Homeಇದೀಗ ಬಂದ ಸುದ್ದಿಗೃಹಜ್ಯೋತಿ ಫಲಾನುಭವಿ ಪರಿಶೀಲನೆ ಗಡುವು ಸೆ.30ರವರೆಗೆ ವಿಸ್ತರಣೆ

ಗೃಹಜ್ಯೋತಿ ಫಲಾನುಭವಿ ಪರಿಶೀಲನೆ ಗಡುವು ಸೆ.30ರವರೆಗೆ ವಿಸ್ತರಣೆ

ಬೆಂಗಳೂರು, ಸೆ.1- ರಾಜ್ಯದಲ್ಲಿ ನಡೆಯುತ್ತಿರುವ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪುನರ್‌ ಪರಿಶೀಲನಾ ಸಮೀಕ್ಷೆಯ ಅವಧಿಯನ್ನು ಸರ್ಕಾರ ಮತ್ತೊಂದು ತಿಂಗಳ ಕಾಲ ವಿಸ್ತರಿಸಿದೆ. ಗ್ರಾಹಕರ ಅನುಕೂಲಕ್ಕಾಗಿ ಸೆ. 30ರವರೆಗೆ ಸಮೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ. 2023ರ ಜುಲೈನಲ್ಲಿ ಜಾರಿಗೊಂಡ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಅರ್ಹತೆ ಹಾಗೂ ದಾಖಲೆಗಳ ಪುನರ್‌ ಪರಿಶೀಲನೆಗಾಗಿ ಜುಲೈ 1, 2026ರಿಂದ ಮನೆ-ಮನೆ ಸಮೀಕ್ಷೆ ಆರಂಭಿಸಲಾಗಿತ್ತು. ಈ ಕಾರ್ಯದಲ್ಲಿ ಬೆಸ್ಕಾಂ ಸೇರಿದಂತೆ ರಾಜ್ಯದ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳ ಮೀಟರ್‌ ರೀಡರ್‌ಗಳು ಮನೆಗಳಿಗೆ ತೆರಳಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರ.

ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಒಟ್ಟು 68,86,860 ಗೃಹಜ್ಯೋತಿ ಫಲಾನುಭವಿಗಳಿದ್ದು, ಆಗಸ್ಟ್‌ 31ರ ವೇಳೆಗೆ 46,70,588 ಫಲಾನುಭವಿಗಳ ಸಮೀಕ್ಷೆ ಪೂರ್ಣಗೊಂಡಿದೆ. ಅಂದರೆ ಬೆಸ್ಕಾಂ ವ್ಯಾಪ್ತಿಯಲ್ಲಿ ಶೇ.70ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಬಾಕಿ ಉಳಿದ ಫಲಾನುಭವಿಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲು ಅವಧಿ ವಿಸ್ತರಿಸಲಾಗಿದೆ. ಗ್ರಾಹಕರು ಯಾವುದೇ ಗೊಂದಲ ಅಥವಾ ಮಾಹಿತಿ ಪಡೆಯಲು ಬೆಸ್ಕಾಂ ಬಿಡುಗಡೆ ಮಾಡಿರುವ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಸಹಾಯವಾಣಿ:9480816111948081611294808161139480816114 ಮೊಬೈಲ್‌ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

ವಿವಿಧ ಎಸ್ಕಾಂಗಳಲ್ಲಿ ಪೂರ್ಣಗೊಂಡ ಸಮೀಕ್ಷೆ:
ಬೆಸ್ಕಾಂ; 46,43,661
ಸಿಎಎಸ್‌‍ಸಿ; 15,66,592
ಜೆಸ್ಕಾಂ; 11,87,132
ಹೆಸ್ಕಾಂ; 27,89,593
ಎಚ್‌ಆರ್‌ಇಸಿಎಸ್‌‍; 76,698
ಮೆಸ್ಕಾ; 14,48,488 ಸೇರಿದಂತೆ ಒಟ್ಟು: 1,17,12,164 ಫಲಾನುಭವಿಗಳ ಸಮೀಕ್ಷೆ ಪೂರ್ಣಗೊಂಡಿದೆ.
ಮನೆ-ಮನೆಗೆ ಭೇಟಿ ನೀಡುವ ಮೀಟರ್‌ ರೀಡರ್‌ಗಳಿಗೆ ಗ್ರಾಹಕರು ಅಗತ್ಯ ಮಾಹಿತಿ ನೀಡಿ ಸಹಕರಿಸುವಂತೆ ವಿದ್ಯುತ್‌ ಸರಬರಾಜು ಕಂಪನಿಗಳು ಮನವಿ ಮಾಡಿಕೊಂಡಿವೆ.

RELATED ARTICLES
spot_img

Latest News