Friday, December 6, 2024
Homeರಾಜ್ಯಸಚಿವ ಶಿವರಾಜ್ ತಂಗಡಗಿ ಹೇಳಿಕೆ ಪರ-ವಿರೋಧದ ಚರ್ಚೆ

ಸಚಿವ ಶಿವರಾಜ್ ತಂಗಡಗಿ ಹೇಳಿಕೆ ಪರ-ವಿರೋಧದ ಚರ್ಚೆ

ಬೆಂಗಳೂರು,ಮಾ.26- ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕಿಚ್ಚು ಹಚ್ಚಿದ್ದು, ಪರ-ವಿರೋಧ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸುವಾಗ ಶಿವರಾಜ್ ತಂಗಡಗಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಆದರೂ ಕೆಲ ಯುವಕರು ಮೋದಿಯವರ ಅಭಿಮಾನಿಯಾಗಿದ್ದಾರೆ. ಮೋದಿ ಮೋದಿ ಎಂದು ಕೂಗುತ್ತಿರುತ್ತಾರೆ. ಅಂತವರ ಕಪಾಳಕ್ಕೆ ಬಾರಿಸಬೇಕು ಎಂದು ಶಿವರಾಜ್ ತಂಗಡಗಿ ಹೇಳಿಕೆ ನೀಡಿದ್ದರು.

ಬಿಜೆಪಿ ಇದನ್ನೇ ಬಳಸಿಕೊಂಡು ಅಲ್ಲಲ್ಲಿ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ನಾಯಕರು ತಂಗಡಗಿ ಯವರ ಬೆಂಬಲಕ್ಕೆ ನಿಂತಿದ್ದಾರೆ.2014 ರಿಂದಲೂ ಮೋದಿ ಮೋದಿ ಎಂಬ ಘೋಷಣೆಗಳು ಕಾಂಗ್ರೆಸ್ಸಿಗರ ಪಾಲಿಗೆ ತೀವ್ರ ಮುಜುಗರದ ಸಂಗತಿ ಯಾಗಿವೆ. ಕಾಂಗ್ರೆಸ್ ಕಾರ್ಯ ಕ್ರಮಗಳಿಗೆ ನುಗ್ಗುವ ಬಿಜೆಪಿ ಯುವ ಕಾರ್ಯಕರ್ತರು ಇದ್ದಕ್ಕಿದ್ದಂತೆ ಮೋದಿ ಮೋದಿ ಎಂದು ಕೂಗಿ ಇರಿಸು ಮುರಿಸು ಮಾಡುವುದು ಸಾಮಾನ್ಯವಾಗಿದೆ.

ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರಿದ್ದು, ಮೋದಿ ಅಭಿಮಾನಿಗಳ ಮೇಲೆ ತಿರುಗಿ ಬೀಳುವ ಆತಂಕದ ವಾತಾವರಣ ಬಹಳಷ್ಟು ಬಾರಿ ಕಂಡುಬಂದಿತ್ತು. ಆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕೆ ಹಿರಿಯ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರನ್ನು ತಡೆದಿದ್ದರು. ಹೀಗಾಗಿ ಹಲವು ಬಾರಿ ಮೋದಿ ಪರವಾದ ಘೋಷಣೆಗಳು ಮೊಳಗಿದರೂ ಕೂಡ ಎಲ್ಲಿಯೂ ಕಾಂಗ್ರೆಸ್ಸಿಗರು ತಿರುಗೇಟು ನೀಡಿದ ಉದಾಹರಣೆಗಳಿಲ್ಲ.

ಆದರೆ ಇದೇ ನೆಪದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಪ್ರಭಾವಿ ನಾಯಕರು ಭಾಗವಹಿಸಿದ್ದ ಕಾರ್ಯ ಕ್ರಮಗಳಲ್ಲೂ ಮೋದಿಪರವಾದ ಘೋಷಣೆಗಳನ್ನು ಕೂಗಿದ ಉದಾ ಹರಣೆಗಳಿವೆ. ಈ ರೀತಿ ಘೋಷಣೆ ಕೂಗುವವರಿಗೆ ಸ್ಥಳದಲ್ಲೇ ತಕ್ಕ ಪಾಠ ಕಲಿಸಬೇಕು ಎಂದು ಹಲವಾರು ಸಭೆಗಳಲ್ಲಿ ಚರ್ಚೆಯಾಗಿದೆ ಎಂದು ಮೂಲಗಳೂ ತಿಳಿಸಿವೆ.

ಆದರೆ ಮೋದಿ ಅಭಿಮಾನಿಗಳಿಗೆ ತತ್ಕ್ಷಣದ ಪ್ರತಿಕ್ರಿಯೆ ನೀಡಲು ಮುಂದಾದರೆ ಬಿಜೆಪಿ ಅದನ್ನು ರಾಜಕೀಯವಾಗಿ ಮತ್ತಷ್ಟು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಯಾರು, ಯಾವುದೇ ಘೋಷಣೆ ಕೂಗಿದರೂ ಪ್ರತಿಕ್ರಿಯಿಸಬಾರದೆಂದು ಹಿರಿಯ ನಾಯಕರು ತಮ್ಮ ಕಾರ್ಯಕರ್ತರಿಗೆ ತಿಳಿಹೇಳಿ ಸಮಾಧಾನ ಪಡಿಸಿದರು.

ಈ ರೀತಿಯ ಚರ್ಚೆಗಳು ಹಿರಿಯ ನಾಯಕರ ಸಮಾಧಾನ ಕಾಂಗ್ರೆಸ್ನಲ್ಲಿನ ಯುವಕಾರ್ಯಕರ್ತರ ಅಸಹನೆಗೆ ಕಾರಣವಾಗಿದೆ. ಶಿವರಾಜ್ ತಂಗಡಗಿ ನೀಡಿರುವ ಹೇಳಿಕೆ ಆ ಅಸಹನೆಯ ಒಂದು ಭಾಗ ಎಂಬ ಚರ್ಚೆಗಳು ನಡೆಯು ತ್ತಿವೆ. ಒಂದು ವೇಳೆ ಮೋದಿ ಪರವಾಗಿ ಘೋಷಣೆ ಕೂಗುವವರಿಗೆ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲೇ ಪ್ರತಿ ಕ್ರಿಯಿಸಲಾರಂಭಿಸಿದರೆ ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂಬ ಆತಂಕ ಹಿರಿಯ ನಾಯಕರನ್ನು ಈಗಲೂ ಕಾಡುತ್ತಿದೆ. ಶಿವರಾಜ ತಂಗಡಗಿ ಒಂದು ಹೆಜ್ಜೆ ಮುಂದೆ ಹೋಗಿ ಮೋದಿ ಎನ್ನುವವರ ಕಪಾಳಕ್ಕೆ ಬಾರಿಸಬೇಕು ಎಂಬ ಹೇಳಿಕೆ ಪ್ರಚೋದನಾಕಾರಿ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು ಸಿಕ್ಕಸಿಕ್ಕಲ್ಲಿ ಮತ್ತೆ ಮೋದಿ ಮೋದಿ ಎಂಬ ಘೋಷಣೆ ಕೂಗಲಾರಂಭಿಸಿದ್ದಾರೆ. ಯಾವುದು ನಡೆಯಬಾರದು ಎಂಬ ತಾಳ್ಮೆಯಲ್ಲಿ ಕಾಂಗ್ರೆಸ್ ನಾಯಕರು ಇಷ್ಟೂ ದಿನ ತಮ್ಮ ಪಕ್ಷದ ಕಾರ್ಯಕರ್ತರನ್ನು ಸಮಾ ಧಾನಪಡಿಸುತ್ತಿದ್ದರೋ ಅದಕ್ಕೆ ಸಂಪುಟ ಸಚಿವರೇ ಕುಮ್ಮಕ್ಕು ನೀಡಿದಂತಾಗಿದೆ.

RELATED ARTICLES

Latest News