Homeರಾಷ್ಟ್ರೀಯಕೃಷಿ ಅಭಿವೃದ್ಧಿಗೆ ಬಾಹ್ಯಾಕಾಶ ತಂತ್ರಜ್ಞಾನ ಬಳಸಿ : ಪ್ರಧಾನಿ ಮೋದಿ ಕರೆ

ಕೃಷಿ ಅಭಿವೃದ್ಧಿಗೆ ಬಾಹ್ಯಾಕಾಶ ತಂತ್ರಜ್ಞಾನ ಬಳಸಿ : ಪ್ರಧಾನಿ ಮೋದಿ ಕರೆ

PM Modi interacts with space startup founders, calls for wider use of space technology

ನವದೆಹಲಿ, ಆ.23- ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಉಪಗ್ರಹ ದತ್ತಾಂಶವನ್ನು ಕೇವಲ ರಾಕೆಟ್‌ ಉಡಾವಣೆಗಳಿಗೆ ಸೀಮಿತಗೊಳಿಸದೆ ಕೃಷಿ, ಹೈನುಗಾರಿಕೆ, ಪಶುಸಂಗೋಪನೆ ಮತ್ತು ಹವಾಮಾನ ಮುನ್ಸೂಚನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಳಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಖಾಸಗಿ ನವೋದ್ಯಮಗಳ ಸಿಇಒಗಳು ಹಾಗೂ ಸಂಸ್ಥಾಪಕ ರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಂವಾದ ವೇಳೆ ಕರೆ ನೀಡಿದ್ದಾರೆ. ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಉದ್ದೇಶ ಹೊದಲಾಗಿದೆ.

ಶಾಲಾ-ಕಾಲೇಜು ಹಂತದಿಂದಲೇ ಯುವಜನರಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸಲು ಸ್ಟಾರ್ಟ್‌ಅಪ್‌ಗಳು ಕೈಜೋಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇನ್‌ಸ್ಪೇಸ್‌‍-ಇ ಹಾಗೂ ಹೊಸ ಬಾಹ್ಯಾಕಾಶ ನೀತಿಯ ಮೂಲಕ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಪಾಲನ್ನು ಶೇ.8ಕ್ಕಿಂತ ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಕೃತಕ ಬುದ್ಧಿಮತ್ತೆ ಆಧರಿತ ಭೂ-ವೀಕ್ಷಣಾ ಉಪಗ್ರಹಗಳು ಹಾಗೂ ಮರುಬಳಕೆ ಮಾಡಬಹುದಾದ ರಾಕೆಟ್‌ಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.ಖಾಸಗಿ ವಲಯದ ಪಾಲ್ಗೊಳ್ಳುವಿಕೆ ಮತ್ತು ನಾವೀನ್ಯತೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ಮೂಲಕ ಭಾರತವನ್ನು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯ ಪ್ರಮುಖ ಶಕ್ತಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

ಸ್ಕೈ ರೂಟ್‌ ಏರೋಸ್ಪೇಸ್‌‍, ಅಗ್ನಿಕುಲ್‌ ಕಾಸೋಸ್‌‍, ಪಿಕ್ಸೆಲ್‌‍, ಧ್ರುವ್‌ ಸ್ಪೇಸ್‌‍, ಬೆಲ್ಲಾಟ್ರಿಕ್‌್ಸಏರೋಸ್ಪೇಸ್‌‍, ಗ್ಯಾಲಕ್ಸಿಐ ಮತ್ತು ದಿಗಂತರಾ ಸೇರಿದಂತೆ ಸುಮಾರು 20 ಪ್ರಮುಖ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಮುಖ್ಯಸ್ಥರು ಸಂವಾದದಲ್ಲಿ ಭಾಗವಹಿಸಿದ್ದಾರೆ.

RELATED ARTICLES
spot_img

Latest News