Friday, November 22, 2024
Homeರಾಜಕೀಯ | Politicsಕಾಂಗ್ರೆಸ್ಸಿಗರೇ ಬಿಜೆಪಿಗೆ ಬರ್ತಾರೆ, ನಮ್ಮವರು ಯಾರೂ ಪಕ್ಷ ಬಿಟ್ಟು ಹೋಗಲ್ಲ : ವಿಜಯೇಂದ್ರ

ಕಾಂಗ್ರೆಸ್ಸಿಗರೇ ಬಿಜೆಪಿಗೆ ಬರ್ತಾರೆ, ನಮ್ಮವರು ಯಾರೂ ಪಕ್ಷ ಬಿಟ್ಟು ಹೋಗಲ್ಲ : ವಿಜಯೇಂದ್ರ

ಬೆಂಗಳೂರು, ಮಾ.14- ನಮ್ಮ ಯಾವ ನಾಯಕರು ಕಾಂಗ್ರೆಸ್ಗೆ ಹೋಗಲ್ಲ ಅವರ ನಾಯಕರೇ ಬಿಜೆಪಿಗೆ ಬರ್ತಾರೆ. ಕಾಂಗ್ರೆಸ್ಗೆ ಅಂತಹ ದಮನೀಯ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟಾಂಗ್ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಟಿಕೇಟ್ ಕೈತಪ್ಪಿದ ನಾಯಕರು ಉಪಮುಖ್ಯಮಂತ್ರಿಗಳ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನಮ್ಮ ನಾಯಕರು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಒಟ್ಟಾರೆ ಚುನಾವಣೆಯನ್ನು ಎದುರಿಸುತ್ತೇವೆ. ಕಾಂಗ್ರೆಸ್ನ ನಾಯಕರೇ ಬಿಜೆಪಿಗೆ ಬರುತ್ತಾರೆ. ಪಕ್ಷದ ಸಿದ್ದಾಂತ ಒಪ್ಪಿ ಬಂದರೆ ಎಲ್ಲರನ್ನು ಗೌರವದಿಂದ ನೋಡಿಕೊಳ್ಳುತ್ತೇವೆ ಎಂದರು.

ಲೋಕಸಭಾ ಚುನಾವಣೆ ಎದುರಿಸುವ ಕಾಲಘಟ್ಟದಲ್ಲಿದ್ದೇವೆ. ಯಾವ ಕ್ಷಣದಲ್ಲಾದರೂ ಚುನಾವಣಾ ದಿನಾಂಕ ಘೋಷಣೆಯಾಗಬಹುದು. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ಅಲೆ ನೋಡುತ್ತಿದ್ದೇವೆ. ರಾಜ್ಯದಲ್ಲೂ ಸಹ ಬದಲಾವಣೆಯ ಗಾಳಿ ಬೀಸುತ್ತಿದೆ. ಚುನಾವಣೆಯಲ್ಲಿ ಯಾವ ವಾತಾವರಣ ಇದೆ ಎಂಬುದನ್ನು ತೋರಿಸುತ್ತೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ನಿಂದ ಮತ್ತಷ್ಟು ಮುಖಂಡರು ಬಿಜೆಪಿ ಸೇರಲಿದ್ದಾರೆ.

ಟಿಕೆಟ್ ಘೋಷಣೆಯಲ್ಲಿ ಕೆಲವು ಹಾಲಿ ಸಂಸದರಿಗೆ ನಿರಾಕರಣೆಯಾಗಿದ್ದು, ಹೊಸ ಮುಖಗಳಿಗೆ ಅವಕಾಶ ಸಿಕ್ಕಿದೆ. ಕಳೆದ ಒಂದು ತಿಂಗಳಿನಿಂದ ಮೂರು ಜನ ವೀಕ್ಷಕರು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಲಾಗಿದೆ. ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡುವ ಕೆಲಸವಾಗಿದೆ. ಟಿಕೇಟ್ ಕೊಡುವುದನ್ನು ಒಬ್ಬರು ಕೂತು ಮಾಡಿರುವ ತೀರ್ಮಾನವಲ್ಲ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಶಕ್ತಿ ತುಂಬಲು ಟಿಕೇಟ್ ನೀಡಲಾಗಿದೆ. ಕೆಲವು ಅಭ್ಯಾರ್ಥಿಗಳ ಪೈಕಿ ಹಳೆ ಮೈಸೂರು ಭಾಗಗಳಲ್ಲಿ ಹೆಚ್ಚು ಒತ್ತು ಕೊಡಲಾಗಿದೆ.

ನಮ್ಮ ಸಿಎಂ ಯಾವಾಗಲೂ ಹೇಳ್ತಾರೆ. ಬಿಜೆಪಿ ಯಾವಾಗ ಸ್ವಾತಂತ್ರ್ಯವಾಗಿ ಅಧಿಕಾರಕ್ಕೆ ಬಂದಿದೆ ಅಂತ ಅದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಬದಲಾವಣೆ ತರಲಾಗಿದೆ. ನಮ್ಮ ಕಾರ್ಯಕರ್ತರ ಶ್ರಮವನ್ನು ಗಮನದಲ್ಲಿಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಹೊಸ ದಾಖಲೆ ಬರೆಯಲಿದೆ ಎಂದರು.

ಪಕ್ಷದಲ್ಲೂ ಸಣ್ಣಪುಟ್ಟ ವ್ಯತ್ಯಾಸವಿರುತ್ತವೆ. ಆದರೂ ಎಲ್ಲರೂ ಒಗ್ಗಟಾಗಿ ಕೆಲಸ ಮಾಡುತ್ತಾರೆ. ಈಶ್ವರಪ್ಪ ಅವರ ಜೊತೆ ನಮ್ಮ ಹಿರಿಯ ನಾಯಕರು ಮಾತನಾಡಿ, ಮನವೊಲಿಸಲಿದ್ದಾರೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಉಳಿದ ಕ್ಷೇತ್ರಗಳಿಗೆ ಟಿಕೇಟ್ ಘೋಷಣೆಯಾಗಲಿದೆ.

RELATED ARTICLES

Latest News