ಬೆಂಗಳೂರು, ಮಾ.21- ಕುಡಿಯಲು ನೀರು ಕೇಳುವ ನೆಪದಲ್ಲಿ ಮಹಿಳೆಯ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿ ಪರಾರಿಯಾಗಿದ್ದ ಫುಡ್ ಡೆಲವರಿ ಬಾಯ್ನನ್ನುಎಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲೂಕಿನ ಆಕಾಶ್(27) ಬಂಧಿತ ಫುಡ್ ಡೆಲವರಿ ಬಾಯ್.ಈತ ನಗರದ ಕುಂದನಹಳ್ಳಿ ಕಾಲೋನಿಯ ಪಿಜಿಯೊಂದರಲ್ಲಿ ವಾಸವಾಗಿದ್ದುಕೊಂಡು ಫುಡ್ ಡೆಲವರಿ ಬಾಯ್ ಕೆಲಸ ಮಾಡುತ್ತಿದ್ದನು.
ಮಾ. 17ರಂದು ಸಂಜೆ ಸ್ವಿಗ್ಗಿಯಲ್ಲಿ ಎಇಸಿಎಸ್ ಲೇಔಟ್ನ ನಿವಾಸಿ, 30 ವರ್ಷದ ಮಹಿಳೆ ಫುಡ್ ಆರ್ಡರ್ ಮಾಡಿದ್ದಾರೆ. ಸಂಜೆ 6.30ರ ಸುಮಾರಿನಲ್ಲಿ ಡೆಲವರಿ ಬಾಯ್ ಆಕಾಶ್ ಎಂಬಾತ ಫುಡ್ ಡೆಲವರಿ ಕೊಡಲು ಮಹಿಳೆ ಮನೆಗೆ ಹೋಗಿದ್ದಾನೆ.ಫುಡ್ ತೆಗೆದುಕೊಳ್ಳಲು ಬಂದ ಮಹಿಳೆಗೆ ವಾಶ್ರೂಂಗೆ ಹೋಗಬೇಕು ಎಂದು ಕೇಳಿ ಮನೆಯೊಳಗೆ ಹೋಗಿ ವಾಶ್ ರೂಮ್ ಬಳಸಿದ್ದಾನೆ.
ನಂತರ ಹೊರ ಬಂದು ಬಾಯಾರಿಕೆಯಾಗುತ್ತಿದೆ, ಕುಡಿಯಲು ನೀರು ಕೊಡಿ ಎಂದು ಕೇಳಿದ್ದಾನೆ.
ಆಗ ಮಹಿಳೆ ನೀರು ತರಲು ಕಿಚನ್ ಒಳಗೆ ಹೋಗುತ್ತಿದ್ದಂತೆ ಆಕಾಶ್ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಾನೆ. ಆ ಸಂದರ್ಭದಲ್ಲಿ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡು ಫುಡ್ ಡೆಲವರಿ ಬಾಯ್ ಆಕಾಶ್ನ ಕೆನ್ನೆಗೆ ಹೊಡೆದಾಗ ಆತ ಅಲ್ಲಿಂದ ಓಡಿ ಹೋಗಿದ್ದಾನೆ.
ಈ ಬಗ್ಗೆ ಮಹಿಳೆ ಎಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿ ಫುಡ್ ಡೆಲವರಿ ಬಾಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪರಾರಿಯಾಗಿದ್ದ ಫುಡ್ ಡೆಲಿವರಿ ಬಾಯ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.