Homeರಾಜ್ಯದಸರಾಗೆ ವಿಶೇಷ ಮೆರುಗು ನೀಡಲಿವೆ ಭಾರತೀಯ ರಕ್ಷಣಾ ಪಡೆಗಳು

ದಸರಾಗೆ ವಿಶೇಷ ಮೆರುಗು ನೀಡಲಿವೆ ಭಾರತೀಯ ರಕ್ಷಣಾ ಪಡೆಗಳು

ಮೈಸೂರು, ಅ. 6 ವಿಶ್ವವಿಖ್ಯಾತ ಮೈಸೂರು ದಸರಾ-2026ರ ಸಂಭ್ರಮಕ್ಕೆ ಭಾರತೀಯ ರಕ್ಷಣಾ ಪಡೆಗಳು ವಿಶೇಷ ಮೆರುಗು ನೀಡಲಿವೆ. ದೇಶದ ಸೇನಾ ಶಕ್ತಿ, ಶೌರ್ಯ, ಸೇವೆ ಮತ್ತು ದೇಶಭಕ್ತಿಯ ಪ್ರತೀಕವಾಗಿ ಮೂರು ಪಡೆಗಳ ವಿವಿಧ ಕಾರ್ಯಕ್ರಮಗಳು ಈ ಬಾರಿಯ ಉತ್ಸವದಲ್ಲಿ ಗಮನ ಸೆಳೆಯಲಿವೆ.

ಭಾರತೀಯ ವಾಯುಪಡೆಯ ಪ್ರತಿಷ್ಠಿತ ಸೂರ್ಯಕಿರಣ್‌ ಏರೋಬ್ಯಾಟಿಕ್‌ ತಂಡ ಅ.18ರಿಂದ 20ರವರೆಗೆ ಮೈಸೂರಿನ ಆಕಾಶದಲ್ಲಿ ಸಾಹಸಮಯ ವೈಮಾನಿಕ ಪ್ರದರ್ಶನ ನೀಡಲಿದೆ. ಸೂರ್ಯಕಿರಣ್‌ ತಂಡದ ವೈಮಾನಿಕ ಕಸರತ್ತುಗಳು ದಸರಾ ಉತ್ಸವಕ್ಕೆ ಮತ್ತಷ್ಟು ಆಕರ್ಷಣೆ ಮತ್ತು ರೋಮಾಂಚನ ನೀಡಲಿವೆ.

ಇದರೊಂದಿಗೆ ಮೂರು ರಕ್ಷಣಾ ಪಡೆಗಳನ್ನು ಪ್ರತಿನಿಧಿಸುವ ವಿಶೇಷ ಸ್ಥಬ್ಧಚಿತ್ರಗಳು ದಸರಾ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳಲಿದ್ದು, ಸೈನಿಕರ ಶೌರ್ಯ, ಸೇವಾ ಮನೋಭಾವ ಮತ್ತು ದೇಶಸೇವೆಯ ಸಂದೇಶವನ್ನು ಜನರಿಗೆ ಪರಿಚಯಿಸಲಿವೆ.

ಮೈಸೂರು ದಸರಾ ಉತ್ಸವದಲ್ಲಿ ರಕ್ಷಣಾ ಪಡೆಗಳು ಭಾಗವಹಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿ ಸಹಕಾರ ನೀಡಿದ ರಕ್ಷಣಾ ಸಚಿವರಿಗೆ ಸರ್ಕಾರ ಕೃತಜ್ಞತೆ ಸಲ್ಲಿಸಿದೆ. ಕರ್ನಾಟಕದ ಸಂಸ್ಕೃತಿ, ಪರಂಪರೆ ಮತ್ತು ಜನರ ಸಂಭ್ರಮವನ್ನು ಪ್ರತಿಬಿಂಬಿಸುವ ಮೈಸೂರು ದಸರಾ ಈ ಬಾರಿ ಇನ್ನಷ್ಟು ವೈಭವ, ವೈವಿಧ್ಯ ಮತ್ತು ವಿಶೇಷ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

RELATED ARTICLES
spot_img

Latest News