ಬೆಂಗಳೂರು, ಅ.4- ನಕಲಿ ಔಷಧಿ ದಂಧೆಯ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಬಂಧನದ ಬೆನ್ನಲ್ಲೇ ಮತ್ತಷ್ಟು ಆತಂಕಕಾರಿ ವಿಚಾರಗಳು ಬೆಳಕಿಗೆ ಬರತೊಡಗಿವೆ. ಔಷಧಿಯ ಒರ್ಜಿನಲ್ ಲೇಬಲ್ ತರುವುದಕ್ಕಾಗಿಯೇ ಪ್ರಶಾಂತ್ ಟರ್ಕಿಗೆ ಹತ್ತಾರು ಬಾರಿ ಹೋಗಿ ಬಂದಿದ್ದಾನೆ. ಅಲ್ಲದೆ, ಟರ್ಕಿಗೆ ಹೋಗಿದ್ದ ಸಂದರ್ಭದಲ್ಲಿ ಈತ, ಟರ್ಕಿಯ ನೆರೆಹೊರೆಯ ದೇಶಗಳಿಗೆ ಭೇಟಿ ನೀಡಿತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ.
ವಿದೇಶದಿಂದ ಒರ್ಜಿನಲ್ ಲೇಬಲ್‌ಗಳನ್ನು ತಂದು ನಕಲಿ ಔಷಧಿ ಬಾಟಲ್‌ಗೆ ಹಾಕಿ ಒರ್ಜಿನಲ್ ಔಷಧದ ಜೊತೆಯಲ್ಲಿ ನಕಲಿ ಔಷಧಿಗಳನ್ನು ಸೇರಿಸಿ ಸರಬರಾಜು ಮಾಡುತ್ತಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಮತ್ತೊಬ್ಬ ಪ್ರಮುಖ ಆರೋಪಿ ವಿರೇಶ್ ಜೈನ್ ಜೊತೆಗೂಡಿ ಈತ ವಾರ್ಷಿಕವಾಗಿ ಸುಮಾರು 15 ಕೋಟಿ ರೂ. ನಷ್ಟು ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದು ಬಂದಿದೆ.
