Homeರಾಷ್ಟ್ರೀಯವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ ಹೆಚ್ಚಳ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ ಹೆಚ್ಚಳ

ನವದೆಹಲಿ,ಸೆ.1- ಹೊಸ ತಿಂಗಳ ಆರಂಭದಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಮಾಲೀಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿವೆ. 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಹೆಚ್ಚಳ ಮಾಡಲಾಗಿದ್ದು, ವಾಣಿಜ್ಯ ಬಳಕೆದಾರರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಪ್ರಕಟಿಸಿದ ಮಾಹಿತಿಯ ಪ್ರಕಾರ, ಕಮರ್ಷಿಯಲ್‌ ಸಿಲಿಂಡರ್‌ ಒಂದರ ಮೇಲೆ 9.50 ರೂಪಾಯಿವರೆಗೆ ದರ ಪರಿಷ್ಕರಿಸಿ ಏರಿಕೆ ಮಾಡಲಾಗಿದೆ. ಆದಾಗ್ಯೂ, ಗೃಹ ಬಳಕೆದಾರರಿಗೆ ತೈಲ ಕಂಪನಿಗಳು ಕೊಂಚ ರಿಲೀಫ್‌ ನೀಡಿವೆ. 14 ಕೆಜಿ ತೂಕದ ಸಾಮಾನ್ಯ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಾಗೆಯೇ 5 ಕೆಜಿ ಮತ್ತು 10 ಕೆಜಿ ಸಿಲಿಂಡರ್‌ ಬೆಲೆಗಳೂ ಕೂಡ ಯಥಾಸ್ಥಿತಿಯಲ್ಲಿ ಮುಂದುವರಿದಿವೆ.

ಕಳೆದ ತಿಂಗಳುಗಳಲ್ಲೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮತ್ತು ಅನಿಲ ಬೆಲೆಗಳಲ್ಲಿ ಉಂಟಾದ ವ್ಯತ್ಯಾಸ ಹಾಗೂ ಸಾಗಾಣಿಕೆ ವೆಚ್ಚದ ಆಧಾರದ ಮೇಲೆ ತೈಲ ಕಂಪನಿಗಳು ನಿಯಮಿತವಾಗಿ ಸಿಲಿಂಡರ್‌ ಬೆಲೆಗಳನ್ನು ಪರಿಷ್ಕರಿಸುತ್ತ ಬಂದಿವೆ. ಈ ಬಾರಿಯೂ ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಮಾತ್ರ ಹೆಚ್ಚಾಗಿದ್ದು, ಗೃಹ ಬಳಕೆದಾರರಿಗೆ ಯಾವುದೇ ಬೆಲೆ ಏರಿಕೆಯ ಬಿಸಿ ತಟ್ಟಿಲ್ಲದಿರುವುದು ಸಮಾಧಾನಕರ ಸಂಗತಿಯಾಗಿದೆ.

5 ಕೆಜಿ ಸಿಲಿಂಡರ್‌ಗೂ ದರ ಹೆಚ್ಚಳ :
19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಜತೆಗೆ 5 ಕೆಜಿ ನಾನ್‌-ಡೊಮೆಸ್ಟಿಕ್‌ ಐPಉ ರಿಫಿಲ್‌ ದರವೂ 2 ರೂ.ಗಳಷ್ಟು ಹೆಚ್ಚಾಗಿದೆ. ದೆಹಲಿ ಸೇರಿದಂತೆ ಹಲವು ಕಡೆ ಇದರ ದರ 762 ರೂ.ಗಳಿಂದ 764ರೂ.ವರೆಗೆ ಏರಿಕೆಯಾಗಿದೆ. ಆದರೆ ಗೃಹ ಬಳಕೆಯ 5 ಕೆಜಿ ಸಿಲಿಂಡರ್‌ ಹಾಗೂ ಘಿಖಿಖಂಐIಖಿಇ ಸೇರಿದಂತೆ ಕೆಲವು ಇತರೆ ವರ್ಗಗಳ ದರದಲ್ಲಿ ಬದಲಾವಣೆ ಇಲ್ಲ.

ಆಗಸ್ಟ್‌ನಲ್ಲಿ ಭಾರಿ ಇಳಿಕೆ; ಸೆಪ್ಟೆಂಬರ್‌ನಲ್ಲಿ ಮತ್ತೆ ಏರಿಕೆ :
ಈ ದರ ಪರಿಷ್ಕರಣೆಯನ್ನು ಪ್ರತ್ಯೇಕವಾಗಿ ನೋಡಿದರೆ ಪರಿಣಾಮ ಸಣ್ಣದಾಗಿ ಕಾಣಬಹುದು. ಆದರೆ ಕಳೆದ ಕೆಲವು ತಿಂಗಳ ಬೆಲೆ ಚಲನವಲನ ಗಮನಿಸಿದರೆ ವಾಣಿಜ್ಯ ಔಎ ದರದಲ್ಲಿ ಸಾಕಷ್ಟು ಏರಿಳಿತ ಕಂಡುಬಂದಿದೆ.
ಜುಲೈ 1, 2026ರಂದು 19 ಕೆಜಿ ವಾಣಿಜ್ಯ ಸಿಲಿಂಡರ್‌ ದರವನ್ನು ದೆಹಲಿಯಲ್ಲಿ 183.50 ರೂ.ಗಳಷ್ಟು ಕಡಿತಗೊಳಿಸಲಾಗಿತ್ತು. ಆಗ ದೆಹಲಿಯ ದರ 3,113.50 ರೂ.ಗಳಿಂದ 2,930ರೂ.ಗಳವರೆಗೆ ಇಳಿದಿತ್ತು. ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಿದ್ದ ಇಂಧನ ಪೂರೈಕೆ ಒತ್ತಡ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಈ ಕಡಿತಕ್ಕೆ ದಾರಿ ಮಾಡಿಕೊಟ್ಟಿತ್ತು.

ಆ ಬಳಿಕ ಆಗಸ್ಟ್‌ 1ರಂದು ಮತ್ತೊಮೆ ದೊಡ್ಡ ಪ್ರಮಾಣದ ಕಡಿತ ಕಂಡುಬಂದಿತ್ತು. ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್‌ ದರ 202 ರೂ.ಗೆ ಇಳಿದು 2,738ರೂ.ಗೆ ತಲುಪಿತ್ತು. ಕೋಲ್ಕತ್ತಾದಲ್ಲಿ 209ರೂ.ನಷ್ಟು ಕಡಿತವಾಗಿ 2,872.50 ರೂ.ಗೆ ಇಳಿದಿತ್ತು. ಬೆಂಗಳೂರಿನಲ್ಲಿ ಆಗಸ್ಟ್‌ನಲ್ಲಿ ದರ 2,821 ರೂ.ಗಳಷ್ಟಿತ್ತು.

ಹೀಗಾಗಿ, ಆಗಸ್ಟ್‌ನ ಭಾರಿ ಕಡಿತದ ನಂತರ ಸೆಪ್ಟೆಂಬರ್‌ನಲ್ಲಿ ಮತ್ತೆ ದರ ಏರಿಕೆಯಾಗಿರುವುದು ವಾಣಿಜ್ಯ ಬಳಕೆದಾರರ ಗಮನ ಸೆಳೆದಿದೆ. ಬೆಂಗಳೂರಿನಲ್ಲೇ ಆಗಸ್ಟ್‌ನ 2,821 ರೂ. ದರ ಸೆಪ್ಟೆಂಬರ್‌ನಲ್ಲಿ 2,831 ರೂ.ಗೆ ಏರಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ ದರಗಳು:
ದೆಹಲಿ: 2,747.50 ರೂ.
ನೋ್ಡಾ: 2,747.50 ರೂ.
ಮುಂಬೈ: 2,701.00 ರೂ.
ಕೋಲ್ಕತ್ತಾ: 2,982.00 ರೂ.
ಚೆನ್ನೈ: 2,916.50 ರೂ.
ಪ್ರಮುಖ ನಗರಗಳಲ್ಲಿ ಗಹ ಬಳಕೆಯ ಸಿಲಿಂಡರ್‌ ದರಗಳು:
ದೆಹಲಿ: 942.00 ರೂ.
ಮುಂಬೈ: 941.50 ರೂ.
ಕೋಲ್ಕತ್ತಾ: 968.00 ರೂ.
ಚೆನ್ನೈ: 957.50 ರೂ.

RELATED ARTICLES
spot_img

Latest News