Homeರಾಜ್ಯತಮಿಳುನಾಡಿಗೆ ನೀರು : ಕಾವೇರಿ ನದಿ ಪಾತ್ರದ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಇಳಿಕೆ

ತಮಿಳುನಾಡಿಗೆ ನೀರು : ಕಾವೇರಿ ನದಿ ಪಾತ್ರದ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಇಳಿಕೆ

ಬೆಂಗಳೂರು, ಸೆ.2-ತಮಿಳುನಾಡಿಗೆ ನಿತ್ಯ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ಜಲಾಶಯಗಳ ನೀರಿನ ಸಂಗ್ರಹ ಗಣನೀಯವಾಗಿ ಇಳಿಕೆಯಾಗುತ್ತಿದೆ. ಜಲಾನಯನ ಭಾಗದಲ್ಲಿ ಮುಂಗಾರು ಮಳೆ ಮತ್ತೆ ಕೈಕೊಟ್ಟಿರುವ ಹಿನ್ನೆಯಲ್ಲಿ ಜಲಾಶಯದ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ. ಸಿಡಬ್ಲ್ಯುಎಂಸಿ ಹಾಗೂ ಸಿಡಬ್ಲ್ಯುಎಂಎ ಆದೇಶದಂತೆ ನಿತ್ಯ 9 ಸಾವಿರ ಕ್ಯುಸೆಕ್‌್ಸ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಜಲಾಶಯಗಳ ಭರ್ತಿಯಾಗಿದ್ದು, ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಹರಿದು ಹೋಗಿತ್ತು. ನೀರಿನ ಬಿಕ್ಕಟ್ಟು ಉಂಟಾಗಿರಲಿಲ್ಲ.

ಪ್ರಸ್ತುತ ಮಳೆ ಕಡಿಮಯಾಗಿರುವುದರಿಂದ ಒಳಹರಿನ ಪ್ರಮಾಣ ಪ್ರತಿದಿನ ಕಡಿಮೆಯಾಗುತ್ತಿದೆ. ಕಾವೇರಿ ಜಲಾನಯನ ಭಾಗದ ನಾಲ್ಕು ಜಲಾಶಯಗಳಲ್ಲಿ ಶೇ.70ರಷ್ಟು ನೀರು ಸಂಗ್ರಹವಿದ್ದರೂ ತಮಿಳುನಾಡಿಗೆ ನಿತ್ಯ ನೀರು ಹರಿಸುತ್ತಿರುವುದರಿಂದ ಜಲಾಶಯಗಳಲ್ಲಿ ಮತ್ತಷ್ಟು ನೀರು ಕಡಿಮೆಯಾಗಲಿರುವುದು ಆತಂಕಕ್ಕೆ ಕಾರಣವಾಗಿದೆ. ಸೆಪ್ಟೆಂಬರ್‌ನಲ್ಲಿ ಜಲಾಶಯಗಳು ಭರ್ತಿಯಾಗುವ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ವಿರಳ. ಹೀಗಾಗಿ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಗಳು ಕ್ಷೀಣಿಸಿವೆ. ಇದರಿಂದ ಇರುವ ನೀರಿನ ಮಿತಬಳಕೆ ಮಾಡುವುದೊಂದೇ ಸದ್ಯಕ್ಕಿರುವ ಪರಿಹಾರ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ 124.80 ಅಡಿ ಗರಿಷ್ಠ ಸಾಮರ್ಥ್ಯದ ಕೆಆರ್‌ಎಸ್‌‍ ಜಲಾಶಯದಲ್ಲಿ 109.74 ಅಡಿಯಷ್ಟು ಮಾತ್ರ ನೀರಿದೆ. ಶೇ.64 ರಷ್ಟು ಮಾತ್ರ ಭರ್ತಿಯಾಗಿದೆ. ಈ ವರ್ಷ 110 ಅಡಿಯ ಗಡಿ ದಾಟಿತ್ತು. ಹೊರ ಹರಿವು ಹೆಚ್ಚಿಸಿದ ಪರಿಣಾಮ ನೀರಿನ ಸಂಗ್ರಹ ಕುಸಿಯುತ್ತಿದೆ. 4 ಸಾವಿರ ಕ್ಯುಸೆಕ್‌್ಸನಷ್ಟು ಒಳಹರಿವು ಇದ್ದು, 7 ಸಾವಿರ ಕ್ಯುಸೆಕ್‌್ಸಗೂ ಹೆಚ್ಚು ನೀರಿನ ಹೊರ ಹರಿವಿದೆ.

ಗರಿಷ್ಠ 8.50 ಟಿಎಂಸಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಶೇ.98ರಷ್ಟು ನೀರು ಸಂಗ್ರಹವಾಗಿದೆ. ಒಳಹರಿವು ಮೂರು ಸಾವಿರ ಕ್ಯುಸೆಕ್‌್ಸಗಿಂತ ಕಡಿಮೆ ಇದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. 37.10 ಟಿಎಂಸಿ ಗರಿಷ್ಠ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಶೇ.77ರಷ್ಟು ನೀರು ಸಗ್ರಹವಾಗಿದೆ. ಪ್ರಸ್ತುತ 28.41 ಟಿಎಂಸಿ ನೀರಿದೆ. ನಾಲ್ಕೂವರೆ ಸಾವಿರ ಕ್ಯುಸೆಕ್‌್ಸ ಒಳಹರಿವು ಇದ್ದು, 8 ಸಾವಿರ ಕ್ಯುಸೆಕ್‌್ಸಗೂ ಹೆಚ್ಚು ಹೊರ ಹರಿವು ಇದೆ.

ಕಬಿನಿ ಜಲಾಶಯದಲ್ಲಿ ಶೇ.60ರಷ್ಟು ಮಾತ್ರ ನೀರಿದೆ. 19.52 ಟಿಎಂಸಿ ಸಾಮಾರ್ಥ್ಯದ ಈ ಜಲಾಶಯ ಭರ್ತಿಯಾಗುವ ಹಂತ ತಲುಪಿತ್ತು. ಆದರೆ, ತಮಿಳುನಾಡಿಗೆ ನಿರಂತರ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸಂಗ್ರಹ 11.79 ಟಿಎಂಸಿಗೆ ಕುಸಿದಿದೆ. ಮೂರು ಸಾವಿರ ಕ್ಯುಸೆಕ್‌್ಸನಷ್ಟು ಒಳಹರಿವು ಇದ್ದು, ಆರು ಸಾವಿರ ಕ್ಯುಸೆಕ್‌್ಸಗೂ ಅಧಿಕ ಪ್ರಮಾಣದ ನೀರಿನ ಹೊರ ಹರಿವು ಇದೆ.

ಒಳಹರಿವಿಗಿಂತ ಹೊರ ಹರಿವು ಹೆಚ್ಚಾಗಿರುವುದರಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಏರಿಕೆಯಾಗುವ ಬದಲು ಇಳಿಕೆಯಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ನಾಲ್ಕು ಜಲಾಶಯಗಳಿಂದ 113.27 ಟಿಎಂಸಿ ನೀರಿತ್ತು. ಈಗ 80 ಟಿಎಂಸಿ ನೀರು ಮಾತ್ರ ಇದ್ದು, 33 ಟಿಎಂಸಿಗೂ ಹೆಚ್ಚು ನೀರು ಕಡಿಮೆ ಸಂಗ್ರಹವಾಗಿದೆ.

RELATED ARTICLES
spot_img

Latest News