Homeರಾಜ್ಯಎಂಆರ್‌ಪಿಎಲ್‌‍ ಘಟಕದಲ್ಲಿ ಸ್ಫೋಟದ ಕುರಿತು ಉನ್ನತಮಟ್ಟದ ತನಿಖೆಗೆ ಸಿಎಂ ಸೂಚನೆ

ಎಂಆರ್‌ಪಿಎಲ್‌‍ ಘಟಕದಲ್ಲಿ ಸ್ಫೋಟದ ಕುರಿತು ಉನ್ನತಮಟ್ಟದ ತನಿಖೆಗೆ ಸಿಎಂ ಸೂಚನೆ

ಮಂಗಳೂರು, ಅ. 1- ಎಂಆರ್‌ಪಿಎಲ್‌‍ ಘಟಕದಲ್ಲಿ ಅಧಿಕ ಒತ್ತಡದಿಂದ ಸಂಭವಿಸಿದ ಆಕಸಿಕ ಸ್ಫೋಟದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸೂಚಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ನಿನ್ನೆ ಕೊಳ್ಳೇಗಾಲದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ನಂತರ ಮಂಗಳೂರಿಗೆ ಆಗಮಿಸಿ ಎಂಆರ್‌ಪಿಎಲ್‌ಗೆ ಭೇಟಿ ನೀಡಿದರು. ಸ್ಫೋಟ ಸಂಭವಿಸಿದ ಸ್ಥಳವನ್ನು ವೀಕ್ಷಿಸಿದ ಅವರು, ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸ್‌‍ ಅಧಿಕಾರಿಗಳು ಹಾಗೂ ಎಂಆರ್‌ಪಿಎಲ್‌‍ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ದುರ್ಘಟನೆಯ ಕುರಿತು ತನಿಖೆ ನಡೆಸಲು ದೆಹಲಿಯಿಂದ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಲಿದೆ. ನಂತರ ಸಚಿವರು ಆಸ್ಪತ್ರೆಗೆ ತೆರಳಿ, ಸ್ಫೋಟದಲ್ಲಿ ಮೃತಪಟ್ಟ ಮನೀಶ್‌ ಕರ್ಕೇರ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ.

ದುರಂತದಲ್ಲಿ ಮೃತಪಟ್ಟ ಮನೀಶ್‌ ಕರ್ಕೇರ ಅವರ ಕುಟುಂಬಕ್ಕೆ ಎಂಆರ್‌ಪಿಎಲ್‌‍ ವತಿಯಿಂದ ಗರಿಷ್ಠ ಪರಿಹಾರ ನೀಡುವಂತೆ ಹಾಗೂ ಅವರ ಸಹೋದರನಿಗೆ ಎಂಆರ್‌ಪಿಎಲ್‌ನಲ್ಲಿ ಖಾಯಂ ಉದ್ಯೋಗ ಕಲ್ಪಿಸುವಂತೆ ಸೂಚಿಸಿದ್ದೇನೆ ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದರು.

RELATED ARTICLES
spot_img

Latest News