Friday, November 22, 2024
Homeರಾಷ್ಟ್ರೀಯ | Nationalಗ್ಯಾಸ್ ಸೋರಿಕೆಯಾಗಿ ಮನೆಗೆ ಬೆಂಕಿ, ಕುಟುಂಬದ ಐವರು ಸಜೀವ ದಹನ

ಗ್ಯಾಸ್ ಸೋರಿಕೆಯಾಗಿ ಮನೆಗೆ ಬೆಂಕಿ, ಕುಟುಂಬದ ಐವರು ಸಜೀವ ದಹನ

ಜೈಪುರ, ಮಾ.21 (ಪಿಟಿಐ) – : ಮನೆಯಲ್ಲಿ ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಯುವ ದಂಪತಿಗಳು ಮತ್ತು ಅವರ ಮೂವರು ಮಕ್ಕಳು ಸಜೀವ ದಹನವಾಗಿರುವ ದುರಂತ ಘಟನೆ ಇಲ್ಲಿ ನಡೆದಿದೆ. ಜೈಪುರದ ವಿಶ್ವಕರ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರ ಮನೆಯ ಕೋಣೆಯಲ್ಲಿ ಬೆಂಕಿ ಜ್ವಾಲೆ ಆವರಿಸಿ ಇದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸವನ್ನಪ್ಪಿದ್ದಾರೆ ಎಸ್‍ಎಚ್‍ಒ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ರಾಜೇಶ್ ಯಾದವ್ (25)ಅವರ ಪತ್ನಿ ರೂಬಿ (24), ಅವರ ಪುತ್ರಿಯರಾದ ಇಶು (7), ಖುಷಿಮಣಿ (4) ಮತ್ತು ಮಗ ದಿಲ್ಖುಷ್ (2) ಮೃತ ದುರ್ದೈವಿಗಳು. ಒಟ್ಟು 17-18 ಕೊಠಡಿಗಳಿರುವ ವಸತಿ ಕಟ್ಟಡದ ಕೊಠಡಿಯೊಂದರಲ್ಲಿ ಕುಟುಂಬ ಉಳಿದುಕೊಂಡಿತ್ತು,ಯಾದವ್, ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕು ತಿಂಗಳಿನಿಂದ ಅಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ

ಇಂದು ಬೆಳಗ್ಗೆ ರಾಜೇಶ್ ಯಾದವ್ ಗ್ಯಾಸ್ ಸಿಲಿಂಡರ್ ಬದಲಾಯಿಸುತ್ತಿದ್ದಾಗ ಸಿಲಿಂಡರ್‍ನಿಂದ ಗ್ಯಾಸ್ ಸೋರಿಕೆಯಾಗಿದ್ದು, ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ ಇದರಿಂದ ಕುಟುಂಬದ ಎಲ್ಲರೂ ಸಜೀವ ದಹನ ಗೊಂಡಿದ್ದಾರೆ ಎಂದು ಅವರು ಹೇಳಿದರು.ರಾಜೇಶ್ ಯಾದವ್ ಬಿಹಾರದ ಮೋತಿಹಾರಿ ಮೂಲದವರು ಎಂದು ತಿಳಿದುಬ.ಂದಿದ್ದು ಘಟನೆಯಲ್ಲಿ ಬೇರೆ ಯಾವುದೇ ಕೊಠಡಿಗೆ ಹಾನಿಯಾಗಿಲ್ಲ ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದು,ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಮತ್ತು ಉಪಮುಖ್ಯಮಂತ್ರಿ ದಿಯಾ ಕುಮಾರಿ ಘಟನೆಯಲ್ಲಿ ಸಂತಾಪ ಸೂಚಿಸಿದ್ದಾರೆ. 5 ನಾಗರಿಕರು ಅಕಾಲಿಕ ಮರಣ ಹೊಂದಿದ ಸುದ್ದಿ ಹೃದಯ ವಿದ್ರಾವಕವಾಗಿದೆ, ಅಗಲಿದ ಆತ್ಮಗಳಿಗೆ ಶಾಂತಿ ಕೋರಿ ಮೃತರ ಇತರ ಕುಟುಂಬ ಸದಸ್ಯರಿಗೆ ಈ ದುರಂತದ ನೋವು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ

RELATED ARTICLES

Latest News