Thursday, April 16, 2026
Homeರಾಜ್ಯಈಗಲೂ ನಾನೇ ಸಿಎಂ, ಮುಂದೆಯೂ ನಾನೇ ಸಿಎಂ : ಸಿದ್ದರಾಮಯ್ಯ

ಈಗಲೂ ನಾನೇ ಸಿಎಂ, ಮುಂದೆಯೂ ನಾನೇ ಸಿಎಂ : ಸಿದ್ದರಾಮಯ್ಯ

I am still the CM, I will be the CM in the future: Siddaramaiah

ಬೆಳಗಾವಿ, ಡಿ.16- ರಾಜ್ಯದ ಜನ ಐದು ವರ್ಷ ಅಧಿಕಾರ ನಡೆಸಲು ನಮಗೆ ಆಶೀರ್ವಾದ ಮಾಡಿ ದ್ದಾರೆ. ಈಗಲೂ ಮುಖ್ಯಮಂತ್ರಿ, ಮುಂದೆಯೂ ನಾನೇ ಮುಖ್ಯಮಂತ್ರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಯಲ್ಲಿಂದು ತಿಳಿಸಿದರು.

ಪ್ರಶ್ನೊತ್ತರ ವೇಳೆಯಲ್ಲಿ ಆಡಳಿತ ಪಕ್ಷದ ಶಾಸಕರಾ ಡಾ. ಹೆಚ್‌.ಡಿ.ರಂಗನಾಥ್‌ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಮುಖ್ಯಮಂತ್ರಿಗಳು ತಾರತಮ್ಯವಾಗಿದ್ದರೆ ಮುಂದಿನ ವರ್ಷದಿಂದ ಸರಿಪಡಿಸವುದಾಗಿ ಭರವಸೆಯನ್ನು ನೀಡಿದರು.ಆಗ ವಿರೋಧ ಪಕ್ಷದ ನಾಯಕ ಅಶೋಕ್‌, ರಂಗನಾಥ್‌ ಅವರು ಆಕ್ರೋಶಭರಿತರಾಗಿ ಮಾತನಾಡುತ್ತಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉರಿಯುವುದಕ್ಕೆ ಉಪ್ಪು ಹಾಕಬೇಡಿ ಎಂದರು, ಕೂಡಲೇ ಅಶೋಕ್‌ ಹಾಗಾದರೆ ಉರಿಯುತ್ತಿರುವುದು ನಿಜ ಎಂಬಂತೆ ಒಪ್ಪಿಕೊಂಡಂತಾಯಿತಲ್ಲ ಎಂದು ಸಿಎಂ ಅವರನ್ನು ಛೇಡಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಅವರು ಇದು ಗಾದೆ ಮಾತು ಎಂದು ಸ್ಪಷ್ಟನೆ ನೀಡಿದರು. ಆಗ ಮಧ್ಯಪ್ರವೇಶಿಸಿದ ಸುನೀಲ್‌ಕುಮಾರ್‌ ನೀವು ಹೇಳಿದ್ದು ಗಾದೆ ಮಾತೋ ಅಥವಾ ಮನಸ್ಸಿನಲ್ಲಿರುವ ಮಾತು ಹೇಳಿದ್ದಿರೋ ಎಂದು ಸ್ಪಷ್ಟನೆಯನ್ನು ಕೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯಮಾತು ಮುಂದುವರಿಸಿ, 2018ರಲ್ಲಿ ನಮಗೆ ಜನಾದೇಶವಿರಲಿಲ್ಲ. ನಾವು ಜೆಡಿಎಸ್‌‍ ಮನೆ ಬಾಗಿಲಿಗೆ ಹೋಗಿರಲಿಲ್ಲ, ನೀವು(ಬಿಜೆಪಿ) ಏಕೆ ಅವರ ಜೊತೆ ಹೋಗಿದ್ದೀರಿ? ಎಂದು ಪ್ರಶ್ನಿಸಿದರು.

ಇದೇ ರೀತಿ ಬಿಜೆಪಿ ಶಾಸಕರು ಮತ್ತು ಮುಖ್ಯಮಂತ್ರಿಗಳ ನಡುವೆ ವಾಗ್ವಾದ ನಡೆಯಿತು. ಮುಖ್ಯಮಂತ್ರಿ ನೀವು ಹಿಂಬಾಗಿಲ ಮೂಲಕ, ಆಪರೇಷನ್‌ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದೀರಿ, 140 ಶಾಸಕರು ನಮ ಜತೆಯೇ ಇದ್ದಾರೆ. ನೀವು ಹುಳಿ ಹಿಂಡಬೇಡಿ, 2028ರ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆೆ ಬರುತ್ತೇವೆ. ನಿಮಗೆ ವಿರೋಧಪಕ್ಷವೇ ಗ್ಯಾರಂಟಿ ಎಂದು ಹೇಳಿದರು.

ಒಂದು ಹಂತದಲ್ಲಿ ಅವರು ಸುಮನಿದ್ದರೂ, ನೀವು ಸುಮನಿರಲ್ಲ. ವಿರೋಧ ಪಕ್ಷ ಇರುವುದೇ ಉಪ್ಪು ಹಾಕಲು, ಕಿತಾಪತಿಗೆ ಪ್ರಚೋದನೆ ಮಾಡಲು. ನೀವು ಏನೇ ಮಾಡಿದರೂ ನಮವರು ಪ್ರಚೋದೆಗೆ ಒಳಗಾಗಲ್ಲ. ಜನರು ನಮಗೆ ಆಶೀರ್ವಾದ ಮಾಡಿ ಸರ್ಕಾರದಲ್ಲಿ ಇರಿ ಎಂದು ಹೇಳಿದ್ದಾರೆ. ನಾವೇ ಇರುತ್ತೇವೆ. ಈ ಬಗ್ಗೆ ನಿಮಗೆ ಅನುಮಾನ ಬೇಡ ಎಂದರು. ಗೃಹ ಸಚಿವ ಪರವಮೇಶ್ವರ್‌ ಮಾತನಾಡಿ,ಜನರು 5 ವರ್ಷ ಅಧಿಕಾರ ನಡೆಸಲು ಆಶೀರ್ವಾದ ಮಾಡಿದ್ದಾರೆ,, ಅದರಂತೆ ನಾವು ಅಧಿಕಾರವಧಿಯನ್ನು ಸಂಫೂರ್ಣಗೊಳಿಸುತ್ತೇವೆ ಎಂದು ಹೇಳ ಬಯಸಿದರು.

ಮಾತು ಮುಂದುವರಿಸಿದ ಮುಖ್ಯಮಂತ್ರಿಸಿದ್ದರಾಮಯ್ಯ, ಹೈಕಮಾಂಡ್‌ ಹೇಳಿದ ಹಾಗೇ ಕೇಳುತ್ತೇವೆ, ನಿಮಲ್ಲಿ ಹೇಗೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ನಮ ಅಧಿಕಾರ ನೋಡಿ ಹೊಟ್ಟೆ ಕಿಚ್ಚು ಪಡುತ್ತಿದ್ದೀರಿ ಎಂದು ವಿಪಕ್ಷವನ್ನು ಛೇಡಿಸಿದರು. ಅಶೋೕಕ್‌ ಮಾತನಾಡಿ, ಪೂಜೆ ಪುನಸ್ಕಾರ ಮಾಡುತಿದ್ದೀರಿ, ಜೆಡಿಎಸ್‌‍ ಅವರ ಬಾಗಿಲಿಗೆ ಹೋಗಿದ್ದರು ಎಂದು ಹೇಳುತ್ತಾರೆ ಎಂದು ಮಾತಿಗೆಳೆದು, ಒಂದು ದಿನ ಅವರೇ ಉಪ್ಪು ಹಾಕುತ್ತಾರೆ ಎಂದರು.

ಮುಖ್ಯಮಂತ್ರಿ ಮಾತು ಮುದುವರಿಸಿ, ನಮಲ್ಲಿ ಹೈಕಮಾಂಡ್‌ ಮಾತಿನಂತೆ ನಡೆದುಕೊಳ್ಳುತ್ತೇವೆ. ಜನಾಶೀರ್ವಾದ ಇದೆ. ನಿಮಗೆ ಒಮೆಯೂ ಮಾಡಿಲ್ಲ ಮುಂದೆಯೂ ಮಾಡುವುದೂ ಇಲ್ಲ. ನಿಮಗೆ ವಿಪಕ್ಷವೇ ಶಾಶ್ವತ, ನೀವು ಜೆಡಿಎಸ್‌‍ ಅವರ ಜೊತೆ ಹೋಗಿರಲಿಲ್ಲವೇ ಎಂದು ತಿರುಗೇಟು ನೀಡಿದರು.

ಒಂದು ಹಂತದಲ್ಲಿ ವಿಪಕ್ಷದ ಉಪ ನಾಯಕ ಅರವಿಂದ್‌ ಬೆಲ್ಲದ ಮಾತನಾಡಿ, ಹೈಕಮಾಂಡ್‌ ಡಿಸಿಎಂ ಅವರಿಗೆ ಏನೂ ಹೇಳಲಿಲ್ಲ ಎಂದರು. ಸುರೇಶ್‌ಕುಮಾರ್‌ ಮಾತನಾಡಿ, ನಾನು ಎಂಬ ಏಕವಚನದಿಂದ ನಾವು ಎಂಬ ಬಹುವಚನದವರೆಗೆ ಎಂಬಂತಿದ್ದೀರಿ ಎಂದು ಕನಕದಾಸರ ವಾಣಿಯೊಂದನ್ನು ಉಲ್ಲೇಖಿಸಿದರು.

ಆಗ ಮಾತನಾಡಿದ ಸಿಎಂ, ನಾನು ಹೋದರೆ ಹೋದೇನು ಎಂಬುದು ಕನಕದಾಸರವಾಣಿ ಎಂದರಲ್ಲದೇ, ನಾನೇ ಈಗ ಸಿಎಂ, ಮುಂದೆಯೂ ಸಿಎಂ ಎಲ್ಲಿಯವರೆಗೆ ಹೈಕಮಾಂಡ್‌ ಮುಂದುವರಿಯಲು ಹೇಳುತ್ತೋ ಎಂದು ಮಾತು ಮುಂದುವರಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಸುನೀಲ್‌ ಕುಮಾರ್‌ ಇದನ್ನೇ ನಾವು ಕೇಳಿದ್ದು ಎಂದರು.

ಶಾಸಕ ಬಸವನಗೌಡ ಯತ್ನಾಳ್‌ ಮಾತನಾಡಿ, ಐದು ವರ್ಷ ಮುಖ್ಯಮಂತ್ರಿ ಯಾರು? ಸಿದ್ದರಾಮಯ್ಯ ಅವರೇ ಆಗಿರುತ್ತಾರೋ, ಇಲ್ಲವೋ ಎಂಬುದನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಮಾತನಾಡಿ, ನಿಮ ಪಕ್ಷದ ಬಿಎಸ್‌‍ಯಡಿಯೂರಪ್ಪ ಅವರನ್ನು 3 ಬಾರಿ ಏಕೆ ಬದಲಾಯಿಸಿದ್ದೀರಿ ಎಂದು ಕೇಳಿದರು. ಆಗ ಅಶೋಕ್‌ ಮಾತನಾಡಿ, ನಾನು ಪುಸ್ತಕ ಬರೆಯಬೇಕು ಎಂದು ಕೊಂಡಿದ್ದೇನೆ. ಚಾಣಕ್ಯ ತಂತ್ರ ಅಂದರೆ ಸಿದ್ದರಾಮಯ್ಯ ಅವರ ಚಾಣಕ್ಯ ತನದ್ದಾಗಿದೆ ಎಂದರು. ಒಂದು ಇರುವೆ ಬೇಲಿಗೆ ಹೋಗಬೇಕು ಎಂದು ಬರುತ್ತದೆ ಎಂದು ಹೇಳಿದಾಗ ಸದನದಲ್ಲಿ ಗದ್ದಲ ಉಂಟಾಯಿತು,

ಗೊಂದಲದ ನಡುವೆಯೇ ಮಾತನಾಡಿದ ಅಶೋಕ್‌, ಇರುವೆ ರಾಹುಲ್‌ಗಾಂಧಿ ಅವರ ಜೇಬು ಸೇರಿದೆ ಎಂದು ವ್ಯಂಗ್ಯವಾಡಿದರು, ಇದಕ್ಕೆ ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯಿಸಿ ಮೊದಲು ನೀವು ಪುಸ್ತಕ ಬರೆಯಿರಿ ಎಂದರು. ಸಭಾಧ್ಯಕ್ಷರಾದ ಯು ಟಿ ಖಾದರ್‌ ಮದ್ಯಪ್ರವೇಶಿಸಿ, ಈ ವಿಚಾರದ ಚರ್ಚೆಗೆ ತೆರೆ ಎಳೆದು ಮುಂದಿನ ಕಾರ್ಯ ಕಲಾಪವನ್ನು ಮುಂದುವರೆಸಿ ಎಂದರು.

RELATED ARTICLES

Latest News