Friday, November 22, 2024
Homeರಾಜ್ಯಮೈತ್ರಿ ಧರ್ಮಕ್ಕೆ ಬದ್ಧರಾಗಿರುವಂತೆ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ

ಮೈತ್ರಿ ಧರ್ಮಕ್ಕೆ ಬದ್ಧರಾಗಿರುವಂತೆ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ

ಬೆಂಗಳೂರು, ಮಾ.26- ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ತತ್ವ, ಸಿದ್ಧಾಂತ ಬದ್ಧತೆಗೆ ಧಕ್ಕೆಯಾಗದ ರೀತಿಯಲ್ಲಿ ಮೈತ್ರಿಧರ್ಮ ಪಾಲನೆ ಮಾಡುವ ಮೂಲಕ ಪ್ರಚಾರ ಕೈಗೊಳ್ಳಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.ಈ ಸಂಬಂಧ ಸಲಹಾ ರೂಪದ ಮಾರ್ಗಸೂಚಿ ಪತ್ರವನ್ನು ಲೋಕಸಭಾ ಉಸ್ತುವಾರಿ ನಾಯಕರು, ಸಹ ನಾಯಕರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳಿಗೆ ಬರೆದಿದ್ದಾರೆ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ರ್ಪಧಿ ಸಲಿದ್ದಾರೆ. ಚುನಾವಣೆಯಲ್ಲಿ ಎರಡೂ ಪಕ್ಷಗಳು ರಾಷ್ಟ್ರೀಯ ಬದ್ಧತೆ ಮತ್ತು ಸುರಕ್ಷತೆಗಾಗಿ ಪರಸ್ಪರ ಬೆಂಬಲಿಸಬೇಕಾಗಿದೆ ಎಂದು ಹೇಳಿದ್ದಾರೆ.

ಪ್ರಚಾರ ಸಭೆಯಲ್ಲಿ ಎರಡೂ ಪಕ್ಷಗಳು ತಮ್ಮ ಪಕ್ಷದ ಚಿಹ್ನೆಗಳನ್ನು ಸಮ ಅಳತೆಯಲ್ಲಿ ಬಳಸಬೇಕು. ಸಾರ್ವಜನಿಕ ಸಭೆಗಳಲ್ಲಿ ಎರಡೂ ಪಕ್ಷಗಳ ಬಾವುಟವನ್ನು ಪ್ರದರ್ಶಿ ಬೇಕು. ಜೆಡಿಎಸ್ ಮತ್ತು ಬಿಜೆಪಿ ನಾಯಕರ ಭಾವಚಿತ್ರವನ್ನು ಭೇದ ವಿಲ್ಲದೆ ಉಪಯೋಗಿಸಬೇಕು ಎಂಬ ಸಲಹೆಯನ್ನು ಅವರು ಪತ್ರದಲ್ಲಿ ಮಾಡಿದ್ದಾರೆ.

ಸಭೆಗಳಲ್ಲಿ ಎರಡೂ ಪಕ್ಷಗಳ ಕಾರ್ಯ ಕರ್ತರು ತಮ್ಮತಮ್ಮ ಪಕ್ಷದ ಸಾಲುಗಳನ್ನು ಕಡ್ಡಾಯವಾಗಿ ಬಳಸಬೇಕು. ರಾಷ್ಟ್ರ ಮತ್ತು ರಾಜ್ಯಮಟ್ಟದ ಉಭಯ ಪಕ್ಷಗಳ ನಾಯಕರ ಸಾಧನೆಗಳನ್ನು ಬಳಸಿಕೊಳ್ಳಬೇಕು. ಮತದಾರರ ಮನವೊಲಿಸಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡುವಂತೆ ಪ್ರಯತ್ನಿಸಬೇಕು. ಒಂದು ವೇಳೆ ಪ್ರಚಾರ ಸಭೆಗಳಲ್ಲಿ ಗೊಂದಲ ಅಥವಾ ಕಠಿಣ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಪಕ್ಷದ ಕೇಂದ್ರ ಕಚೇರಿಗೆ ತಂದು ಪರಿಹರಿಸಿಕೊಳ್ಳಬೇಕು. ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ್ದಾರೆ.

ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ಗಳಲ್ಲಿ ಆಯೋಜಿಸುವ ಸಾರ್ವಜನಿಕ ಸಭೆ ಮತ್ತು ಪ್ರಚಾರ ಸಭೆಗಳಲ್ಲಿ ಎರಡೂ ಪಕ್ಷದ ನಾಯಕರು ಯಾವುದೇ ವಿವಾದಾತ್ಮಕ ಹೇಳಿಕೆಗಳಿಗೆ ಆಸ್ಪದ ನೀಡದೆ ಸಮನ್ವಯತೆಯಿಂದ ಚುನಾವಣೆ ನಡೆಸಬೇಕು. ಮೈತ್ರಿ ಅಭ್ಯರ್ಥಿಗಳ ಬಗ್ಗೆ ಯಾವುದೇ ಅಸಮಾಧಾನವನ್ನು ಯಾವುದೇ ಸಂದರ್ಭದಲ್ಲೂ ವ್ಯಕ್ತಪಡಿಸಬಾರದು.

ಜೆಡಿಎಸ್ ಕಾರ್ಯಕರ್ತರು ಸಮನ್ವಯತೆಗೆ ಒತ್ತು ನೀಡಬೇಕು. ಯಾವುದೇ ವ್ಯಕ್ತಿ ಸಮಾಜ ಅಥವಾ ಧರ್ಮನಿಂದನೆಗೆ ಅವಕಾಶ ನೀಡಬಾರದು. ಪಕ್ಷದ ಜನಪರ ಹೋರಾಟಗಳಾದ ಕನ್ನಡ, ಪ್ರಾದೇಶಿಕತೆ, ಜಾತ್ಯತೀತತೆ, ನೀರಾವರಿ ಮತ್ತು ರೈತಪರವಾದ ನಿಲುವುಗಳ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News