Homeಬೆಂಗಳೂರುಡೀಪ್‌ ಫೇಕ್‌ ವಿಡಿಯೋ ನೋಡಿ ಟ್ರೇಡಿಂಗ್‌ ಹೆಸರಲ್ಲಿ 7.66 ಲಕ್ಷ ಹಣ ಕಳೆದುಕೊಂಡ ಅಮಾಯಕ

ಡೀಪ್‌ ಫೇಕ್‌ ವಿಡಿಯೋ ನೋಡಿ ಟ್ರೇಡಿಂಗ್‌ ಹೆಸರಲ್ಲಿ 7.66 ಲಕ್ಷ ಹಣ ಕಳೆದುಕೊಂಡ ಅಮಾಯಕ

ಬೆಂಗಳೂರು,ಸೆ.26-ಆನ್‌ಲೈನ್‌ ವಂಚನೆಗಳ ಬಗ್ಗೆ ನಗರ ಪೊಲೀಸರು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಜನರು ಮಾತ್ರ ಎಚ್ಚೆತ್ತುಕೊಳ್ಳದೇ ಮೋಸ ಹೋಗುತ್ತಿದ್ದಾರೆ. ಡೀಪ್‌ ಫೇಕ್‌ ವಿಡಿಯೋಗಳ ಮೂಲಕ ಸಾರ್ವಜನಿಕರನ್ನು ನಂಬಿಸಿ ಆನ್‌ಲೈನ್‌ ಫಾರೆಕ್‌್ಸ ಟ್ರೇಡಿಂಗ್‌ ನೆಪದಲ್ಲಿ ಮಹಾಲಕ್ಷ್ಮೀ ಲೇಔಟ್‌ನ 40 ವರ್ಷದ ನಿವಾಸಿಯೊಬ್ಬರು 7.66 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ,ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾಸೀತಾರಾಮ್‌, ಸುಧಾಮೂರ್ತಿ ಅವರ ಡೀಪ್‌ ಫೇಕ್‌ ವಿಡಿಯೋಗಳನ್ನು ನಿಜವೆಂದು ನಂಬಿದ ಈ ವ್ಯಕ್ತಿ ಸೈಬರ್‌ ವಂಚಕರ ಜಾಲಕ್ಕೆ ಸಿಕ್ಕಿಕೊಂಡು ಮೋಸ ಹೋಗಿದ್ದಾರೆ.

ಜು.10 ರಂದು ತಮ ಫೇಸ್‌‍ಬುಕ್‌ನಲ್ಲಿ ಪ್ರಧಾನಿ ಸೇರಿದಂತೆ ಪ್ರಮುಖರು ಆನ್‌ಲೈನ್‌ ಹೂಡಿಕೆಯನ್ನು ಪ್ರಚಾರ ಮಾಡುತ್ತಿರುವಂತೆ ತೋರಿಸಲಾಗಿದ್ದ ವಿಡಿಯೋಗಳು ಇವರ ಕಣ್ಣಿಗೆ ಬಿದ್ದಿವೆ.ಇವು ನೈಜ ವಿಡಿಯೋಗಳೆಂದು ನಂಬಿದ ಈ ವ್ಯಕ್ತಿ ಲಿಂಕ್‌ ಕ್ಲಿಕ್‌ ಮಾಡಿ ಹೂಡಿಕೆ ಆರಂಭಿಸಲು 22 ಸಾವಿರ ರೂ.ವರ್ಗಾಹಿಸಿದ್ದಾರೆ. ಹಣ ವರ್ಗಾವಣೆಯಾಗುತ್ತಿದ್ದಂತೆ ಯುನೈಟೆಡ್‌ ಕಿಂಗ್‌ಡಂನ 44 ಕ್ಕೂ ಹೆಚ್ಚು ಕಂಟ್ರಿಕೋಡ್‌ ಹೊಂದಿದ್ದ ಐದು ಅಪರಿಚಿತ ಮೊಬೈಲ್‌ ಸಂಖ್ಯೆಗಳ ಮೂಲಕ ಅವರಿಗೆ ಕರೆಗಳು ಬಂದಿವೆ.

ಕರೆ ಮಾಡಿದ ವ್ಯಕ್ತಿ ತಮನ್ನು ಒನ್‌ಟು ಮಾರ್ಕೆಟ್ಸ್ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡು, ಫಾರೆಕ್‌್ಸ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದು ಎಂದು ನಂಬಿಸಿದ್ದಾನೆ. ತದ ನಂತರದಲ್ಲಿ ವಂಚಕರು ಈ ವ್ಯಕ್ತಿಯ ಹೆಸರಲ್ಲಿ ನಕಲಿ ಫಾರೆಕ್‌್ಸ ಖಾತೆಯೊಂದನ್ನು ತೆರೆದು ವಿವಿಧ ವಹಿವಾಟುಗಳ ಮೂಲಕ ಜು.10 ರಿಂದ 22 ವರೆಗೆ ವಿವಿಧ ಬ್ಯಾಂಕ್‌ ಖಾತೆಗಳಿಗೆ 7.66 ಲಕ್ಷ ರೂ. ವರ್ಗಾಹಿಸಿದ್ದಾರೆ.

ತಮ ಹೂಡಿಕೆಯಿಂದ ಲಾಭ ಬರುತ್ತದೆ ಎಂದು ನಂಬಿದ ಈ ವ್ಯಕ್ತಿ ಹಣವನ್ನು ಹಿಂಪಡೆಯಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ವಂಚಕರು ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಅಪರಿಚಿತರ ಮಾತಿನಿಂದ ಅನುಮಾನಗೊಂಡ ಇವರು ತಾನು ಮೋಸ ಹೋದೆನೆಂದು ಅರಿವಿಗೆ ಬಂದಿದೆ.

ಬಳಿಕ ಅವರು ಸೈಬರ್‌ ಕ್ರೈಂ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಸೈಬರ್‌ ವಂಚಕರಿಗಾಗಿ ತನಿಖೆ ಕೈಗೊಂಡಿದ್ದಾರೆ. ಸೈಬರ್‌ ವಂಚಕರ ಬಗ್ಗೆ ಒಂದು ಕಡೆ ಪೊಲೀಸರು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದರೇ, ಮತ್ತೊಂದುಕಡೆ ವಂಚಕರು ಮೋಸ ಮಾಡಲು ಹೊಸ ಹೊಸ ದಾರಿ ಹುಡುಕುತ್ತಿದ್ದಾರೆ. ಇವರ ಕುತಂತ್ರಕ್ಕೆ ಅಮಾಯಕರು ಬಲಿಪಶುಗಳಾಗುತ್ತಿದ್ದಾರೆ.

RELATED ARTICLES
spot_img

Latest News