ಬೆಂಗಳೂರು, ಮಾ.19- ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ ನಗರದಾದ್ಯಂತ 102 ಚೆಕ್ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಂತರ ಜಿಲ್ಲೆ ಗಡಿ ವ್ಯಾಪ್ತಿಯಲ್ಲಿ 15 ಹಾಗೂ ನಗರ ವ್ಯಾಪ್ತಿಯಲ್ಲಿ 87 ಸೇರಿದಂತೆ ಒಟ್ಟು 102 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ.
ಬೆಂಗಳೂರು ಕೇಂದ್ರ ವಿಭಾಗದಲ್ಲಿ 16, ಪೂರ್ವ ವಿಭಾಗದಲ್ಲಿ 10, ಉತ್ತರ ವಿಭಾಗದಲ್ಲಿ 27, ಈಶಾನ್ಯ ವಿಭಾಗದಲ್ಲಿ 12, ದಕ್ಷಿಣ ವಿಭಾಗದಲ್ಲಿ 8, ಆಗ್ನೇಯ ವಿಭಾಗದಲ್ಲಿ 10, ಪಶ್ಚಿಮ ವಿಭಾಗದಲ್ಲಿ 12, ವೈಟ್ಫೀಲ್ಡ್ ವಿಭಾಗದಲ್ಲಿ 7 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.
ಈ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರೊಂದಿಗೆ ಬಿಬಿಎಂಪಿ, ಆರ್ಟಿಒ, ಅಬಕಾರಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿ ಸಲಿದ್ದಾರೆ ಎಂದು ಅವರು ತಿಳಿಸಿದರು. ತಪಾಸಣೆ ವೇಳೆ ಹಣ, ಮದ್ಯ ಹಾಗೂ ಯಾವುದೇ ದಾಖಲೆ ಇಲ್ಲದ ವಸ್ತುಗಳು ಕಂಡುಬಂದರೆ ವಶಪಡಿಸಿಕೊಳ್ಳಲಾಗುವುದು.
ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಠೇವಣಿ ಮಾಡಲು ಸೂಚಿಸಲಾಗಿದೆ. ಎಂದು ಆಯುಕ್ತರು ತಿಳಿಸಿದರು.