Homeರಾಜ್ಯದಸರಾ ಗಜಪಡೆಗೆ ತೂಕ ಪರೀಕ್ಷೆ : ಬಲುಭಾರವಾಗಿದ್ದಾನೆ ಶ್ರೀಕಂಠ

ದಸರಾ ಗಜಪಡೆಗೆ ತೂಕ ಪರೀಕ್ಷೆ : ಬಲುಭಾರವಾಗಿದ್ದಾನೆ ಶ್ರೀಕಂಠ

Weight test for Dasara Elephants

ಮೈಸೂರು, ಆ.30– ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮೊದಲ ತಂಡದ ಗಜಪಡೆಯ 9 ಆನೆಗಳ ತೂಕ ಪರೀಕ್ಷೆ ನಡೆಸಲಾಗಿದೆ. 5,790 ಕೆಜಿ ತೂಕ ಹೊಂದಿರುವ ಶ್ರೀಕಂಠ ಅತಿ ಹೆಚ್ಚು ತೂಕದ ಆನೆಯಾಗಿ ಮುಂಚೂಣಿಯಲ್ಲಿದ್ದಾನೆ.

ಹುಣಸೂರಿನ ವೀರನಹೊಸಳ್ಳಿಯಿಂದ ಆಗಮಿಸಿದ ಮೊದಲ ತಂಡದ 9 ಆನೆಗಳು ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಪ್ರವೇಶಿಸಿದ್ದು, ಬಳಿಕ ಎಲ್ಲಾ ಆನೆಗಳ ಆರೋಗ್ಯ ತಪಾಸಣೆ ಹಾಗೂ ತೂಕ ಪರೀಕ್ಷೆ ನಡೆಸಲಾಯಿತು.

ದೇವರಾಜ ಮೊಹಲ್ಲಾದ ಸಾಯಿರಾಂ ತೂಕ ಮಾಪನ ಕೇಂದ್ರದಲ್ಲಿ ಧನಂಜಯ, ಮಹೇಂದ್ರ, ಪ್ರಶಾಂತ, ಏಕಲವ್ಯ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮಿ ಹಾಗೂ ಕಾವೇರಿ ಆನೆಗಳ ತೂಕ ಪರೀಕ್ಷೆ ನಡೆಯಿತು.

ಆನೆಗಳ ತೂಕ ವಿವರ:

  • ಶ್ರೀಕಂಠ – 5,790 ಕೆಜಿ
  • ಏಕಲವ್ಯ – 5,600 ಕೆಜಿ
  • ಧನಂಜಯ – 5,530 ಕೆಜಿ
  • ಮಹೇಂದ್ರ – 5,490 ಕೆಜಿ
  • ಪ್ರಶಾಂತ – 5,205 ಕೆಜಿ
  • ಗೋಪಿ – 5,170 ಕೆಜಿ
  • ಶ್ರೀರಾಮ – 4,820 ಕೆಜಿ
  • ಲಕ್ಷ್ಮಿ – 3,990 ಕೆಜಿ
  • ಕಾವೇರಿ – 3,075 ಕೆಜಿ

ಎಲ್ಲ ಆನೆಗಳು ಆರೋಗ್ಯವಾಗಿದ್ದು, ಮುಂಬರುವ ಜಂಬೂಸವಾರಿಗೆ ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ. ಆನೆಗಳಿಗೆ ತಾಲೀಮು ಆರಂಭಿಸಲು ಅರಣ್ಯ ಇಲಾಖೆ, ಮಾವುತರು ಹಾಗೂ ಕಾವಾಡಿಗರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

RELATED ARTICLES
spot_img

Latest News