Homeರಾಜ್ಯದುನಿಯಾ ವಿಜಿ ಪುತ್ರನ ವಿರುದ್ಧ ಹಲ್ಲೆ ಆರೋಪ

ದುನಿಯಾ ವಿಜಿ ಪುತ್ರನ ವಿರುದ್ಧ ಹಲ್ಲೆ ಆರೋಪ

ಬೆಂಗಳೂರು,ಸೆ.2- ನಟ ದುನಿಯಾ ವಿಜಯ್‌ ಅವರ ಪುತ್ರ ಸಾಮ್ರಾಟ್‌ ವಿಜಯ್‌ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮ್ರಾಟ್‌ ಸೋಮವಾರ ಸ್ನೇಹಿತರೊಂದಿಗೆ ಕಾರಿನಲ್ಲಿ ಹೋಗುವಾಗ ಅದೇ ಕಾಲೇಜಿನ ವಿದ್ಯಾರ್ಥಿ ಮನೀಶ್‌ಗೌಡ ಮತ್ತು ಆತನ ಸ್ನೇಹಿತರು ಮತ್ತೊಂದು ಕಾರಿನಲ್ಲಿ ಸಾಮ್ರಾಟ್‌ ಕಾರನ್ನು ಓವರ್‌ಟೇಕ್‌ ಮಾಡಿದ್ದಾರೆ. ಈ ವಿಚಾರವಾಗಿ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ಜಗಳವಾಗಿದೆ.

ಈ ಹಿನ್ನೆಲೆಯಲ್ಲಿ ಮನೀಶ್‌ ವಿರುದ್ಧ ಸಾಮ್ರಾಟ್‌ ಕೋಪಗೊಂಡಿದ್ದು, ನಿನ್ನೆ ಮಧ್ಯಾಹ್ನ ಮನೀಶ್‌ ಕಾಲೇಜಿನ ಆವರಣದಲ್ಲಿ ತನ್ನ ಬೈಕ್‌ ನಿಲ್ಲಿಸುತ್ತಿದ್ದ ವೇಳೆ ಅಲ್ಲಿಗೆ ಕಾರಿನಲ್ಲಿ ಬಂದ ಸಾಮ್ರಾಟ್‌ ಮತ್ತು ಅವನ ಸ್ನೇಹಿತರು ಮನೀಶ್‌ನನ್ನು ಕಾರಿನಲ್ಲಿ ಅಪಹರಿಸಿಕೊಂಡು ಪಟ್ಟಣಗೆರೆಯ ಮುಖ್ಯರಸ್ತೆ ಕಡೆ ಹೋಗಿ ಚಲಿಸುತ್ತಿದ್ದ ಕಾರಿನಲ್ಲೇ ಹಲ್ಲೆ ಮಾಡಿ ನಡುರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಈ ಬಗ್ಗೆ ಮನೀಶ್‌ ಗೌಡ ಕೆಂಗೇರಿ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಎನ್‌ಸಿಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ ಹದ್ದಣ್ಣನವರ್‌ ಅವರು ಈ ಸಂಜೆಗೆ ತಿಳಿಸಿದ್ದಾರೆ.

RELATED ARTICLES
spot_img

Latest News