Sunday, April 14, 2024
Homeರಾಜ್ಯವಿಧಾನಸೌಧ ಸೇರಿದಂತೆ 6 ಕಡೆ ಹೈಟೆಕ್ ಸ್ಕ್ಯಾನರ್ ಅಳವಡಿಕೆ

ವಿಧಾನಸೌಧ ಸೇರಿದಂತೆ 6 ಕಡೆ ಹೈಟೆಕ್ ಸ್ಕ್ಯಾನರ್ ಅಳವಡಿಕೆ

ಬೆಂಗಳೂರು,ಮಾ.21- ಶಕ್ತಿಸೌಧ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಗೂ ರಾಮೇಶ್ವರಂ ಕೆಫೆ ಸ್ಪೋಟದ ಬೆನ್ನಲ್ಲೇ ಭದ್ರತಾ ದೃಷ್ಟಿಯಿಂದ ವಿಧಾನಸೌಧಕ್ಕೆ ಹೈಟೆಕ್ ಬ್ಯಾಗ್ ಸ್ಕ್ಯಾನರ್ಗಳನ್ನು ಅಳವಡಿಸಲಾಗುತ್ತಿದೆ.ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಮೊದಲ ಬ್ಯಾಗ್ ಸ್ಕ್ಯಾನರ್ ಯಂತ್ರವನ್ನು ಅಳವಡಿಸಲಾಗಿದೆ.

ಒಟ್ಟು 14 ಬ್ಯಾಗ್ ಸ್ಕ್ಯಾನರ್ಗಳನ್ನು ನೀಡಿರುವ ಸರ್ಕಾರ ಹೈಕೋರ್ಟ್ಗೆ 6, ವಿಧಾನಸೌಧಕ್ಕೆ 5 ಸ್ಕ್ಯಾನರ್ಗಳನ್ನು ಅಳವಡಿಸಲು ಸೂಚನೆ ನೀಡಿದೆ.ರಾಜಭವನ, ಲೋಕಾಯುಕ್ತ ಕಚೇರಿ, ವಿಕಾಸಸೌಧ, ಶಾಸಕರ ಭವನ ಹಾಗೂ ಪೊಲೀಸ್ ಆಯುಕ್ತರ ಕಚೇರಿಗೂ ಯಂತ್ರವನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ಹೆಚ್ಚುವರಿಯಾಗಿ ಮತ್ತೆರಡು ಯಂತ್ರಗಳನ್ನು ತರಿಸಲು ವ್ಯವಸ್ಥೆ ಮಾಡಲಾಗಿದ್ದು, ಇದೀಗ ಪ್ರಾಯೋಗಿಕವಾಗಿ ಆಯುಕ್ತರ ಕಚೇರಿಯಲ್ಲಿ ಅಳವಡಿಸಲಾಗಿದೆ.

ಈ ಯಂತ್ರ ಬ್ಯಾಗ್ಗಳಲ್ಲಿರುವ ಚಿಕ್ಕ ವಸ್ತುಗಳನ್ನು ಕೂಡ ಪತ್ತೆ ಹಚ್ಚಿ ಬ್ಲ್ಯಾಕ್ ಮಾರ್ಕ್ ವಸ್ತುಗಳನ್ನು ಗ್ರಹಿಸಿ ಸೈರನ್ ರೆಡ್ ಮಾರ್ಕ್ ತೋರಿಸಿ ಭದ್ರತಾ ಸಿಬ್ಬಂದಿಗಳಿಗೆ ಸೂಚನೆ ನೀಡಲಿದೆ. ಇದಕ್ಕಾಗಿ ಪೊಲೀಸರಿಗೆ ತರಬೇತಿಯನ್ನು ನೀಡಿ ಎರಡು ಪಾಳಿಯದಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.

RELATED ARTICLES

Latest News