Homeರಾಷ್ಟ್ರೀಯರಾಮಮಂದಿರ ಸಿಬ್ಬಂದಿಗಳ ಸಂಪೂರ್ಣ ಪರಿಶೀಲನೆಗೆ ನಿರ್ಧಾರ

ರಾಮಮಂದಿರ ಸಿಬ್ಬಂದಿಗಳ ಸಂಪೂರ್ಣ ಪರಿಶೀಲನೆಗೆ ನಿರ್ಧಾರ

ಅಯೋಧ್ಯೆ, ಅ. 2 (ಪಿಟಿಐ)- ಅಯೋಧ್ಯೆಯ ರಾಮ ಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಯ ಸಂಪೂರ್ಣ ಪರಿಶೀಲನೆ ನಡೆಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ನಿರ್ಧರಿಸಿದೆ. ಭದ್ರತಾ ಕ್ರಮಗಳನ್ನು ಬಲಪಡಿಸುವ ಭಾಗವಾಗಿ ಪೊಲೀಸ್‌‍ ಪರಿಶೀಲನೆ, ನಡತೆ ಪ್ರಮಾಣಪತ್ರಗಳು ಮತ್ತು ಕುಟುಂಬದ ವಿವರವಾದ ಮಾಹಿತಿಯನ್ನು ಪಡೆಯ ಲಾಗುವುದು ಎಂದು ಮೂಲಗಳು ತಿಳಿಸಿವೆ.

ಟ್ರಸ್ಟ್‌ ತನ್ನ ಉದ್ಯೋಗಿಗಳ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಮಾಹಿತಿಯನ್ನೂ ಒಳಗೊಂಡಂತೆ ಸಮಗ್ರ ವಿವರಗಳನ್ನು ಕೋರಿದೆ. ಪೊಲೀಸ್‌‍ ಪರಿಶೀಲನೆ ಮತ್ತು ಪೊಲೀಸರು ನೀಡುವ ನಡತೆ ಪ್ರಮಾಣಪತ್ರಗಳು ಕಡ್ಡಾಯವಾಗಿರುತ್ತವೆ.

ಈ ವರ್ಷದ ಜೂನ್‌ನಲ್ಲಿ ದೇವಾಲಯ ದಲ್ಲಿ ಕಾಣಿಕೆಗಳ ಕಳ್ಳತನ ಪ್ರಕರಣ ಬೆಳಕಿಗೆ ಬಂದ ನಂತರ ಜಾರಿಗೆ ತರಲಾದ ಬಿಗಿಯಾದ ಭದ್ರತೆ ಮತ್ತು ಆಡಳಿತಾತ್ಮಕ ಕ್ರಮಗಳ ನಡುವೆಯೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಆರೋಪಿಗಳೆಲ್ಲರೂ ಪ್ರಸ್ತುತ ಜೈಲಿನಲ್ಲಿದ್ದು, ಕಳೆದ ವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 70,000 ಪುಟಗಳ ದೋಷಾರೋಪ ಪಟ್ಟಿಯನ್ನು (ಚಾರ್ಜ್‌ಶೀಟ್‌‍) ಸಲ್ಲಿಸಲಾಗಿದೆ.

ಕಳೆದ ತಿಂಗಳು ಅಧಿಕಾರ ವಹಿಸಿಕೊಂಡ ದೇವಾಲಯದ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ನಿವೃತ್ತ ಏರ್‌ ಮಾರ್ಷಲ್‌ ಜಿತೇಂದ್ರ ಮಿಶ್ರಾ ಅವರ ನೇತೃತ್ವದಲ್ಲಿ ಸಿಬ್ಬಂದಿ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ. ದೇವಾಲಯದ ಆಡಳಿತ ಮಂಡಳಿಯಲ್ಲಿಯೂ ಪ್ರಮುಖ ಪುನರ್ರಚನೆ ನಡೆದಿದ್ದು, ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹಾಗೂ ಟ್ರಸ್ಟ್‌ ಸದಸ್ಯರಾದ ಅನಿಲ್‌ ಮಿಶ್ರಾ ಮತ್ತು ಗೋಪಾಲ್‌ ರಾವ್‌ ಅವರನ್ನು ಅವರ ಜವಾಬ್ದಾರಿಗಳಿಂದ ಬಿಡುಗಡೆಗೊಳಿಸಲಾಗಿದೆ. ಟ್ರಸ್ಟ್‌ ಕೈಗೊಂಡಿರುವ ನಿರ್ಧಾರಗಳು ದೇವಾಲಯದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಸ್ವೀಕಾರಾರ್ಹ ವಾಗಿರುತ್ತವೆ ಎಂದು ಟ್ರಸ್ಟ್‌ ಸದಸ್ಯ ದಿನೇಂದ್ರ ದಾಸ್‌‍ ಹೇಳಿದರು.

RELATED ARTICLES
spot_img

Latest News