Homeಜಿಲ್ಲಾ ಸುದ್ದಿಗಳುಹೃದಯಾಘಾತದಿಂದ ಮೃತಪಟ್ಟ ತಾಯಿಯ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪುಟ್ಟ ಮಕ್ಕಳು

ಹೃದಯಾಘಾತದಿಂದ ಮೃತಪಟ್ಟ ತಾಯಿಯ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪುಟ್ಟ ಮಕ್ಕಳು

ಆನೇಕಲ್‌, ಸೆ.26- ಹೃದಯಾಘಾತದಿಂದ ಮೃತಪಟ್ಟಿದ್ದ ತಾಯಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪುಟ್ಟ ಮಕ್ಕಳು ಸಾರ್ಥಕತೆ ಮೆರೆದಿರುವ ಘಟನೆ ನಡೆದಿದೆ.ಹಾರಗದ್ದೆ ದ್ಯಾವಸಂದ್ರ ಗ್ರಾಮದ ನಿವಾಸಿ, ಖಾಸಗಿ ಕಂಪನಿ ಮಾಲೀಕ ಜಯಶಂಕರ್‌ ಅವರ ಪತ್ನಿ ಕುಸುಮಾ (39) ಅವರ ಅಂಗಾಂಗಗಳನ್ನು ಬೊಮ್ಮಸಂದ್ರದ ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಯಲ್ಲಿ ದಾನ ಮಾಡಲಾಗಿದೆ.

ಕುಸುಮಾ ಅವರಿಗೆ ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಬೊಮ್ಮಸಂದ್ರದ ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಅವರು ಮೆದುಳು ನಿಷ್ಕ್ರಿಯಗೊಂಡಿರುವುದಾಗಿ (ಬ್ರೈನ್‌ ಡೆಡ್‌) ಕುಟುಂಬಕ್ಕೆ ತಿಳಿಸಿದ್ದರು.

ಕುಸುಮಾ ಅವರಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇದ್ದು, ತುಂಬು ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಪತ್ನಿ ಬದುಕಿ ಬರುವುದಿಲ್ಲ ಎಂಬ ವಾಸ್ತವವನ್ನು ಅರಿತ ಜಯಶಂಕರ್‌ ಹಾಗೂ ಅವರ ಇಬ್ಬರು ಮಕ್ಕಳು, ಸಾವಿನ ಬಳಿಕವೂ ಹಲವು ಜೀವಗಳಿಗೆ ಕುಸುಮಾ ಅವರ ಅಂಗಾಂಗಗಳು ನೆರವಾಗಲಿ ಎಂದು ನಿರ್ಧರಿಸಿ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ವೈದ್ಯರು ಕುಸುಮಾ ಅವರ ಕಣ್ಣು, ಹೃದಯ, ಶ್ವಾಸಕೋಶ, ಲಿವರ್‌, ಕಿಡ್ನಿ ಸೇರಿದಂತೆ ವಿವಿಧ ಅಂಗಾ

RELATED ARTICLES
spot_img

Latest News