Homeರಾಜ್ಯಕರಾವಳಿ–ಮಲೆನಾಡನ್ನು ಪ್ರವಾಸೋದ್ಯಮ ಹೂಡಿಕೆ ವಲಯಗಳನ್ನಾಗಿಸಲು ಹೊಸ ನೀತಿ : ಸಚಿವ ಕೆ.ಜೆ. ಜಾರ್ಜ್‌

ಕರಾವಳಿ–ಮಲೆನಾಡನ್ನು ಪ್ರವಾಸೋದ್ಯಮ ಹೂಡಿಕೆ ವಲಯಗಳನ್ನಾಗಿಸಲು ಹೊಸ ನೀತಿ : ಸಚಿವ ಕೆ.ಜೆ. ಜಾರ್ಜ್‌

ಬೆಂಗಳೂರು, ಸೆಪ್ಟೆಂಬರ್‌ 19: ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ದೇಶದ ಪ್ರಮುಖ ಪ್ರವಾಸೋದ್ಯಮ ಹೂಡಿಕೆ ವಲಯಗಳಲ್ಲಿ ಒಂದಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ *‘ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026’ ಯಲ್ಲಿ ಹೂಡಿಕೆದಾರರಿಗೆ ವಿಶೇಷ ಪ್ರೋತ್ಸಾಹ, ಸರಳ ಅನುಮೋದನೆಯ ವ್ಯವಸ್ಥೆ ಹಾಗೂ ಖಾಸಗಿ ಬಂಡವಾಳ ಆಕರ್ಷಣೆಗೆ ಹಲವು ನೂತಹ ಹಣಕಾಸು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಅಳವಡಿಸಲಾಗಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್‌ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿರುವ,
ಈ ಪ್ರತ್ಯೇಕ ನೀತಿಯಲ್ಲಿ ಪ್ರವಾಸೋದ್ಯಮಕ್ಕೆ Industry Status ಮತ್ತು Infrastructure Status ನೀಡುವುದು, ಹೂಡಿಕೆ ಪ್ರಕ್ರಿಯೆಯ ಆಡಳಿತಾತ್ಮಕ ಅಡೆತಡೆಗಳನ್ನು ಕಡಿಮೆ ಮಾಡುವುದು ಹಾಗೂ ಖಾಸಗಿ ಬಂಡವಾಳವನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುವುದಕ್ಕೆ ಆದ್ಯತೆ ನೀಡಲಾಗಿದೆ.

ಹೂಡಿಕೆದಾರರಿಗೆ Single Window ಸೌಲಭ್ಯ

ಹೂಡಿಕೆದಾರರಿಗೆ ಯೋಜನೆಯ ಕಲ್ಪನೆಯಿಂದ ಅನುಮೋದನೆ ಮತ್ತು ಅನುಷ್ಠಾನದವರೆಗೆ ಮಾರ್ಗದರ್ಶನ ನೀಡಲು Tourism Investment Facilitation Cell ಹಾಗೂ Single Window System ಕಾರ್ಯಗತಗೊಳಿಸಲಾಗುವುದು.

ಈ ವ್ಯವಸ್ಥೆ ಹೂಡಿಕೆದಾರರಿಗೆ ವಿವಿಧ ಇಲಾಖೆಗಳಿಂದ ಅಗತ್ಯ ಅನುಮತಿಗಳನ್ನು ಪಡೆಯಲು ಸಮನ್ವಯ, ಅರ್ಜಿಗಳ end-to-end processing ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸಹಾಯ ಮಾಡಲಿದೆ.

ಹೂಡಿಕೆ ಸ್ನೇಹಿ ಭೂ ನೀತಿಗೆ ಒತ್ತು

ನೀತಿಯಲ್ಲಿ ಪ್ರವಾಸೋದ್ಯಮ ಯೋಜನೆಗಳಿಗೆ Land Pooling Programme, Land Lease Policy, land conversion ನಿಯಮಗಳ ಸರಳೀಕರಣ, land conversion fee ಮರುಪಾವತಿ, ಆದ್ಯತಾ ಪ್ರವಾಸೋದ್ಯಮ ಯೋಜನೆಗಳಿಗೆ deemed change of land use, ಪ್ರವಾಸೋದ್ಯಮ ಹೂಡಿಕೆ ಉತ್ತೇಜನ ಪ್ರದೇಶಗಳಲ್ಲಿ property tax exemption ಸೇರಿದಂತೆ ಹಲವು ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ.

ಅದೇ ರೀತಿ, FAR/FSI ನಿಯಮಗಳ ಉದಾರೀಕರಣ, Transferable Development Rights, ಸಾರ್ವಜನಿಕ ಮೂಲಸೌಕರ್ಯದಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆ ಮತ್ತು Viability Gap Funding ಸೇರಿದಂತೆ ವಿವಿಧ ಸಾಧನಗಳನ್ನು ಬಳಸಿಕೊಳ್ಳುವ ಅವಕಾಶವನ್ನು ನೀತಿ ಒದಗಿಸುತ್ತದೆ.

ನಿರ್ದಿಷ್ಟ ಪ್ರವಾಸೋದ್ಯಮ ಯೋಜನೆಗಳಿಗೆ ಬಡ್ಡಿ ಸಹಾಯಧನ ಹಾಗೂ ಹೆಚ್ಚುವರಿ ಬಂಡವಾಳ ಹೂಡಿಕೆ ಸಹಾಯಧನ, ಜೊತೆಗೆ medical ಮತ್ತು educational tourismಗೆ ಬೆಂಬಲ ನೀಡುವ ಪ್ರಸ್ತಾವನೆಯೂ ಈ ನೀತಿಯಲ್ಲಿ ಅಳವಡಿಸಲಾಗಿದೆ.

₹500 ಕೋಟಿ — ಖಾಸಗಿ ಹೂಡಿಕೆಗೆ ಹೆಚ್ಚಿನ ಉತ್ತೇಜನ

ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026 ಗೆ ₹500 ಕೋಟಿ ಅನುದಾನ ಅನುಮೋದಿಸಲಾಗಿದೆ. ಇದಕ್ಕೆ ಸಂಬಂಧಿತ ಇಲಾಖೆಗಳು ಮತ್ತು ಸಂಸ್ಥೆಗಳ ಅನುದಾನ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ನೆರವು, CSR ಕೊಡುಗೆಗಳು ಹಾಗೂ Public-Private Partnership ಮೂಲಕ ಖಾಸಗಿ ಹೂಡಿಕೆಯನ್ನು ಪೂರಕವಾಗಿ ಬಳಸಿಕೊಳ್ಳಲಾಗುವುದು.

ಸರ್ಕಾರದ ಹೂಡಿಕೆಯನ್ನು *seed investment ಮತ್ತು catalyst (ಉತ್ತೇಜನಕಾರಿಯಾಗಿ) ** ಆಗಿ ಬಳಸಿಕೊಂಡು ಹೆಚ್ಚಿನ ಪ್ರಮಾಣದ ಖಾಸಗಿ ಬಂಡವಾಳವನ್ನು ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಆಕರ್ಷಿಸುವುದು ನೀತಿಯ ಪ್ರಮುಖ ಉದ್ದೇಶವಾಗಿದೆ.

“ಕರಾವಳಿ ಮತ್ತು ಮಲೆನಾಡಿನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸರ್ಕಾರದ ಹೂಡಿಕೆ ಮಾತ್ರ ಸಾಕಾಗುವುದಿಲ್ಲ. ಖಾಸಗಿ ವಲಯದ ಬಂಡವಾಳ, ಪರಿಣತಿ ಮತ್ತು ಹೊಸ ಆಲೋಚನೆಗಳನ್ನು ದೊಡ್ಡ ಪ್ರಮಾಣದಲ್ಲಿ ಆಕರ್ಷಿಸಬೇಕಾಗಿದೆ. ಹೂಡಿಕೆದಾರರಿಗೆ ಸ್ಪಷ್ಟ ನೀತಿ, ಸುಗಮ ಅನುಮೋದನೆ ಮತ್ತು ಅನುಕೂಲಕರ ವಾತಾವರಣ ಒದಗಿಸಿ, ಪ್ರವಾಸೋದ್ಯಮವನ್ನು ಈ ಪ್ರದೇಶದ ಪ್ರಮುಖ ಆರ್ಥಿಕ ಚಾಲಕವಾಗಿಸುವುದು ನಮ್ಮ ಉದ್ದೇಶವಾಗಿದೆ.”

“ಹೂಡಿಕೆದಾರರು ಹಲವು ಇಲಾಖೆಗಳಿಂದ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕಾದ ಪದ್ದತಿಯನ್ನು ತಪ್ಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. Tourism Investment Facilitation Cell ಮತ್ತು Single Window ವ್ಯವಸ್ಥೆಯ ಮೂಲಕ ಯೋಜನೆಗಳ ಪ್ರಸ್ತಾವನೆಯಿಂದ ಅನುಮೋದನೆವರೆಗೆ ಮಾರ್ಗದರ್ಶನ, ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಮತ್ತು ಸಮಸ್ಯೆ ಪರಿಹಾರಕ್ಕೆ ಒಂದೇ ವ್ಯವಸ್ಥೆ ಕಲ್ಪಿಸಲಾಗುವುದು. ನೀತಿಯಲ್ಲಿ ಒದಗಿಸಿರುವ ಪ್ರೋತ್ಸಾಹಗಳನ್ನು ಸ್ಪಷ್ಟ ಮತ್ತು ಸಮಯಬದ್ಧವಾಗಿ ಅನುಷ್ಠಾನಗೊಳಿಸುವುದಕ್ಕೆ ಅಗತ್ಯ ವ್ಯವಸ್ಥೆ ರೂಪಿಸಲಾಗುವುದು.”

  • ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್, ಕಾರ್ಯದರ್ಶಿಗಳು, ಪ್ರವಾಸೋದ್ಯಮ ಇಲಾಖೆ
RELATED ARTICLES
spot_img

Latest News