Homeರಾಜ್ಯ'ಉರ್ದು ಹಬ್ಬ' ಕುರಿತು ಪ್ರತಿಷ್ಠೆಯಾಗಲೀ ಅಥವಾ ಹಠವಾಗಲೀ ಇಲ್ಲ : ಸಚಿವ ಖಾದರ್‌

‘ಉರ್ದು ಹಬ್ಬ’ ಕುರಿತು ಪ್ರತಿಷ್ಠೆಯಾಗಲೀ ಅಥವಾ ಹಠವಾಗಲೀ ಇಲ್ಲ : ಸಚಿವ ಖಾದರ್‌

ಬೆಂಗಳೂರು, ಅ.1- ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬದ ಆಚರಣೆಗೆ ಸಂಬಂಧಪಟ್ಟಂತೆ ಆರಂಭದಲ್ಲಿ ಹೇಳಿಕೆ ನೀಡಿದ್ದೇನೆ. ಆದರೆ ಈ ವಿಚಾರವಾಗಿ ಯಾವುದೇ ಪ್ರತಿಷ್ಠೆಯಾಗಲೀ ಅಥವಾ ಹಠವಾಗಲೀ ಇಲ್ಲ ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಉರ್ದು ಭಾಷಾ ಅಕಾಡೆಮಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಭಾಂಗಣದಲ್ಲಿ ನೆರವೇರಿಸಲಾಗುತ್ತಿತ್ತು. ಉರ್ದು ಭಾಷೆ ಹಾಗೂ ಸಂಸ್ಕೃತಿಗೆ ಸಂಬಂಧಪಟ್ಟಂತೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಬಹಿರಂಗವಾಗಿ ಕಾರ್ಯಕ್ರಮ ನಡೆಸುವ ಸಾಧ್ಯತೆ ಬಗ್ಗೆ ಹೇಳಿಕೆ ನೀಡಿದ್ದೇನೆ. ಅದರೆ ಇದು ಅನುಷ್ಠಾನವಾಗಲೇಬೇಕೆಂಬ ಒತ್ತಾಯ ಇಲ್ಲ. ನಮಗೆ ಯಾವುದೇ ಪ್ರತಿಷ್ಠೆ ಇಲ್ಲ ಎಂದರು.

ಬಲಿಷ್ಠ ಭಾರತ, ವಿಶ್ವಾಸ ಭಾರತ ನಿರ್ಮಾಣವಾಗಬೇಕು. ಸೌಹಾದರ್ತೆ, ಏಕತೆ, ಭಾವೈಕ್ಯತೆಗಾಗಿ ನಾವು ಯಾವ ತ್ಯಾಗಕ್ಕಾದರೂ ಸಿದ್ಧ. ಎಂತಹ ಅವಮಾನವನ್ನಾದರೂ ಸಹಿಸಿಕೊಳ್ಳುತ್ತೇವೆ. ತಗ್ಗಿ-ಬಗ್ಗಿ ಹೊಂದಾಣಿಕೆ ಮಾಡಿಕೊಳ್ಳಲು ನಮಗೆ ಯಾವುದೇ ಮುಜುಗರ ಇಲ್ಲ ಎಂದರು.

ತಾವು ಹೇಳಿದಾಕ್ಷಣ ಕಾರ್ಯಕ್ರಮ ನಡೆದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಯಾವುದೇ ಯೋಜನೆ ಜಾರಿಗೊಳಿಸಿದರೂ ಓಲೈಕೆ ರಾಜಕಾರಣ ಎಂದು ಲೇವಡಿ ಮಾಡುತ್ತಾರೆ. ಹಿಂದೆ ಕಾಂಗ್ರೆಸ್‌‍ ಸರ್ಕಾರ ಜಾರಿಗೊಳಿಸಿದ್ದ ಶಾದಿಭಾಗ್ಯ ಯೋಜನೆಯನ್ನು ಇದೇ ರೀತಿ ಟೀಕಿಸಲಾಗಿತ್ತು. ಆದರೆ ಅದೇ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಿದಾಗ ಓಲೈಕೆ ಎನಿಸಿಕೊಳ್ಳುವುದಿಲ್ಲವೇ ಎಂದು ಪ್ರಶ್ನಿಸಿದರು. ಕೆಲವರಿಗೆ ವಿರೋಧ ಮಾಡುವುದೇ ಅನಿವಾರ್ಯವಾಗಿದೆ. ವಿರೋಧ ಪಕ್ಷಗಳಿಗೆ ತಮ ಅಸ್ತಿತ್ವ ಉಳಿಸಿಕೊಳ್ಳಲು ವಿರೋಧಿಸುವುದು ಬಹುಮುಖ್ಯ ಎಂದು ವ್ಯಂಗ್ಯವಾಡಿದರು.

RELATED ARTICLES
spot_img

Latest News