ಬೆಂಗಳೂರು,ಅ.1-ಮನೆಗೆ ನುಗ್ಗಿ ವೃದ್ಧ ಮಹಿಳೆಯನ್ನು ಹೆದರಿಸಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ವ್ಯಕ್ತಿಯನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿ 2.17 ಲಕ್ಷ ನಗದು ಸೇರಿದಂತೆ 7.67 ಲಕ್ಷ ಮೌಲ್ಯದ 35 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಫ್ರೆಜರ್‌ಟೌನ್ ನಿವಾಸಿ ಶರವಣನ್ (43) ಬಂಧಿತ ಆರೋಪಿ.
ಕಾಕ್‌್ಸಟೌನ್ ನಿವಾಸಿಯಾಗಿರುವ ವೃದ್ಧ ಮಹಿಳೆಯು ಸೆ.9 ರಂದು ಮಧ್ಯಾಹ್ನ ಮನೆ ಸಮೀಪದ ಮಿನಿ ಬಜಾರ್‌ಗೆ ಹೋಗಿ ವಾಪಸ್ ಆಗುತ್ತಿದ್ದಾಗ ಆರೋಪಿ ಶರವಣನ್ ಹಿಂಬಾಲಿಸಿಕೊಂಡು ಅವರ ಮನೆವರೆಗೂ ಬಂದಿದ್ದಾನೆ.ವೃದ್ಧೆ ಬೀಗ ತೆಗೆದು ಮನೆಯೊಳಗೆ ಹೋಗುತ್ತಿದ್ದಂತೆ ಈತನೂ ಒಳ ನುಗ್ಗಿ ವೃದ್ಧೆಯನ್ನು ಹೆದರಿಸಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು.
ಈ ಬಗ್ಗೆ ವೃದ್ಧೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಟ್ಯಾನಿ ರೋಡ್ ಸರ್ಕಲ್ ಬಳಿ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ವಿಚಾರಣೆ ನಡೆಸಿದಾಗ ವೃದ್ಧೆ ಸರ ಅಪಹರಿಸಿರುವುದಾಗಿ ಹೇಳಿದ್ದಾನೆ. ಆ ಸರವನ್ನು ಆರ್‌ಟಿನಗರದ ಗಂಗಾನಗರದ ಜ್ಯೂವೆಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದು, ಬಂದ ಹಣದಲ್ಲಿ ಗೃಹಪಯೋಗಿ ವಸ್ತುಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾನೆ.
ಉಳಿದ ಹಣ ಹಾಗೂ ಮೂರು ಚಿನ್ನದ ತಾಳಿಯನ್ನು ಫ್ರೆಜರ್‌ಟೌನ್‌ನ ಎ.ಕೆ ಕಾಲೋನಿಯ ತನ್ನ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದಾನೆ.ಈತನ ಮಾಹಿತಿಯಂತೆ ಜ್ಯೂವೆಲರಿ ಅಂಗಡಿಯಿಂದ 32 ಗ್ರಾಂ ಚಿನ್ನದ ಗಟ್ಟಿ ಮತ್ತು ಆರೋಪಿಯ ಮನೆಯಿಂದ 2.17 ಲಕ್ಷ ನಗದು, ಮೂರು ಚಿನ್ನದ ತಾಳಿಗಳು ಹಾಗೂ ಗೃಹಪಯೋಗಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ಆನಂದ್ ನಾಯ್‌್ಕ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
