Saturday, May 4, 2024
Homeರಾಷ್ಟ್ರೀಯಸದ್ಗುರು ಆರೋಗ್ಯದಲ್ಲಿ ಚೇತರಿಕೆ : .ಇಶಾ ಫೌಂಡೇಶನ್

ಸದ್ಗುರು ಆರೋಗ್ಯದಲ್ಲಿ ಚೇತರಿಕೆ : .ಇಶಾ ಫೌಂಡೇಶನ್

ನವದೆಹಲಿ,ಮಾ.21-ತಲೆಯಲ್ಲಿ ರಕ್ತಸ್ರಾವದಿಂದ ಬಳಲುತ್ತಿದ್ದ ಆಧ್ಯಾತ್ಮಿಕ ಸದ್ಗುರು ಜಗ್ಗಿ ವಾಸುದೇವ್ ಸದ್ಗುರು ಅವರಿಗೆ ಇಲ್ಲಿನ ಅಪೋಲೂ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಮಿದುಳಿನ ಶಸ್ತ್ರ ಚಿಕಿತ್ಸೆಗೆ ನಡೆದಿದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಸ್ಥಿರ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ಇಶಾ ಫೌಂಡೇಶನ್ ತಿಳಿಸಿದೆ.

ಇನ್‍ಸ್ಟಾಗ್ರಾಮ್‍ನಲ್ಲಿ ಸದ್ಗುರು ಅವರ ಪುತ್ರಿ ರಾಧೆ ಜಗ್ಗಿ ಅವರು ಸದ್ಗುರುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬರೆದಿದ್ದಾರೆ. 66 ವರ್ಷ ವಯಸ್ಸಿನ ಆಧ್ಯಾತ್ಮಿಕ ಗುರು ಇಶಾ ಫೌಂಡೇಶನ್ ನ ಸಂಸ್ಥಾಪಕರಾಗಿದ್ದಾರೆ ಮತ್ತು ಪರಿಸರ ಸಂರಕ್ಷಣೆಗಾಗಿ ಮಣ್ಣು ಉಳಿಸಿ ಮತ್ತು ನದಿಗಳ ಉಳಿವಿಗೆ ಅಭಿಯಾನಗಳನ್ನು ಪ್ರಾರಂಭಿಸಿ ವಿಶ್ವದಾದ್ಯಂತ ಭಕ್ತರನ್ನು ಹೊಂದಿದ್ದಾರೆ.

ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಲೆಯಲ್ಲಿ ರಕ್ತಸ್ರಾವವ ಉಂಟಾಗಿತ್ತು ಇದಕ್ಕಾಗಿ ಕಳೆದ ಮಾರ್ಚ್ 17 ರಂದು ಶಸಚಿಕಿತ್ಸೆ ನಡೆಸಲಾಯಿತು. ಶಸಚಿಕಿತ್ಸೆಯ ನಂತರ ಸದ್ಗುರುಗಳನ್ನು ವೆಂಟಿಲೇಟರ್‍ನಿಂದ ಹೊರಬಂದು ಈಗ ಎಲ್ಲರೊಂದಿಗೆ ಮಾತನಡುತ್ತಿದ್ದಾರೆ.

ಉತ್ತಮವಾಗಿ ಆರೋಗ್ಯ ಸುಧಾರಿಸಿದೆ ಮತ್ತು ನಾವು ಪ್ರಮುಖ ನಿಯತಾಂಕಗಳು ಸುಧಾರಿಸಿವೆ ಎಂದು ಆಸ್ಪತ್ರೆ ಹೇಳಿದೆ.ಸದ್ಗುರುಗಳು ತಮ್ಮ ಆಸ್ಪತ್ರೆಯ ಬೆಡ್‍ನಿಂದ ವೀಡಿಯೊವನ್ನು ತಮ್ಮ ಜಾಲಜಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

RELATED ARTICLES

Latest News