ಜಯಪ್ರಕಾಶ್
ಜಪಾನ್ನಲ್ಲಿ ಸೆಪ್ಟೆಂಬರ್ 19 ರಿಂದ ಜರುಗಿದ ಏಷ್ಯನ್ ಗೇಮ್ಸೌಗೆ ಇಂದು ಅದ್ಧೂರಿ ತೆರೆ ಬೀಳಲಿದೆ. ಪ್ರಸಕ್ತ ಏಷ್ಯನ್ ಗೇಮ್ಸೌನಲ್ಲಿ ಹಿರಿಯರ ಅನುಭವ ಹಾಗೂ ಕಿರಿಯರ ಅಬ್ಬರವೂ ಜೋರಾಗಿದ್ದು, ಕೆಲವು ಸ್ಪರ್ಧೆಗಳಲ್ಲಿ ಅನುಭವಿ ಅಥ್ಲೀಟ್ಗಳನ್ನೂ ಮಣಿಸಿರುವ ಯುವ ತಾರೆಯರು ಪದಕಗಳನ್ನು ಗೆಲ್ಲುವ ಮೂಲಕ ಭವಿಷ್ಯದ ಆಶಾಕಿರಣಗಳಾಗಿ ರೂಪುಗೊಂಡಿದ್ದಾರೆ.ಜಪಾನ್ನ ಐಚಿ-ನಾಗೋಯಾಯಲ್ಲಿ ನಡೆದ ಏಷ್ಯನ್ ಗೇಮ್ಸೌನಲ್ಲಿ ಭಾರತದಿಂದ ಒಟ್ಟಾರೆ 495 ಕ್ರೀಡಾಪಟುಗಳು ಪಾಲ್ಗೊಂಡು, 36 ಕ್ರೆಡಾ ವಿಭಾಗಗಳಲ್ಲಿ ಒಟ್ಟು 85 ಪದಕ (21 ಚಿನ್ನ, 27 ಬೆಳ್ಳಿ ಮತ್ತು 37 ಕಂಚು)ಗಳನ್ನು ಗೆದ್ದುಕೊಂಡು ಭಾರತವು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದೆ.
ಅನುಭವಿ ಶೂಟರ್ ಮನುಭಾಕರ್, ಒಲಿಂಪಿಕ್ಸ್ ಬ್ಯಾಡಿಂಟನ್ ತಾರೆ ಪಿ.ವಿ.ಸಿಂಧು ಅವರು ಪದಕಗಳನ್ನು ಗೆಲ್ಲುವಿ ಎಡವಿದರೂ, ಹೊಸಬರು ಭಾರತಕ್ಕೆ ಪದಕದ ಚಿಂತೆ ಕಾಡದಂತೆ ತಮ ಚೊಚ್ಚಲ ಏಷ್ಯನ್ ಗೇಮ್ಸೌನಲ್ಲೇ ಹ್ಯಾಟ್ರಿಕ್ ಪದಕಗಳನ್ನು ಗೆಲ್ಲುವ ಮೂಲಕ ಗಮನ ಸೆಳೆದಿದ್ದಾರೆ. ಏಷ್ಯನ್ ಗೇಮ್ಸೌಗೆ ಭಾರತದಿಂದ ಮೊದಲ ಬಾರಿಗೆ ಪ್ರವೇಶಿಸಿದ 83 ಕ್ರೀಡಾಪಟುಗಳು (43 ಮಹಿಳೆಯರು ಮತ್ತು 40 ಪುರುಷರು) ಒಟ್ಟಾರೆ 41 ಪದಕಗಳನ್ನು ತಮದಾಗಿಸಿಕೊಂಡರು.
ದಾಖಲೆ ಬರೆದ ಕುಮ್ಕುಮ್:
ಭಾರತದ 17ರ ಪೋರಿ ಕುಮ್ಕುಮ್ ಅವರು ಬಿಲ್ಲುಗಾರಿಕೆ (ಆರ್ಚರಿ) ವಿಭಾಗದಲ್ಲಿ ಮೂರು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಚೊಚ್ಚಲ ಏಷ್ಯನ್ ಗೇಮ್ಸೌ ಅನ್ನು ಅವಿಸರಣೀಯವಾಗಿಸಿದ್ದಾರೆ. ಮಹಿಳೆಯರ ರಿಕರ್ವ್ ತಂಡದೊಂದಿಗೆ ಚಿನ್ನದ ಬೇಟೆ ಶುರುಮಾಡಿದ ಕುಮ್ ಕುಮ್, ನಂತರ ಮಿಕ್್ಸ್ಡ ವಿಭಾಗದಲ್ಲಿ ಧೀರಜ್ ಬೊಮದೇವರ ಜೊತೆಗೂಡಿ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದರು. ಶೂಟ್ ಆಫ್ನಲ್ಲಿ ದಕ್ಷಿಣ ಕೊರಿಯಾದ ಓ ಯೆಜಿನ್ರನ್ನು ಮಣಿಸಿ ಮತ್ತೊಂದು ಸ್ವರ್ಣ ಪದಕಕ್ಕೆ ಮುತ್ತಿಕ್ಕಿದರು.
ಶೂಟಿಂಗ್ನಲ್ಲಿ ನೀರೂ ಸಾಧನೆ:
ಚೊಚ್ಚಲ ಏಷ್ಯನ್ ಗೇಮ್ಸೌನಲ್ಲಿ ಕಾಣಿಸಿಕೊಂಡಾಗ ಸಹಜವಾಗಿಯೇ ಇರಬೇಕಾದ ಭಯವನ್ನು ದೂರವಿಟ್ಟ ಮಹಿಳಾ ಶೂಟರ್ ನೀರೂ ಧಂಡಾ ಅವರು ಕೂಡ ಎರಡು ಸ್ವರ್ಣ ಹಾಗೂ ಒಂದು ಬೆಳ್ಳಿ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಮಹಿಳೆಯರ ಟ್ರ್ಯಾಪ್ ವಿಭಾಗದಲ್ಲಿ ಬೆಳ್ಳಿ ಪದಕದೊಂದಿಗೆ ತಮ ಪಯಣ ಆರಂಭಿಸಿದ ನೀರೂ, ನಂತರ ಕಯಾನನ್ ಚೆನಾಯ್ರೊಂದಿಗೆ ಮಿಶ್ರ ಟ್ರ್ಯಾಪ್ನಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟರು. ಶೂಟಿಂಗ್ನಲ್ಲಿ ಏಷ್ಯನ್ ಗೇಮ್ಸೌ ಇತಿಹಾಸದಲ್ಲಿ ಎರಡು ಚಿನ್ನ , ಒಂದು ಬೆಳ್ಳಿ ಪದಕ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ದಾಖಲೆ ಬರೆದರು.
ಹಲವು ಪ್ರಥಮಗಳು
*75ಕೆಜಿ ಬಾಕ್ಸಿಂಗ್ನಲ್ಲಿ ಲವ್ಲೀನಾ ಬೊರ್ಗಿಹೈನ್ಗೆ ಮೊದಲ ಏಷ್ಯನ್ ಚಿನ್ನ.
*ಸೇಲಿಂಗ್ನಲ್ಲಿ ಭಾರತಕ್ಕೆ ಮೊದಲ ಪದಕ (ಕಂಚು) ತಂದುಕೊಟ್ಟ ನೇತ್ರಾ ಕುಮನನ್.
*ಏಷ್ಯನ್ ಗೇಮ್ಸೌನಲ್ಲಿ ಗಾಲ್ಫ್ ವಿಭಾಗದಲ್ಲಿ ಚಿನ್ನ ಗೆದ್ದ ಪ್ರಣವಿ.
*ಮಹಿಳೆಯರ ವೈಯಕ್ತಿಕ ರಿಕವರಿಯಲ್ಲಿ ಕುಮ್ಕುಮ್ ಮುಹೂದ್ಗೆ ಚಿನ್ನದ ಪದಕ.
*ಏಷ್ಯನ್ ಗೇಮ್ನೌಲ್ಲಿ ಶೆಫಾಲಿ ವರ್ಮಾ ಶತಕ ಗಳಿಸಿದ್ದಾರೆ.
ಚೊಚ್ಚಲ ಏಷ್ಯನ್ ಗೇಮ್ಸೌನಲ್ಲಿ 2ಕ್ಕಿಂತ ಹೆಚ್ಚು ಪದಕ ಗೆದ್ದ ಭಾರತೀಯರು
*ಪ್ರತೀಕಾ ಪ್ರದೀಪ್- ಆರ್ಚರಿ-2 ಚಿನ್ನ
*ಶಾಹಿಲ್ ರಾಜೇಶ್- ಆರ್ಚರಿ-2 ಚಿನ್ನ
*ತಿರುಮುರು ಗಣೇಶ್ ಮಣಿರತ್ನಂ- ಆರ್ಚರಿ- 1 ಚಿನ್ನ, 1 ಕಂಚು
*ಹಿಮಾಂಶು ಧಿಲ್ಲೋನ್- ಶೂಟಿಂಗ್- 2 ಬೆಳ್ಳಿ
*ವಿದಾರ್ಶ ಕೆ. ವಿನೋದ್- 2 ಬೆಳ್ಳಿ
ವಿವಿಧ ಕ್ಷೇತ್ರಗಳಿಂದ ಹೊಸಬರು ಗೆದ್ದ ಪದಕಗಳು:
*ಶೂಟಿಂಗ್: 13
*ಅಥ್ಲೆಟಿಕ್ಸ್ : 14
*ಬಿಲ್ಲುಗಾರಿಕೆ: ಪದಕ ಗೆದ್ದವರಲ್ಲಿ 9 ಹೊಸಬರು.
*ಮಹಿಳಾ ಕ್ರಿಕೆಟ್: ಚಿನ್ನದ ಪದಕ ಗೆದ್ದ ತಂಡದಲ್ಲಿ 10 ಹೊಸಬರು.
*ಕಬಡ್ಡಿ: ಪುರುಷರ, ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗೆಲುವು, 15 ಹೊಸಮುಖಗಳು.
ಅಥ್ಲೆಟಿಕ್ಸ್ ನಲ್ಲೂ ಪದಕ ಗೆದ್ದ ಚೊಚ್ಚಲ ಸ್ಪರ್ಧಿಗಳು:
*ಯಶ್ವೀರ್ ಸಿಂಗ್: ಜಾವೆಲಿನ್- ಬೆಳ್ಳಿ ಪದಕ.
*ಕಿರಣ್ ಪಹಲ್: ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಚಿನ್ನ ಮತ್ತು ಮಿಶ್ರ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದ ತಂಡದ ಸದಸ್ಯೆ ಆಗಿದ್ದಾರೆ.
