Homeರಾಜ್ಯಹಿತ್ತಾಳೆ ಗಂಟೆಗಳಲ್ಲಿ ಮೂಡಿದ ನಾದಗಣೇಶ

ಹಿತ್ತಾಳೆ ಗಂಟೆಗಳಲ್ಲಿ ಮೂಡಿದ ನಾದಗಣೇಶ

ಬೆಂಗಳೂರು,ಸೆ.10- ಎಲೆಕ್ಟ್ರಾನಿಕ್‌ ಸಿಟಿಯ ಎಂ5 ಇಸಿಟಿ ಮಾಲ್‌ನಲ್ಲಿ ಗಣೇಶ ಚತುರ್ಥಿಯ ಸಂಭ್ರಮದ ಪ್ರಯುಕ್ತ 2,000ಕ್ಕೂ ಹೆಚ್ಚು ಸಾಂಪ್ರದಾಯಿಕ ಹಿತ್ತಾಳೆ ಗಂಟೆಗಳಿಂದ ರಚಿಸಲಾದ ಅಪರೂಪದ ಗಣೇಶನ ಮೂರ್ತಿಯನ್ನು ಅನಾವರಣಗೊಳಿಸಿದೆ.

ಈ ಗಣಪತಿ ಕಲಾಕೃತಿಯು ಕೇವಲ ಗಾತ್ರದಿಂದಷ್ಟೇ ಅದ್ದೂರಿಯಾಗಿಲ್ಲ, ಬದಲಿಗೆ 2.5 ರಿಂದ 5 ಇಂಚುಗಳವರೆಗಿನ ಸಾವಿರಾರು ಗಂಟೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಜೋಡಿಸಿ ನಿರ್ಮಿಸಿರುವ ವಿಶಿಷ್ಟ ರೂಪದಿಂದ ಗಮನ ಸೆಳೆಯುತ್ತದೆ.

ಸೆ.15ರ ವರೆಗೆ ಮಾಲ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವ ಈ ಗಣೇಶ ಮೂರ್ತಿಯು ಈ ಹಬ್ಬದ ದಿನಗಳಲ್ಲಿ ಅತ್ಯಂತ ಪ್ರಮುಖ ಆಕರ್ಷಣೀಯ ತಾಣವಾಗಿ ಕಣನ ಸೆಳೆಯಲಿದೆ. ಗಣೇಶ ಚತುರ್ಥಿ ನಂತರ, ಈ ಕಲಾಕೃತಿಯಲ್ಲಿ ಬಳಸಲಾದ 2,000ಕ್ಕೂ ಹೆಚ್ಚು ಹಿತ್ತಾಳೆ ಗಂಟೆಗಳನ್ನು ಆಶೀರ್ವಾದದ ನೆನಪಿನ ಕಾಣಿಕೆಯಾಗಿ ಗ್ರಾಹಕರಿಗೆ ವಿತರಿಸಲಾಗುತ್ತದೆ.

ಈ ಮೂಲಕ ಸಾರ್ವಜನಿಕ ಪ್ರದರ್ಶನದಲ್ಲಿದ್ದ ಪ್ರತಿಯೊಂದು ಗಂಟೆಯೂ ಭಕ್ತಿಯ ವೈಯಕ್ತಿಕ ಸಂಕೇತವಾಗಿ ಬದಲಾಗುತ್ತದೆ. ಇದರಿಂದಾಗಿ ಸಂದರ್ಶಕರು ಕೇವಲ ನೆನಪಿನ ಕಾಣಿಕೆಯನ್ನಷ್ಟೇ ಅಲ್ಲದೆ, ಗಣಪತಿಯ ಆಶೀರ್ವಾದ, ಮಂಗಳಕರತೆಯ ಸಂಕೇತ ಹಾಗೂ ಎಂ5 ಇಸಿಟಿ ಮಾಲ್ನ ಹಬ್ಬದ ಸಂಭ್ರಮದ ನೆನಪನ್ನು ತಮ್ಮ ಮನೆಗಳಿಗೆ ಕೊಂಡೊಯ್ಯಲಿದ್ದಾರೆ.

RELATED ARTICLES
spot_img

Latest News