ನಾಗೋಯಾ, ಸೆ.26- ಭಾರತದ ಸಾವನ್ ಬರ್ವಾಲ್ ಏಷ್ಯನ್ ಗೇಮ್ಸೌ ಪುರುಷರ ಮ್ಯಾರಥಾನ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ. 42.195 ಕಿ.ಮೀ. ದೂರವನ್ನು 2 ಗಂಟೆ 11 ನಿಮಿಷ 37 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ ಬರ್ವಾಲ್, ತಮದೇ ರಾಷ್ಟ್ರೀಯ ದಾಖಲೆ ಮುರಿದರು.
ಜಪಾನ್‌ನ ಇಚಿಟಕಾ ಯಮಶಿತಾ 2:10:49 ಸಮಯದೊಂದಿಗೆ ಚಿನ್ನ ಗೆದ್ದರೆ, ಚೀನಾದ ಪೆಯಿಯು ಫೆಂಗ್ 2:12:13ರಲ್ಲಿ ಕಂಚಿನ ಪದಕ ಪಡೆದರು.ಹಿಮಾಚಲ ಪ್ರದೇಶದ 28 ವರ್ಷದ ಸೇನಾಪಡೆಯ ಅಥ್ಲೀಟ್ ಬರ್ವಾಲ್ ಅವರ ಬೆಳ್ಳಿ ಪದಕ ,ಏಷ್ಯನ್ ಗೇಮ್ಸೌಮ್ಯಾರಥಾನ್‌ನಲ್ಲಿ ಭಾರತಕ್ಕೆ 1982ರ ದೆಹಲಿ ಕ್ರೀಡಾಕೂಟದ ಬಳಿಕ ದೊರೆತ ಮೊದಲ ಪದಕವಾಗಿದೆ.
1951ರ ಮೊದಲ ಏಷ್ಯನ್ ಗೇಮ್ಸೌನಲ್ಲಿ ಛೋಟಾ ಸಿಂಗ್ ಚಿನ್ನ ಮತ್ತು ಸೂರತ್ ಸಿಂಗ್ ಮಥೂರ್ ಕಂಚು ಗೆದ್ದಿದ್ದರು. ಈ ಮೂಲಕ ಏಷ್ಯನ್ ಗೇಮ್ಸೌ ಮ್ಯಾರಥಾನ್‌ನಲ್ಲಿ ಪದಕ ಗೆದ್ದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಬರ್ವಾಲ್ ಪಾತ್ರರಾಗಿದ್ದಾರೆ.
ಈ ವರ್ಷವೇ ಮ್ಯಾರಥಾನ್‌ಗೆ ಕಾಲಿಟ್ಟ ಬರ್ವಾಲ್, ಏಪ್ರಿಲ್‌ನಲ್ಲಿ ರೋಟರ್‌ಡ್ಯಾಮ್ ಮ್ಯಾರಥಾನ್‌ನಲ್ಲಿ 2:11:58 ಸಮಯದೊಂದಿಗೆ ಶಿವನಾಥ್ ಸಿಂಗ್ ಅವರ 48 ವರ್ಷಗಳ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಈಗ 2:11:37ರಲ್ಲಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.ಮತ್ತೊಬ್ಬ ಭಾರತೀಯ ಕಾರ್ತಿಕ್ ಕರ್ಕೇರಾ 2:22:41 ಸಮಯದೊಂದಿಗೆ 17ನೇ ಸ್ಥಾನ ಪಡೆದರು.
