲಿ ಉತ್ತಮ ಲಾಭ ಪಡೆಯಬಹುದು. ಆದಾಯದಲ್ಲಿ ಹೆಚ್ಚಳ ವಾಗುವ ಲಕ್ಷಣಗಳಿವೆ.
ಕನ್ಯಾ: ಕೌಟುಂಬಿಕ ಜೀವನ ಸುಖಮಯವಾಗಿರು ತ್ತದೆ.

ತುಲಾ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ವೃಶ್ಚಿಕ: ಕೆಲವು ದೊಡ್ಡ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ನಿರ್ಲಕ್ಷ್ಯ ವಹಿಸದಿರುವುದು ಉತ್ತಮ.
ಧನುಸ್ಸು: ಮನೆಯ ಜವಾಬ್ದಾರಿಗಳನ್ನು ಪೂರೈಸು ವಲ್ಲಿ ಪ್ರೀತಿಪಾತ್ರರ ಬೆಂಬಲ ಪಡೆಯುತ್ತೀರಿ.

ಮಕರ: ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ದೂರ ಪ್ರಯಾಣ ಮಾಡದಿರಿ.
ಕುಂಭ: ವಾ್ಯಪಾರಕ್ಕೆ ಸಂಬಂಧಿಸಿದ ಜನರ ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು. ಉತ್ತಮ ದಿನ.
ಮೀನ: ಹಣದ ವಿಷಯದಲ್ಲಿ ದೊಡ್ಡ ಸಮಸ್ಯೆ ಇರುವುದಿಲ್ಲ. ಮನಸ್ಸಿಗೆ ನೆಮ್ಮದಿ ಸಿಗಲಿದೆ.

RELATED ARTICLES
spot_img

Latest News