Homeರಾಜ್ಯಎಸ್‌‍ಎಸ್‌‍ಎಲ್‌ಸಿ ಅಂಕಪಟ್ಟಿ ತಿದ್ದುಪಡಿಗೆ ಅ.15 ಕಡೆ ದಿನ

ಎಸ್‌‍ಎಸ್‌‍ಎಲ್‌ಸಿ ಅಂಕಪಟ್ಟಿ ತಿದ್ದುಪಡಿಗೆ ಅ.15 ಕಡೆ ದಿನ

ಬೆಂಗಳೂರು,ಸೆ.28- ಎಸ್ಸೆಸ್ಸೆಲ್ಸಿ ಪರೀಕ್ಷೆ 1 ಮತ್ತು 2ರ ಉತ್ತೀರ್ಣ ಅಂಕಪಟ್ಟಿಗಳಲ್ಲಿನ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅ.15 ಕಡೆಯ ದಿನವಾಗಿದೆ. 2026ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ತಂದೆ-ತಾಯಿ ಹೆಸರು, ಜನ ದಿನಾಂಕ, ಲಿಂಗ ಮುಂತಾದ ಮಾಹಿತಿಗಳು ತಪ್ಪಾಗಿದ್ದಲ್ಲಿ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ ಮತ್ತೊಂದು ಅಂಕಪಟ್ಟಿ ಪಡೆಯಲು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅವಕಾಶ ನೀಡಿದೆ.

ಈಗಾಗಲೇ ಸರಬರಾಜಾಗಿರುವ ಅಂಕಪಟ್ಟಿಯಲ್ಲಿ ತಪ್ಪುಗಳಿದ್ದರೆ ನಿಯಮಾನುಸಾರ ಮಂಡಳಿಗೆ ಕಳುಹಿಸಿದ್ದಲ್ಲಿ ಪರಿಷ್ಕೃತ ಅಂಕಪಟ್ಟಿಯನ್ನು ನೀಡುವುದಾಗಿ ಮಂಡಳಿ ತಿಳಿಸಿದೆ. ಅಂಕಪಟ್ಟಿ ತಿದ್ದುಪಡಿಗೆ ಶಾಲಾ ಮುಖ್ಯೋಪಾಧ್ಯಾಯರು ಮಂಡಳಿಗೆ ಭೌತಿಕ ಅರ್ಜಿ ಸಲ್ಲಿಸಬೇಕು. ಆದರೆ ವಿದ್ಯಾರ್ಥಿಗಳು ನೇರವಾಗಿ ಮಂಡಳಿಗೆ ಅರ್ಜಿ ಸಲ್ಲಿಸುವಂತಿಲ್ಲ.

ಅಂಕಪಟ್ಟಿ ತಿದ್ದುಪಡಿಗೆ 1 ಸಾವಿರ ರೂ. ದಂಡ ಶುಲ್ಕವನ್ನು ಶಾಲಾ ಮುಖ್ಯ ಶಿಕ್ಷಕರೇ ಮಂಡಳಿಗೆ ಪಾವತಿಸಬೇಕು. ಶಾಲಾ ಮುಖ್ಯ ಶಿಕ್ಷಕರು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ತಿದ್ದುಪಡಿ ಅಂಕಪಟ್ಟಿ ಪಡೆಯಬಹುದು. ಆದರೆ ಇದು ಮೂಲ ಅಂಕಪಟ್ಟಿ ಆಗಿರುವುದಿಲ್ಲ.

ಅಂಕಪಟ್ಟಿಯಲ್ಲಿ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರ ಸಹಿ ಬದಲು ವಿಭಾಗೀಯ ಕಾರ್ಯದರ್ಶಿಗಳು/ಪದನಿಮಿತ್ತ ಸಹನಿರ್ದೇಶಕರ ಸಹಿ ನೀಡಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಮಂಡಳಿ ತಿಳಿಸಿದೆ.

RELATED ARTICLES
spot_img

Latest News