Sunday, May 19, 2024
Homeರಾಜ್ಯನನ್ನ ಅವಧಿಯಲ್ಲಿ ವಿಧಾನ ಪರಿಷತ್ತಿಗೆ 11 ಸದಸ್ಯರ ರಾಜೀನಾಮೆ ಸಲ್ಲಿಕೆಯಾಗಿವೆ : ಹೊರಟ್ಟಿ

ನನ್ನ ಅವಧಿಯಲ್ಲಿ ವಿಧಾನ ಪರಿಷತ್ತಿಗೆ 11 ಸದಸ್ಯರ ರಾಜೀನಾಮೆ ಸಲ್ಲಿಕೆಯಾಗಿವೆ : ಹೊರಟ್ಟಿ

ಬೆಂಗಳೂರು,ಮಾ.21- ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್ತಿಗೆ 11 ಸದಸ್ಯರ ರಾಜೀನಾಮೆ ಸಲ್ಲಿಕೆಯಾಗಿವೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ವಿಧಾನಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರ ರಾಜೀನಾಮೆ ಸ್ವೀಕರಿಸಿದ ನಂತರ ಮಾತನಾಡಿದ ಅವರು, ನಾಳೆ ಮತ್ತೊಬ್ಬ ಸದಸ್ಯರು ರಾಜೀನಾಮೆ ಕೊಡಲಿದ್ದಾರೆ. ನೇರವಾಗಿ ಹುಬ್ಬಳ್ಳಿಗೆ ಬಂದು ರಾಜೀನಾಮೆ ನೀಡುವ ಸಾಧ್ಯತೆಯಿದೆ. ಅನಿವಾರ್ಯ ಕಾರಣದಿಂದ ಮೇಲ್ ಮೂಲಕವೂ ರಾಜೀನಾಮೆ ಸಲ್ಲಿಸಬಹುದು. ಯಾರು, ಯಾರು ಎನ್ನುವುದು ನಾಳೆ ಗೊತ್ತಾಗಲಿದೆ. ನಾಳೆ ರಾಜೀನಾಮೆ ಕೊಡುತ್ತೇನೆ ಎಂದು ಫೋನ್ ಮಾಡಿ ತಿಳಿಸಿದ್ದಾರೆ ಎಂದು ಹೇಳಿದರು.

ನನ್ನ ಅವಧಿಯಲ್ಲಿ 11 ಜನ ಸದಸ್ಯರು ರಾಜೀನಾಮೆ ನೀಡಿದ್ದಾರೆ. 17-10-2018 ರಲ್ಲಿ ವಿ.ಎಸ್.ಉಗ್ರಪ್ಪ, 2-11-2021 ರಲ್ಲಿ ಶ್ರೀನಿವಾಸ್ ಮಾನೆ, 29-11-2021 ರಲ್ಲಿ ಸಿ.ಆರ್.ಮನೋಹರ್, 31-3-2022 ರಲ್ಲಿ ಸಿ.ಎಂ.ಇಬ್ರಾಹಿಂ, 6-3-2023 ರಲ್ಲಿ ಪುಟ್ಟಣ್ಣ, 20-3-2023 ರಲ್ಲಿ ಬಾಬುರಾವ್ ಚಿಂಚನಸೂರು, 12-4-2023ರಲ್ಲಿ ಆರ್.ಶಂಕರ್, 14-4-2023 ಲಕ್ಷ್ಮಣ್ ಸವದಿ, 19-4-2023 ರಲ್ಲಿ ಆಯನೂರು ಮಂಜುನಾಥ್, 25-1-2024 ರಲ್ಲಿ ಜಗದೀಶ್ ಶೆಟ್ಟರ್, 21-4-2024ರಲ್ಲಿ ಮರಿತಿಬ್ಬೇಗೌಡ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

RELATED ARTICLES

Latest News